ರೋಟರಿ ಕ್ಲಬ್ ಪುತ್ತೂರು ಸ್ವರ್ಣ; ಅಧ್ಯಕ್ಷ: ವೆಂಕಟ್ರಮಣ ಕಳುವಾಜೆ, ಪ್ರಧಾನ ಕಾರ್ಯದರ್ಶಿ: ಸುರೇಶ್ ಪಿ, ವಲಯ ಸೇನಾನಿ: ಸೆನೋರಿಟ ಆನಂದ್, ಕೋಶಾಧಿಕಾರಿ: ಸನತ್ ಕುಮಾರ್ ರೈ

0

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ಪುತ್ತೂರು ಸಿಟಿ ಆಸ್ಪತ್ರೆ ಎದುರುಗಡೆಯ ಮಿತ್ತಳಿಕೆ ಆರ್ಕೇಡ್‌ನಲ್ಲಿ ಬಾಲಾಜಿ ಪೈಂಟ್ಸ್ ಉದ್ಯಮವನ್ನು ನಡೆಸುತ್ತಿರುವ ವೆಂಕಟ್ರಮಣ ಕಳುವಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಪಿ, ಕೋಶಾಧಿಕಾರಿಯಾಗಿ ಸನತ್ ಕುಮಾರ್ ರೈ ಕುಂಜಾಡಿರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ಸುಂದರ್ ರೈ ಬಲ್ಕಾಡಿ, ಜೊತೆ ಕಾರ್ಯದರ್ಶಿಯಾಗಿ ದೇವದಾಸ್ ಪಿ, ಸಾರ್ಜಂಟ್ ಎಟ್ ಆರ್ಮ್ಸ್ ಅಶೋಕ್ ಆಚಾರ್ಯ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಪಬ್ಲಿಕ್ ಇಮೇಜ್ ಪ್ರವೀಣ್ ಕುಮಾರ್ ರೈ, ನಿರ್ದೇಶಕರುಗಳಾಗಿ ಕ್ಲಬ್ ಸರ್ವಿಸ್‌ನ ಆನಂದ ಮೂವಪ್ಪು, ವೊಕೇಶನಲ್ ಸರ್ವಿಸ್‌ನ ರಾಮಣ್ಣ ರೈ, ಕಮ್ಯೂನಿಟಿ ಸರ್ವಿಸ್‌ನ ಸುನಿಲ್ ಜಾಧವ್, ಇಂಟರ್‌ನ್ಯಾಷನಲ್ ಸರ್ವಿಸ್‌ನ ರೋಶನ್ ರೈ ಬನ್ನೂರು, ಯೂತ್ ಸರ್ವಿಸ್‌ನ ದೀಪಕ್ ಬೊಳ್ವಾರ್, ಚೇರ್‌ಮ್ಯಾನ್‌ಗಳಾಗಿ ಉದಯ ಆಚಾರ್ಯ(ಪಲ್ಸ್ ಪೊಲೀಯೊ), ಯಶವಂತ ಗೌಡ ಕಾಂತಿಲ(ಟಿಆರ್‌ಎಫ್), ದೀಪಕ್ ಮಿನೇಜಸ್(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ವಿಜಯ್ ಡಿ’ಸೋಜ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಸಂಧ್ಯಾ ಬೈಲಾಡಿ(ಟೀಚ್), ವೀರಾ ರೇಶ್ಮಾ ಡಿ’ಸೋಜ(ವಿನ್ಸ್), ಜಯಪ್ರಕಾಶ್ ಜೈನರಗುರಿ(ವೆಬ್), ಮೋಹನ್ ಗೌಡ ನೆಲಪ್ಪಾಲ್(ಸಿಎಲ್‌ಸಿಸಿ), ಎ.ಬಾಬು ಗೌಡ(ವಾಟರ್ ಆಂಡ್ ಸ್ಯಾನಿಟೇಶನ್)ರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರ ಪರಿಚಯ:

ಕಡಬ ತಾಲೂಕು ಕಾಮಣ ಗ್ರಾಮದ ಕಳುವಾಜೆ ಸೋಮಪ್ಪ ಗೌಡ ಬಾಳಕ್ಕ ದಂಪತಿಗಳ 6ನೇ ಮಗನಾಗಿ ಜನಿಸಿದ ವೆಂಕಟ್ರಮಣ ಕಳುವಾಜೆರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾರ್ಯಬೈಲು ಮತ್ತು ಬೆಳಂದೂರು ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು ಪುತ್ತೂರು ಇಲ್ಲಿ ಮುಗಿಸಿ ಆ ಬಳಿಕ ತನ್ನ 17ನೇ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಗದ್ದೆ ಬೇಸಾಯ ಮಾಡಿ ಜೀವನ ನಿರ್ವಹಣೆ ಮಾಡಿ ಬಳಿಕ ಅಡಿಕೆ, ತೆಂಗು, ಗೇರು, ಕೊಕ್ಕೊ, ರಬ್ಬರ್, ತರಕಾರಿ, ಬೆಳೆದು ಹೈನುಗಾರಿಕೆಯನ್ನು ಮಾಡಿ ಒಬ್ಬ ಆದರ್ಶ ಪ್ರಗತಿಪರ ಕೃಷಿಕನಾಗಿ ಗುರುತಿಸಿಕೊಂಡು ತನ್ನ 58 ನೇ ವಯಸ್ಸಿಗೆ ಮನೆ ಕೃಷಿಯ ಎಲ್ಲಾ ಜವಬ್ದಾರಿಯನ್ನು ಮಗನಿಗೆ ವಹಿಸಿಕೊಟ್ಟು ಪುತ್ತೂರಿನಲ್ಲಿನ ಸಿಟಿ ಆಸ್ಪತ್ರೆಯ ಎದುರುಗಡೆಯ ಮಿತ್ತಳಿಕೆ ಆರ್ಕೇಡ್‌ನಲ್ಲಿ ಪೈಂಟ್ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪತ್ನಿ ಶ್ರೀಮತಿ ಪುಷ್ಪಾವತಿ ಕಳುವಾಜೆ ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆಯಾಗಿ, ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಗುರುತಿಸಿಕೊಂಡಿರುತ್ತಾರೆ. ಮಗ ಜಯಪ್ರಕಾಶ್ ಕಳುವಾಜೆ, ಮಗಳು ಶ್ರೀಮತಿ ಪ್ರತಿಭಾ ದೇವಿ, ನಾಲ್ವರು ಮೊಮ್ಮಕ್ಕಳು, ಅಳಿಯ ಸಿವಿಲ್ ಇಂಜಿನಿಯರ್ ಎ.ವಿ. ನಾರಾಯಣರವರನ್ನು ಹೊಂದಿರುತ್ತಾರೆ.

ನೂತನ ಕಾರ್ಯದರ್ಶಿ ಪರಿಚಯ:

ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಪೆಲತ್ತಡಿ ದಿ.ಪಕೀರ ಹಾಗೂ ಶ್ರೀಮತಿ ಮುದರು ದಂಪತಿಗಳ ಮಗನಾಗಿ ಜನಿಸಿದ ಸುರೇಶ್ ಟಿ.ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಆರ್ಯಾಪು, ಪ್ರೌಢ ಶಿಕ್ಷಣವನ್ನು ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು, ಬಿ.ಎ. ಪದವಿ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿರುತ್ತಾರೆ. 2001ರಂದು ದ್ವಿತೀಯ ದರ್ಜೆ ಸಹಾಯಕನಾಗಿ ಸರಕಾರಿ ವೃತ್ತಿಯನ್ನು ಪ್ರಾರಂಭಿಸಿರುವ ಸುರೇಶ್‌ರವರು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಉಡುಪಿ, ಉಡುಪಿ ತಾಲೂಕು ಪಂಚಾಯತ್, ಉಡುಪಿ ಜಿಲ್ಲಾ ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪ್ರಸ್ತುತ ಪದೋನ್ನತಿಗೊಂಡು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಕಚೇರಿಯಲ್ಲಿ ಲೆಕ್ಕಪರಿಶೋಧಕರಾಗಿ ಸರ್ಕಾರಿ ಸೇವೆಯನ್ನು ಮಾಡುತ್ತಿದ್ದಾರೆ. ಪುತ್ತೂರಿನ ಹೃದಯ ಭಾಗದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದ ಕಟ್ಟಡ ಸಮಿತಿಯ ಕೋಶಾಧಿಕಾರಿಯಾಗಿ, ಶ್ರೀಕೃಷ್ಣ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ, ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಇದರ ಜಿರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿಯಾಗಿ ಹಾಗೂ ಸ್ಥಳಿಯ ಹಲವಾರು ದೈವಸ್ಥಾನ ಹಾಗೂ ದೇವಸ್ಥಾನಗಳ ಜಿರ್ಣೋದ್ದಾರ ಸಮಿತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ಇವರು ಪತ್ನಿ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶಾಲಿನಿ, ಇಬ್ಬರು ಪುತ್ರರಾದ ಮಾ.ಸನ್ವಿತ್ ಕುಮಾರ್ ಹಾಗೂ ಮಾ.ಸಂಹಿತ್ ಕುಮಾರ್‌ರವರೊಂದಿಗೆ ಸಂಪ್ಯದಲ್ಲಿ ನೆಲೆಸಿರುತ್ತಾರೆ.

ನೂತನ ವಲಯ ಸೇನಾನಿ ಪರಿಚಯ:

ದೇವಾಲಯಗಳ ನಗರಿ ಎಂದು ಖ್ಯಾತಿವೆತ್ತ ಉಡುಪಿಯಲ್ಲಿ ಎಸ್.ಎಸ್.ರಾಬಿನ್‌ಸನ್ ಮತ್ತು ಸರೋಜಿನಿ ರಾಬಿನ್‌ಸನ್ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ರೀಮತಿ ಸೆನೊರಿಟಾ ಆನಂದ್‌ರವರು ಉಡುಪಿಯ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. 2008ರಲ್ಲಿ ಪುತ್ತೂರು ಇನ್ನರ್‌ವೀಲ್ ಕ್ಲಬ್‌ಗೆ ಸೇರಿದ ಇವರು 2014-15 ರಲ್ಲಿ ಅಧ್ಯಕ್ಷರಾಗಿ ಕ್ಲಬ್‌ನ್ನು ಮುನ್ನಡೆಸಿ ಹಲವು ಪ್ರಶಸ್ತಿಗಳನ್ನು ಕ್ಲಬ್‌ಗೆ ತಂದುಕೊಟ್ಟಿರುತ್ತಾರೆ. 2015ರಲ್ಲಿ ಸ್ಥಾಪಕ ಸದಸ್ಯರಾಗಿ ರೋಟರಿ ಪುತ್ತೂರು ಸ್ವರ್ಣ ಕ್ಲಬ್‌ಗೆ ಸೇರಿದ್ದು, 2016ನೇ ಸಾಲಿನಲ್ಲಿ ಪೌಲ್ ಹ್ಯಾರಿಸ್ ಫೆಲೋ ಎಂದು ಗುರುತಿಸಲ್ಪಟ್ಟರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ 2020-21ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕ್ಲಬ್‌ನ್ನು ಸಮರ್ಥವಾಗಿ ಮುನ್ನೆಡೆಸಿದ್ದರು. ಕೊರೋನಾ ಸಾಂಕ್ರಾಮಿಕ ಬಾಧೆ ಸಮಯದಲ್ಲಿ ಸಂಕಷ್ಟಕ್ಕೀಡಾದವರಿಗೆ ಮಾನವೀಯ ನೆರವು ನೀಡಿದ ಕಾರ್ಯಕ್ಕೆ ಪ್ರಶಸ್ತಿಗಳನ್ನು ಪಡೆದದ್ದು ಮಾತ್ರವಲ್ಲ ರೋಟರಿ ಜಿಲ್ಲೆ 3181ರ ಅತ್ಯುತ್ತಮ ಅಧ್ಯಕ್ಷರ ಪೈಕಿ ಗುರುತಿಸಿಕೊಂಡವರಾಗಿದ್ದಾರೆ. ಉತ್ತಮ ಬ್ಯಾಡ್ಮಿಂಟನ್ ಆಟಗಾರರಾಗಿರುವ ಸೆನೋರಿಟರವರು ರೋಟರಿ ವಲಯ ಮತ್ತು ಜಿಲ್ಲಾ ಕ್ರೀಡಾಕೂಟಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡವರು. ಸೆನೋರಿಟ ಆನಂದ್‌ರವರು ಪತಿ ರೋಟರಿ ಜಿಲ್ಲೆಯ ಮಾಜಿ ಸಹಾಯಕ ಗವರ್ನರ್ ಆಸ್ಕರ್ ಆನಂದ್, ಪುತ್ರಿ ಮೇಘನಾ ಮತ್ತು ಪುತ್ರರಾದ ಶ್ರೇಯಸ್, ಸ್ವೀಕೃತ್‌ರವರನ್ನು ಹೊಂದಿರುತ್ತಾರೆ.

ನೂತನ ಕೋಶಾಧಿಕಾರಿ ಪರಿಚಯ:

ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ಮನೆತನದಲ್ಲಿ ತಂದೆ ಕೃಷಿಕರಾದ ಸೀತಾರಾಮ ರೈ ನುಳಿಯಾಲು ಹಾಗೂ ತಾಯಿ ಪುಷ್ಪಲತಾ ಎಸ್.ರೈ ದಂಪತಿ ಪುತ್ರರಾಗಿ ಜನಿಸಿದ ಸನತ್ ಕುಮಾರ್ ರೈ ಕುಂಜಾಡಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪಾಣಾಜೆ ಸುಭೋದ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಹಾಗೂ ಪದವಿ(ಬಿಕಾಂ) ಶಿಕ್ಷಣವನ್ನು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದ್ದರು. ರೋಟರಿ ಸ್ವರ್ಣದ ಚಾರ್ಟರ್ ಸದಸ್ಯರಾಗಿ ಸೇರ್ಪಡೆಗೊಂಡಿದ್ದ ಸನತ್ ಕುಮಾರ್ ರೈಯವರು ಕ್ಲಬ್‌ನಲ್ಲಿ ಎರಡು ಬಾರಿ ಯೂತ್ ನಿರ್ದೇಶಕರಾಗಿ, ಎರಡು ಬಾರಿ ವೆಬ್‌ಸೈಟ್ ಚೇರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕೃಷಿಕರಾದ ಸನತ್ ರೈಯವರು ಪ್ರಸ್ತುತ ಪತ್ನಿ ಅಕ್ಷಯ ರೈ, ಪುತ್ರ ಅಕ್ಷಜ್ ರೈರವರೊಂದಿಗೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ತೋಟದಮೂಲೆ ಸಂಗಮ್ ನಿಲಯದಲ್ಲಿ ವಾಸವಾಗಿದ್ದಾರೆ.

[box type=”note” bg=”#” color=”#” border=”#” radius=”19″]ನಾಳೆ ಪದ ಪ್ರದಾನ…

ಜು.7 ರಂದು ಸಂಜೆ ನೆಹರುನಗರದ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗುವ ಪದ ಪ್ರದಾನ ಸಮಾರಂಭದಲ್ಲಿ ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಉಮಾನಾಥ್ ಪಿ.ಬಿರವರು ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಸೇನಾನಿ ಸೆನೋರಿಟಾ ಆನಂದ್‌ರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.[/box]

LEAVE A REPLY

Please enter your comment!
Please enter your name here