ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನೃತ್ಯೋತ್ಕ್ರಮಣದಲ್ಲಿ ಕುಂದಾಪುರದ ನೃತ್ಯವಸಂತ ನೃತ್ಯಾಲಯದ ಕಲಾವಿದರಿಂದ ನೃತ್ಯ ಪ್ರದರ್ಶನ

0

ಪುತ್ತೂರು: ಇಲ್ಲಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸಿದ ನೂತನ ನೃತ್ಯೋತ್ಸವ ‘ನೃತ್ಯೋತ್ಕ್ರಮಣ’ದಲ್ಲಿ ಕುಂದಾಪುರದ ನೃತ್ಯವಸಂತ ನೃತ್ಯಾಲಯದ ಕಲಾವಿದರಿಂದ ಭರತನಾಟ್ಯ ನೃತ್ಯ ಪ್ರದರ್ಶನ ಜು. 3ರಂದು ಸಂಜೆ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಇ.ಡಿ ವಿಶೇಷ ಸರಕಾರಿ ಅಭಿಯೋಜಕ ನ್ಯಾಯವಾದಿ ಮಹೇಶ್ ಕಜೆ ಹಾಗೂ ಕಲಾವಿದೆ ಹಾಗು ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯೆ ವೀಣಾ ತಂತ್ರಿಯವರು ಅಭ್ಯಾಗತರಾಗಿ ಆಗಮಿಸಿದ್ದರು. ಗುರು ಪ್ರವಿತ ಅಶೋಕ್‌ರವರ ನಿರ್ದೇಶನದಲ್ಲಿ ಸುಮಾರು 2 ಗಂಟೆಗಳ ಕಾಲ ವರ್ಣರಂಜಿತ ಸಮೂಹ ಭರತನಾಟ್ಯ ನಡೆದು ನೆರೆದ ಕಲಾಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್ ಹಾಗೂ ಸಂಚಾಲಕರಾದ ಶಶಿಪ್ರಭ ಕಾರ್ಯಕ್ರಮವನ್ನು ಸಂಯೋಜಿಸಿದರು. ತೇಜಸ್ವಿ ಅಂಬೆಗಲ್ಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here