ಥಲೇಸ್ಸೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ದಿಗಂತ್‌ನ ಚಿಕಿತ್ಸೆಗೆ ಧನ ಸಹಾಯ ಹಸ್ತಾಂತರ

0

 

 

ಚಿತ್ರ: ರಮೇಶ್‌ ಕೆಮ್ಮಾಯಿ

 

 

ಪುತ್ತೂರು: ಥಲೇಸ್ಸೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಒಕ್ಕೆತ್ತೂರು ನಿವಾಸಿ, ಒಕ್ಕೆತ್ತೂರು ಶಾಲಾ 8ನೇ ತರಗತಿ ವಿದ್ಯಾರ್ಥಿ ದಿಗಂತ್‌ನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು. ಬನ್ನೂರು ನಿವೃತ್ತ ಕೃಷಿ ಅಧಿಕಾರಿ ಪದ್ಮಯ್ಯ ಗೌಡ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎವಿ ನಾರಾಯಣ ಗೌಡ, ಅರಣ್ಯ ಇಲಾಖೆಯ ನಿವೃತ್ತ ರಕ್ಷಕ ನಾರಾಯಣ ತಾರಿಗುಡ್ಡೆ, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಚಂದ್ರಾವತಿ ಲೋಕಯ್ಯ ನಾಯ್ಕ ಕೆಮ್ಮಾಯಿ, ಚಂದ್ರಶೇಖರ ಗೌಡ ಉಮಿಗದ್ದೆ, ಈಶ ವಿದ್ಯಾಲಯದ ಪ್ರಾಂಶುಪಾಲ ಗೋಪಾಲಕೃಷ್ಣ ಎಂ.ಎ., ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೋಮಪ್ಪ ಗೌಡ ಬಡಾವು, ಆನಂದ ಗೌಡ ರೋಟರಿಪುರ, ಮಮತರವರು ದಿಗಂತ್‌ರವರ ಪೋಷಕರಿಗೆ ಪುತ್ತೂರು ಒಕ್ಕಲಿಗ ಗೌಡ ಸ್ವಸಹಾಯ ಸೇವಾ ಟ್ರಸ್ಟ್‌ನ ಕಛೇರಿಯಲ್ಲಿ ಧನಸಹಾಯ ಹಸ್ತಾಂತರಿಸಿದರು. ಈ ಸಂದಬ  ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ನ ಕಚೇರಿ ಸಿಬ್ಬಂ ದಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here