ಕರ್ನಾಟಕ ಪತ್ರಕರ್ತರ ಸಂಘದಿಂದ ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ, ಸೈಬರ್ ಕ್ರೈಂ ಮಾಹಿತಿ ಕಾರ್ಯಾಗಾರ

0

  • ಸೋಷಿಯಲ್ ಮೀಡಿಯಾ ದುರುಪಯೋಗದಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ-ಮಠಂದೂರು
  • ಕೊರೋನಾ ಸಂದರ್ಭದಲ್ಲಿ ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ – ಶಶಿಕುಮಾರ್ ರೈ
  • ಪುತ್ತೂರು ಕ್ಷೇತ್ರ ಸಮಾಜಕ್ಕೆ ಅನೇಕ ಪತ್ರಕರ್ತರನ್ನು ಕೊಟ್ಟಿದೆ – ಡಾ| ವರದರಾಜ ಚಂದ್ರಗಿರಿ
  • ಪತ್ರಕರ್ತರಿಗೆ, ಮಾಧ್ಯಮಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ – ಸುದೇಶ್ ಕುಮಾರ್
  • ಮುಂಜಾಗರೂಕತೆಯೇ ಸೈಬರ್ ಕ್ರೈಂ ತಡೆಗೆ ಉತ್ತಮ ಪರಿಹಾರ – ಸವಿತ್ರ್ ತೇಜ್
  • ವರದಿಗಾರಿಕೆಯ ಜೊತೆಗೆ ಸಮಾಜದಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದೇ ವೆ -ಯೂಸುಫ್ ರೆಂಜಲಾಡಿ

ಪುತ್ತೂರು: ಮೊಬೈಲ್ ಬಂದ ಬಳಿಕ ನಾವು ಸೋಷಿಯಲ್ ಮೀಡಿಯಾಗಳ ದಾಸರಾಗುತ್ತಿದ್ದೇವೆ. ಸಮಾಜದಲ್ಲಿ ಒಳಿತನ್ನು ಮಾಡಬೇಕಾದ ಸೋಷಿಯಲ್ ಮೀಡಿಯಾ ವ್ಯಕ್ತಿ ಶೋಷಣೆ, ಮತೀಯ ಸಂಘರ್ಷಕ್ಕೆ ಕಾರಣವಾಗುತ್ತಿರುವುದು ದುರದೃಷ್ಟಕರ. ಉತ್ತಮ ಸಮಾಜ ನಿರ್ಮಾಣದತ್ತ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಸಹಯೋಗದಲ್ಲಿ ಬೆಟ್ಟಂಪಾಡಿ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಸೈಬರ್ ಕ್ರೈಂ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಮಾಜಿಕ ಜೀವನದಲ್ಲಿ ಪ್ರತಿಯೊಬ್ಬರೂ `ನನ್ನ ಹಕ್ಕು ಕರ್ತವ್ಯ ಮತ್ತು ಇತರರ ಹಕ್ಕು ಕರ್ತವ್ಯದ ರಕ್ಷಣೆಯ ಜವಾಬ್ದಾರಿಯನ್ನು ಅರಿತಾಗ ಸಮಾಜದಲ್ಲಿ ಅನಾಹುತ ತಪ್ಪಿಸಬಹುದಾಗಿದೆ. ಪತ್ರಕರ್ತನಾದವನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮಾತ್ರವಲ್ಲದೇ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಪತ್ರಿಕಾ ರಂಗದ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಕಾರಣ ನಾಗರಿಕ ಸಮಾಜ ಉತ್ತಮವಾಗಿ ಬೆಳೆಯುತ್ತದೆ ಎಂದ ಶಾಸಕರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿಯೇ ತಮ್ಮ ಜೀವನಕ್ಕೆ ಒಳಿತು ಕೆಡುಕನ್ನು ತಿಳಿಯುವ ಪ್ರಬುದ್ಧತೆಯನ್ನು ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಕೊರೋನಾ ಸಂದರ್ಭ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ- ಶಶಿಕುಮಾರ್ ರೈ: ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ `ಪತ್ರಕರ್ತನ ಸಂದೇಶ ಇಡೀ ಸಮಾಜವನ್ನು ಬೆಳೆಸುತ್ತದೆ. ವ್ಯಕ್ತಿಯೊಬ್ಬನಲ್ಲಿ ಉತ್ತಮ ವ್ಯಕ್ತಿತ್ವ ಬೆಳೆದು ಅದು ಸಮಾಜಕ್ಕೆ ಪ್ರಯೋಜನವಾಗುವಲ್ಲಿ ಪತ್ರಿಕೆ ಮತ್ತು ಪತ್ರಕರ್ತನ ಸಂದೇಶ ಮಹತ್ವದ್ದಾಗಿದೆ. ಕೊರೋನಾದಂತಹ ಸಂಕಷ್ಟ ಕಾಲದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಪತ್ರಕರ್ತರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಪುತ್ತೂರು ಕ್ಷೇತ್ರ ಸಮಾಜಕ್ಕೆ ಅನೇಕ ಪತ್ರಕರ್ತರನ್ನು ಕೊಟ್ಟಿದೆ-ಡಾ| ವರದರಾಜ ಚಂದ್ರಗಿರಿ: ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿಯವರು ಮಾತನಾಡಿ ಪುತ್ತೂರು ಉಪ್ಪಿನಂಗಡಿ ಪರಿಸರ ನಮ್ಮ ರಾಜ್ಯಕ್ಕೆ ಅನೇಕ ಪತ್ರಕರ್ತರನ್ನು ನೀಡಿದ ಊರಾಗಿದೆ. ಪತ್ರಿಕಾರಂಗ ಅನ್ನುವುದು ಪ್ರಿಂಟ್ ಮೀಡಿಯಾ, ದೃಶ್ಯ ಮಾಧ್ಯಮ ಮಾತ್ರವಲ್ಲದೇ ಅದರಾಚೆಗೆ ಅನೇಕ ಅವಕಾಶಗಳನ್ನು ನೀಡುವ ಕ್ಷೇತ್ರವಾಗಿದೆ. ತಂತ್ರಜ್ಞಾನದ ಹಲವು ಸಾಧ್ಯತೆಗಳನ್ನು ತೆರೆದುಕೊಟ್ಟ ಕ್ಷೇತ್ರವೂ ಆಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕಾ ಕ್ಷೇತ್ರದಲ್ಲಿಯೂ ಅನೇಕ ಬೆಳವಣಿಗೆಗೆಳು ಆಗಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸುದ್ದಿ ಬಿಡುಗಡೆ ಪತ್ರಿಕೆ ಅನೇಕ ಉದಯೋನ್ಮುಖ ಪತ್ರಕರ್ತರನ್ನು ಸಮಾಜಕ್ಕೆ ಕೊಟ್ಟಿರುವುದರ ಫಲವಾಗಿ ಪುತ್ತೂರು ಉಪ್ಪಿನಂಗಡಿ ಭಾಗದ ಅನೇಕ ಮಂದಿ ಇಂದು ರಾಜ್ಯದ ವಿವಿಧ ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಾ| ವರದರಾಜ ಚಂದ್ರಗಿರಿ ಹೇಳಿದರು.

ಪತ್ರಕರ್ತರಿಗೆ, ಮಾಧ್ಯಮಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ- ಸುದೇಶ್ ಕುಮಾರ್: ಕರ್ನಾಟಕ ಪತ್ರಕರ್ತರ ಸಂಘದ ದ.ಕ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್‌ರವರು ಮಾತನಾಡಿ ಸೋಷಿಯಲ್ ಮೀಡಿಯಾಗಳು ಬಂದ ಬಳಿಕ ನಮ್ಮ ಪ್ರಿಂಟ್ ಮೀಡಿಯಾ ಮತ್ತು ದೃಶ್ಯ ಮೀಡಿಯಾಗಳ ಜವಾಬ್ದಾರಿ ಹೆಚ್ಚಿದೆ. ಅದರಲ್ಲಿ ಪ್ರಕಟವಾದುದರ ಸತ್ಯಾಸತ್ಯತೆಯನ್ನು ಸಮಾಜಕ್ಕೆ ನಾವೇ ತಿಳಿಸಬೇಕಾಗುತ್ತದೆ. ಪತ್ರಕರ್ತರಾದವರಿಗೆ ಹೆಚ್ಚಿನ ಜವಾಬ್ದಾರಿಯಿದ್ದು ಸಮಾಜವನ್ನು ತಿದ್ದುವ ತಾಕತ್ತು ಪತ್ರಕರ್ತರಲ್ಲಿರುತ್ತದೆ ಹಾಗಾಗಿ ವಿದ್ಯಾರ್ಥಿಗಳೂ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ವರದಿಗಾರಿಕೆಯ ಜೊತೆಗೆ ಸಮಾಜದಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ-ಯೂಸುಫ್ ರೆಂಜಲಾಡಿ: ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ ಪತ್ರಿಕಾ ಮಾಧ್ಯಮ ರಂಗದಲ್ಲಿ ಕೆಲಸ ನಿರ್ವಹಿಸುವವರು ಅನೇಕ ಸವಾಲುಗಳ ಮಧ್ಯೆ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಕೇವಲ ವರದಿಗಾರಿಕೆ ಮಾತ್ರವಲ್ಲದೇ ಸಮಾಜಕ್ಕೆ ಒಂದಷ್ಟು ಉತ್ತಮ ಜಾಗೃತಿ ಮೂಡಿಸುವ ಉzಶದಿಂದ ಸೈಬರ್ ಅಪರಾಧ, ಶೈಕ್ಷಣಿಕ ಮಾಹಿತಿ, ಪರಿಸರ ಜಾಗೃತಿಯಂತಹ ಅನೇಕ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ನಾವು ನಡೆಸಿಕೊಂಡು ಬಂದಿzವೆ ಎಂದು ಹೇಳಿದರು.

ಕರ್ನಾಟಕ ಪತ್ರಕರ್ತರ ಸಂಘದ ಬೆಂಗಳೂರು ಘಟಕದ ಕನ್ವೀನರ್ ದತ್ತಾತ್ರೇಯ ಹೆಗ್ಡೆ, ಬಂಟ್ವಾಳ ತಾಲೂಕು ಕನ್ವೀನರ್ ಲತೀಫ್ ನೇರಳಕಟ್ಟೆ, ಉದ್ಯಮಿ ರಾಜೇಶ್ ರೈ ಪರ್ಪುಂಜ, ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಉಮಾಪ್ರಸಾದ್ ರೈ ನಡುಬೈಲು, ಕಾಲೇಜಿನ ಗ್ರಂಥಪಾಲಕ ರಾಮ ಕೆ, ಕರ್ನಾಟಕ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಸದಸ್ಯರಾದ ಫಾರೂಕ್ ಶೇಖ್ ಮುಕ್ವೆ, ತಿಲಕ್ ರೈ ಕುತ್ಯಾಡಿ, ಶರತ್ ಕುಮಾರ್ ಪಾರ, ರಾಜೇಶ್ ಎಂ.ಎಸ್., ಶಿವಕುಮಾರ್ ಈಶ್ವರಮಂಗಲ, ಪ್ರಶಾಂತ್ ಮಿತ್ತಡ್ಕ, ಮೋಹನ್ ಶೆಟ್ಟಿ ಉರುವಾಲು, ಗಂಗಾಧರ್ ನಿಡ್ಪಳ್ಳಿ , ಪ್ರಜ್ವಲ್‌   ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಹರ್ಷಿತಾ ಎಮ್, ದೀಕ್ಷಾ ಮತ್ತು ಶ್ರಾವ್ಯ ಟಿ ಪ್ರಾರ್ಥಿಸಿದರು. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಪ್ರ.ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಸ್ವಾಗತಿಸಿದರು. ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ| ಹರಿಪ್ರಸಾದ್ ಎಸ್ ವಂದಿಸಿದರು. ವಿದ್ಯಾರ್ಥಿನಿ ಅನುಪಮಾ ನಿರೂಪಿಸಿದರು. ದೀಕ್ಷಾ ಸಹಕರಿಸಿದರು.

ಮುಂಜಾಗರೂಕತೆಯೇ ಸೈಬರ್ ಕ್ರೈಂ ತಡೆಗೆ ಪರಿಹಾರ- ಸವಿತ್ರ್ ತೇಜ್

ಸಂಪನ್ಮೂಲ ವ್ಯಕ್ತಿಯಾಗಿ ಸೈಬರ್ ಅಪರಾಧಗಳ ಕುರಿತಾದ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟ ದ.ಕ. ಜಿಲ್ಲಾ `ಸೆನ್’ ಪೊಲೀಸ್ ಸ್ಟೇಷನ್‌ನ ಇನ್ಸ್ಪೆಕ್ಟರ್ ಸವಿತ್ರ್ ತೇಜ್‌ರವರು ಮೊಬೈಲ್ ಮೂಲಕವೇ ಅನೇಕ ಅಪರಾಧಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದ್ದು ವಿವಿಧ ರೀತಿಯ ಆನ್‌ಲೈನ್ ವಂಚನೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ವಂಚನೆ ಮಾಡಿ ದುಡ್ಡು ಮಾಡುವ ತಂಡ ಸಕ್ರಿಯವಾಗಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ಸಾಮಾಜಿಕ ತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಕಿವಿಮಾತು ಹೇಳಿದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಲಂಚ ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞೆ

 

 

LEAVE A REPLY

Please enter your comment!
Please enter your name here