ಕಾವು: ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣೆ

0

  • ಸದಸ್ಯರುಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ-ಪುಸ್ತಕ ವಿತರಣೆ
  • 255ಮಹಿಳಾ ಸದಸ್ಯರಿಗೆ ಉಚಿತ ಸಮವಸ್ತ್ರ ವಿತರಣೆ
  • 130 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
  • ಪಿಯುಸಿಯ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
  • 2 ಗುಂಪುಗಳಿಗೆ ಅತ್ಯುತ್ತಮ ಗುಂಪು ಪ್ರಶಸ್ತಿ
  • ನೂತನ ಗುಂಪಿಗೆ ಪುಸ್ತಕ ಹಸ್ತಾಂತರ

ಚಿತ್ರ: ಎನ್.ಎಸ್ ಕಾವು

 

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕಾವು ಮತ್ತು ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್(ರಿ.) ಮಂಗಳೂರು ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಕಾವು ಮಾಡ್ನೂರು ಇದರ ವತಿಯಿಂದ ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯು ಜು.5ರಂದು ಬೆಳಿಗ್ಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.


ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ, ಕೆಎಂಎಫ್‌ನ ಉಪಾಧ್ತಕ್ಷರೂ ಆಗಿರುವ ಎಸ್.ಬಿ ಜಯರಾಮ ರೈ ಬಳಜ್ಜರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಉಪಸ್ಥಿತರಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಶರತ್ ಡಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ಕಾವು ನವೋದಯ ಒಕ್ಕೂಟದ ಉಪಾಧ್ಯಕ್ಷೆ ಸುಮತಿ ಆಚಾರಿಮೂಲೆ ಗೌರವ ಉಪಸ್ಥಿತಿ ವಹಿಸಿದ್ದರು.

255 ಮಹಿಳಾ ಸದಸ್ಯರಿಗೆ ಉಚಿತ ಸಮವಸ್ತ್ರ ವಿತರಣೆ:
ಕಾವು ನವೋದಯ ಒಕ್ಕೂಟದ 42 ಗುಂಪಿನ ಒಟ್ಟು 255 ಮಹಿಳಾ ಸದಸ್ಯರುಗಳಿಗೆ ನವೋದಯ ಟ್ರಸ್ಟ್‌ನ ಮೂಲಕ ನೀಡಲಾದ ಉಚಿತ ಸಮವಸ್ತ್ರವನ್ನು ಎಸ್.ಬಿ ಜಯರಾಮ ರೈಯವರು ವಿತರಣೆ ಮಾಡಿದರು.

130ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ:
ಕಾವು ನವೋದಯ ಒಕ್ಕೂಟದ ಸದಸ್ಯರುಗಳ ಒಟ್ಟು 130 ಮಕ್ಕಳಿಗೆ ನವೋದಯ ಒಕ್ಕೂಟದಿಂದ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು.

ಪಿಯುಸಿಯ 15 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ:
ಕಾವು ನವೋದಯ ಒಕ್ಕೂಟದ ಸದಸ್ಯರುಗಳ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 15 ಮಕ್ಕಳಿಗೆ ಒಕ್ಕೂಟದಿಂದ ವಿದ್ಯಾರ್ಥಿ ವೇತನ ನೀಡಲಾಯಿತು.

2 ಗುಂಪುಗಳಿಗೆ ಅತ್ಯುತ್ತಮ ಗುಂಪು ಪ್ರಶಸ್ತಿ
ಕಾವು ನವೋದಯ ಒಕ್ಕೂಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ವೈಶಾಲಿ ಅಮ್ಚಿನಡ್ಕ ಮತ್ತು ಬ್ರಹ್ಮಶ್ರೀ ಕೆರೆಮಾರು ಗುಂಪುಗಳಿಗೆ ಅತ್ಯುತ್ತಮ ಗುಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನೂತನ ಗುಂಪಿಗೆ ಪುಸ್ತಕ ಹಸ್ತಾಂತರ:
ನವೋದಯ ಒಕ್ಕೂಟದಲ್ಲಿ ನೂತನವಾಗಿ ರಚನೆಗೊಂಡ ಮಹಾಲಕ್ಷ್ಮೀ ಗುಂಪಿಗೆ ಸಂಘದ ನಿರ್ಣಯ ಪುಸ್ತಕ ನೀಡಿ ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡರವರು ಪ್ರಸ್ತಾವನೆಗೈದರು. ನವೋದಯದ ತಾಲೂಕು ಮೇಲ್ವಿಚಾರಕ ಚಂದ್ರಶೇಖರ್ ಸ್ವಾಗತಿಸಿ, ಪ್ರೇರಕಿ ಮಾಧವಿ ವಂದಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here