ಸಮಾಜಕಾರ್ಯ ವಿದ್ಯಾರ್ಥಿಗಳು ಪ್ರೋ ಆಕ್ಟಿವ್‌ ಆಗಿರಬೇಕು-ಬೆಟ್ಟಂಪಾಡಿ ಕಾಲೇಜಿನಲ್ಲಿ ಯುಜಿಸಿ ಎಮಿರೇಟ್ ಪ್ರಾಧ್ಯಾಪಕ ಪ್ರೊ. ರಮಣಯ್ಯ

0

 

 


ಬೆಟ್ಟಂಪಾಡಿ:  ಆಪ್ತ ಸಮಾಲೋಚನೆಯಂತಹ ಈ ಕಾಲಕ್ಕೆ ಅತೀ ಅಗತ್ಯವಾದ ಸೇವೆಯನ್ನು ಸಮಾಜಕ್ಕೆ ಕೊಡಬೇಕಾದ ಕರ್ತವ್ಯ ಸಮಾಜಕಾರ್ಯ ವಿದ್ಯಾರ್ಥಿಗಳದ್ದು. ಅದನ್ನು ಸದಾ ಒದಗಿಸುವಲ್ಲಿ ವಿದ್ಯಾರ್ಥಿಗಳು ಪ್ರೊಆಕ್ಟಿವ್‌ ಆಗಿರಬೇಕು. ಸಮಾಜವು ಕೇಳುವ ಮೊದಲೇ ಅದನ್ನು ನೀಡುವ ಸೇವಾ ತತ್ಪರತೆ ನಮ್ಮಲ್ಲಿರಬೇಕು ಎಂದು ಖ್ಯಾತ ಸಮಾಜ ಕಾರ್ಯ ಶಿಕ್ಷಣ ತಜ್ಞರೂ ಯುಜಿಸಿಯ ಎಮಿರೇಟ್ ಪ್ರಾಧ್ಯಾಪಕರೂ ಆದ ಮೈಸೂರಿನ ಪ್ರೊ.ಟಿಬಿಬಿಎಸ್‌ವಿ ರಮಣಯ್ಯಅವರು ನುಡಿದರು. ಅವರು ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೌನ್ಸೆಲಿಂಗ್‌ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿ, ಆಪ್ತ ಸಮಾಲೋಚನೆಯಂತಹ ಥೆರಪಿಯ ವಿಧಾನಗಳು ಅತ್ಯಂತ ಬೇಡಿಕೆಯಿರುವ ಕ್ಷೇತ್ರವಾಗಿದ್ದು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ವಿಪುಲವಾದ ಉದ್ಯೋಗಾವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿದೆ ಎಂದರು. ಸಮಾಜಕಾರ್ಯ ವಿಭಾಗ ಮುಖ್ಯಸ್ಥರಾದ ಡಾ.ನಿರೀಕ್ಷಣ್ ಸಿಂಗ್‌ ಅವರು ಸ್ವಾಗತಿಸಿದರು. ಸಂಕೀರಣದಲ್ಲಿ ಬೆಂಗಳೂರಿನ್ ನಿಮ್ಹಾನ್ಸ್ ಸಂಸ್ಥೆಯಡಾ.ಪ್ರದೀಪ್‌ಕುಮಾರ್, ಬೆಳಗಾವಿಯ ಐಸಿಎಂಆರ್ ನ ಡಾ.ಚಂದನ್, ಡಾ.ರವಿಕುಮಾರ್, ಕೋಝಿಕೋಡ್ ನ ನರ ಮಾನಸಿಕ ಅಧ್ಯಯನ ಸಂಸ್ಥೆ ಇಮ್ಹಾನ್ಸ್ ನ ಡಾ. ರಾಗೇಶ್ ಮುಂತಾದವರು ವಿವಿಧವಿಷಯಗಳ ಬಗ್ಗೆ ವಿಚಾರಗಳನ್ನು ಮಂಡಿಸಿದರು. ಮಂಗಳೂರು ವಿಶ್ವವಿದ್ಯಾಲಯ ಮತ್ತು ವಿವಿಧ ಕಾಲೇಜುಗಳಿಂದ ಸಮಾಜಕಾರ್ಯ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದರು.  

LEAVE A REPLY

Please enter your comment!
Please enter your name here