ಸಾರ್ವಜನಿಕರ ಸಮಸ್ಯೆಗಳಿಗೆ ನಗರಸಭೆ ತಕ್ಷಣ ಸ್ಪಂದನೆ ನೀಡಲಿದೆ -ವಿಪತ್ತು ನಿರ್ವಹಣ ತಂಡದ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್

0

ಪುತ್ತೂರು: ನಗರಸಭೆ ವಿಪತ್ತು ನಿರ್ವಹಣಾ ತಂಡವು ನಗರಸಭೆ ಸದಸ್ಯರು, ಇಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರಿಂದ ಕಾರ್ಯ ನಿರ್ವಹಿಸಲಿದೆ. ರಾತ್ರಿಯೂ ಕರೆ ಮಾಡಿದಾಗ ಅದಕ್ಕೆ ಸ್ಪಂದನೆ ನೀಡಬೇಕು. ನಾವು ಕೂಡಾ ಎಷ್ಟು ರಾತ್ರಿಯಾದರೂ ಬರುತ್ತೇವೆ. ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ಭಾರಿಯೂ ವಿಪತ್ತು ನಿರ್ವಹಣ  ತಂಡ ರಚನೆ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ನಗರಸಭೆ ತಕ್ಷಣ ಸ್ಪಂದನೆ ನೀಡಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಹೇಳಿದರು.

ಮಳೆಗಾಲದಲ್ಲಿ ಆಗುವ ಕೃತಕ ನೆರೆ, ಧರೆ ಕುಸಿತ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಆಗುವ ವಿಪತ್ತುಗಳಿಗೆ ಪರಿಹಾರ ಕ್ರಮವಾಗಿ ಜು.5ರಂದು ನಗರಸಭೆ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ  ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆಯೊಳಗೆ ಕಳೆದ ಮೂರು ದಿನದಿಂದ ನಿರಂತರವಾಗಿ ಮಳೆ ಬರುವ ಕಾರಣದಿಂದ ಒಂದಷ್ಟು ಧರೆ ಕುಸಿತ, ಮನೆ ಕುಸಿತ ನೀರು ಚರಂಡಿ ಬ್ಲಾಕ್ ಆಗಿರುವ ವಿಚಾರದಲ್ಲಿ ಬಂದಿರುವ ದೂರಿನ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ನಡೆಸಲಾಗಿದೆ. ನಗರಸಭೆ ಸದಸ್ಯರು ಮತ್ತು ಸಬಂಧಪಟ್ಟ ಇಂಜಿನಿಯರ್, ಆರೋಗ್ಯ ಇಲಾಖೆ, ಒಟ್ಟು ಸೇರಿಕೊಂಡು ತಂಡವಾಗಿ ಕೆಲಸ ಮಾಡಬೇಕು. ಯಾವುದೇ ರೀತಿಯಲ್ಲಿ ಎಷ್ಟು ಹೊತ್ತಿಗೆ ಆದರೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧನೆ ನೀಡಲಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್, ಸದಸ್ಯರಾದ ನವೀನ್ ಪೆರಿಯತ್ತೋಡಿ, ವಸಂತ ಕಾರೆಕ್ಕಾಡು, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಅರುಣ್ ಕುಮಾರ್, ಶ್ರೀಧರ್ ನಾಯ್ಕ್, ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ ಸೇರಿದಂತೆ ಸಮಿತಿಯ ಇತರ ಜವಾಬ್ದಾರಿಯುತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here