ಮಾಯಿದೆ ದೇವುಸ್ ಚರ್ಚ್‌ನ ಸಾಮೆತ್ತಡ್ಕ ವಾಳೆಯ ಹಬ್ಬಾಚರಣೆ; ಸಾಧಕರಿಗೆ, ಸಹಕರಿಸಿದವರಿಗೆ ಅಭಿನಂದನೆ, ನಿವೃತ್ತರಿಗೆ ಗೌರವ, ದಿವ್ಯ ಬಲಿಪೂಜೆ

0

ಚಿತ್ರ: ಪಿಂಟೋ ಪುತ್ತೂರು

ಪುತ್ತೂರು:ಮಾಯಿದೆ ದೇವುಸ್ ಚರ್ಚ್‌ಗೊಳಪಟ್ಟ ಸಾಮೆತ್ತಡ್ಕ ವಾಳೆಯಲ್ಲಿನ ಪ್ರೇರಕ ಸಂತರ ಹಬ್ಬಾಚರಣೆಯನ್ನು ಜು.2 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಆಚರಿಸಲಾಯಿತು.

ವಾಳೆಯ ಹಬ್ಬ ಎಂದರೆ ಸಂಭ್ರಮ ಹಾಗೂ ಏಕತೆಯ ಪ್ರತೀಕವಾಗಿದ್ದು ಅದು ಎಲ್ಲರನ್ನೂ ಒಗ್ಗೂಡಿಸುತ್ತದೆ. ಸೇವೆಯಿಂದ ನಿವೃತ್ತರಾದವರಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ನಿಸ್ವಾರ್ಥವಾಗಿ ಸೇವೆ ನೀಡುವವರಿಗೆ ವಾಳೆಯ ವತಿಯಿಂದ ಅಭಿನಂದನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ವಾಳೆಯಲ್ಲಿ ಜೀವಿಸುವಾಗ ವಾಳೆಯಲ್ಲಿನ ಸದಸ್ಯರ ಪರಿಚಯ ಮತ್ತು ಗೆಳೆತನ ವೃದ್ಧಿಸುತ್ತದೆ ಮಾತ್ರವಲ್ಲದೆ ಕಷ್ಟ-ಸುಖದ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ನೆರವೀಯುವುದಕ್ಕೆ ಕಾರಣವಾಗುತ್ತದೆ ಎಂದರು.

ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ಮಾತನಾಡಿ, ಸಾಮೆತ್ತಡ್ಕ ವಾಳೆಯಲ್ಲಿನ ಪ್ರತಿಯೊಂದು ಕುಟುಂಬದ ಸದಸ್ಯರನ್ನು ನಾನು ಬಲ್ಲೆ. ಈ ವಾಳೆಯಲ್ಲಿ ಚುರುಕು ಸ್ವಭಾವದ ಹಾಗೂ ಪ್ರತಿಭಾವಂತರ ದಂಡೇ ಇದೆ. ಈ ವಾಳೆಯಲ್ಲಿನ ಸದಸ್ಯರು ಚರ್ಚ್‌ನ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ವಾಳೆಯಲ್ಲಿನ ನಿವೃತ್ತರಾದ ಹಿರಿಯ ಸದಸ್ಯರಿಗೆ ಆಯುರಾರೋಗ್ಯ ದೇವರು ಕರುಣಿಸಲಿ, ವಾಳೆಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಾಳೆಯಲ್ಲಿನ ಪ್ರತಿಭಾವಂತರಿಗೆ ಅಭಿನಂದಿಸಿರುವುದು ಅವರಿಗೆ ಅವರ ಶೈಕ್ಷಣಿಕ ಜೀವನದಲ್ಲಿ ಮತ್ತಷ್ಟು ಉತ್ತೇಜನ, ಪ್ರೋತ್ಸಾಹ ಸಿಕ್ಕಿದಂತಾಗಿದೆ. ವಾಳೆಯ ಹಬ್ಬದ ಸಂದರ್ಭದಲ್ಲಿ ವಾಳೆಯಲ್ಲಿನ ಎಲ್ಲಾ ಸದಸ್ಯರು ಹಾಜರಿದ್ದು ಹಬ್ಬದ ಕಳೆಯನ್ನು ಹೆಚ್ಚಿಸಿದೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಸಾಧಕರಿಗೆ ಅಭಿನಂದನೆ:

ಶೈಕ್ಷಣಿಕ ಕ್ಷೇತ್ರದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎಡ್‌ನಲ್ಲಿ ಡಿಸ್ಟಿಂಕ್ಷನ್ ಗಳಿಸಿರುವ ಮೋನಿಕ ಪ್ರಿಯಾ ಡಿ’ಸೋಜ, ಎಂಬಿಎಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಮೇಗಸ್ ಮಸ್ಕರೇನ್ಹಸ್, ಕೆಎಸ್‌ಇಇಬಿ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ರಚನಾ ಪಿಂಟೋ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನಾಗಿ ಆಯ್ಕೆಯಾದ ಶಾನ್ ಜೋಸೆಫ್ ಲೋಬೊರವರನ್ನು ಗುರುತಿಸಿ ಅಭಿನಂದಿಸಲಾಯಿತು. ಶಿಕ್ಷಕಿ ಜ್ಯುಲಿಯಾನಾ ಮೋರಸ್ ಸಾಧಕರ ಪಟ್ಟಿಯನ್ನು ವಾಚಿಸಿದರು.

ಸಹಕರಿಸಿದವರಿಗೆ ಅಭಿನಂದನೆ:

ವಾಳೆಯ ಅಭಿವೃದ್ಧಿಯಲ್ಲಿ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವ ವಾಳೆಯ ಪ್ರತಿನಿಧಿ ಪ್ರೆಸಿಲ್ಲ ಮಸ್ಕರೇನ್ಹಸ್, ವಾಳೆಯ ಕಾರ್ಯದರ್ಶಿ ಲವೀನಾ ಪಿಂಟೋ, ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ, ಸ್ನೇಹ ಡಿ’ಸೋಜರವರನ್ನು ಗುರುತಿಸಿ ಅಭಿನಂದಿಸಲಾಯಿತು. ಉಪನ್ಯಾಸಕಿ ಪ್ರಿಯಲತಾ ಡಿ’ಸಿಲ್ವ ಅಭಿನಂದಿತರ ಪಟ್ಟಿಯನ್ನು ವಾಚಿಸಿದರು.

ದಿವ್ಯ ಬಲಿಪೂಜೆ:

ಹಬ್ಬದ ಪ್ರಯುಕ್ತ ಕಾರ್ಯಕ್ರಮದ ಮುನ್ನ ಮಾಯಿದೆ ದೇವುಸ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ವಾಳೆಯ ಮಕ್ಕಳ ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಾಳೆ ಪ್ರತಿನಿಧಿ ಪ್ರೆಸಿಲ್ಲ ಮಸ್ಕರೇನ್ಹಸ್ ಪ್ರಾರ್ಥಿಸಿದರು. ಗುರಿಕಾರ ಲ್ಯಾನ್ಸಿ ಮಸ್ಕರೇನ್ಹಸ್ ಸ್ವಾಗತಿಸಿ, ಸವಿತ ಮಸ್ಕರೇನ್ಹಸ್ ವಂದಿಸಿದರು. ವಾಳೆ ಕಾರ್ಯದರ್ಶಿ ಲವೀನಾ ಪಿಂಟೋ ವರದಿ ವಾಚಿಸಿದರು. ಪ್ರಕಾಶ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಕಲ್ಲಾರೆ ವಾಳೆ ಗುರಿಕಾರ ಜೋನ್ ಪೀಟರ್ ಡಿ’ಸಿಲ್ವ, ದರ್ಬೆ ವಾಳೆ ಗುರಿಕಾರ ವಿನ್ಸೆಂಟ್ ತಾವ್ರೋ ಸಹಿತ ಹಲವರು ಉಪಸ್ಥಿತರಿದ್ದರು.

[box type=”note” bg=”#” color=”#” border=”#” radius=”22″]ಈರ್ವರಿಗೆ ಸನ್ಮಾನ…

ಸಾಮೆತ್ತಡ್ಕ ವಾಳೆಯ ಗುರಿಕಾರರಾಗಿ ಸೇವೆ ಸಲ್ಲಿಸಿರುವ ಪ್ರಸ್ತುತ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ನೀಡುತ್ತಿರುವ ಮೌರಿಸ್ ಮಸ್ಕರೇನ್ಹಸ್ ಹಾಗೂ ಪ್ರಸ್ತುತ ವಾಳೆಯ ಗುರಿಕಾರರಾಗಿ ಸೇವೆ ನೀಡುತ್ತಿರುವ ಲ್ಯಾನ್ಸಿ ಮಸ್ಕರೇನ್ಹಸ್‌ರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊರವರು ಸನ್ಮಾನಿತರ ಪರಿಚಯನ್ನು ನೀಡಿದರು.

ನಿವೃತ್ತರಿಗೆ ಗೌರವ..

ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದು ಸೇವಾ ನಿವೃತ್ತಿ ಹೊಂದಿದ ವಾಳೆಯ ಸದಸ್ಯರಾದ ಪಾವ್ಲ್ ಮಸ್ಕರೇನ್ಹಸ್, ಮೊಂತಿನ್ ಫೆರ್ನಾಂಡೀಸ್, ಡೇವಿಡ್ ಡಿ’ಸೋಜ, ಮೋಲಿ ಮಸ್ಕರೇನ್ಹಸ್‌ರವರನ್ನು ಗುರುತಿಸಿ ಗೌರವಿಸಲಾಯಿತು. ಪ್ರಿನ್ಸಿ ಮಸ್ಕರೇನ್ಹಸ್‌ರವರು ನಿವೃತ್ತರ ಪಟ್ಟಿಯನ್ನು ವಾಚಿಸಿದರು.[/box]

LEAVE A REPLY

Please enter your comment!
Please enter your name here