ಭ್ರಷ್ಟಾಚಾರವೆನ್ನುವುದು ಕ್ಯಾನ್ಸರ್ ರೋಗ-ನಾಲ್ಕನೇ ಹಂತ ತಲುಪುವ ಮೊದಲು ತಡೆಯಬೇಕಿದೆ

0

  • ನನಗೆ ಯಾವ ಹೆದರಿಕೆಯೂ ಇಲ್ಲ:ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ-ನ್ಯಾ| ಸಂದೇಶ್
  • ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧ
  • ಐಎಎಸ್, ಐಪಿಎಸ್ ಅಣತಿಯಂತೆ ನಡೆಯುತ್ತಿರುವ ಸರಕಾರದಿಂದ ಭ್ರಷ್ಟರ ರಕ್ಷಣೆ

ಬೆಂಗಳೂರು:`ಭ್ರಷ್ಟಾಚಾರ ಎನ್ನುವುದು ರೋಗ,ಕ್ಯಾನ್ಸರ್.ನಾಲ್ಕನೇ ಹಂತಕ್ಕೆ ಹೋಗುವ ಮೊದಲು ಅದನ್ನು ತಡೆಯಬೇಕಾಗಿದೆ.ನಾಲ್ಕನೇ ಹಂತಕ್ಕೆ ಹೋದರೆ ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದ್ದಾರೆ.

 

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)`ಕಲೆಕ್ಷನ್ ಸೆಂಟರ್’ ಆಗಿದೆ, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ,ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಹೇಳಿದ್ದ ತನಗೆ ಪರೋಕ್ಷ ವರ್ಗಾವಣೆ ಬೆದರಿಕೆ ಬಂದಿರುವ ಕುರಿತು, ಹೈಕೋರ್ಟ್‌ನಲ್ಲಿ ಜು.೪ರಂದು ಲಂಚ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು,ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧವಿರುವುದಾಗಿ ಹೇಳಿದರು.

ಲಂಚ ಪ್ರಕರಣದ ಆರೋಪಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೇಶ್, `ಸಾಂವಿಧಾನಿಕ ಹುದ್ದೆ ನಿಭಾಯಿಸುವ ನ್ಯಾಯಮೂರ್ತಿಗಳು ಯಾವುದೇ ಪಕ್ಷದ ಸಿದ್ಧಾಂತದ ಪರವಾಗಿ ಇರಬಾರದು’ ಎಂದರು.

ನಿಮ್ಮ ಎಡಿಜಿಪಿ ಪವರ್ ಫುಲ್: `ನಿಮ್ಮ ಎಡಿಜಿಪಿ ಬಹಳ ಪವರ್‌ಫುಲ್ ಮತ್ತು ಕೆಲ ವ್ಯಕ್ತಿಗಳು ನನ್ನನ್ನು ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.ಸಮಾಜದ ಹಿತಕ್ಕಾಗಿ ನಾನು ಇದನ್ನೆಲ್ಲ ಎದುರಿಸಲು ಸಿದ್ಧನಿzನೆ.ಅವರಿಗೆ ಸಾಧ್ಯವಿದ್ದರೆ ವರ್ಗಾವಣೆ ಮಾಡಿಸಲಿ.ಯಾರ್‍ಯಾರದ್ದೋ ಕಾಲು ಹಿಡಿದು ನಾನು ಜಡ್ಜ್ ಆಗಿ ಬಂದಿಲ್ಲ.ಜಡ್ಜ್ ಹುದ್ದೆ ಇಲ್ಲದಿದ್ದರೆ ಹೋಗಿ ಕೃಷಿ ಮಾಡಿ ನಾಲ್ಕು ಜನಕ್ಕೆ ಅನ್ನ ಹಾಕ್ತೀನಿ.ರೈತನ ಮಗನಾದ ನನಗೆ ಅದೂ ಗೌರವದ ಕೆಲಸವೆ.ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ.ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ.ಅಪ್ಪನ ನಾಲ್ಕೆಕ್ರೆ ಭೂಮಿಯನ್ನೇ ಮಾರಿzನೆ.ನನಗೆ ೫೦೦ರಲ್ಲಿ ಜೀವನ ಮಾಡಿಯೂ ಗೊತ್ತು, ೫,೦೦೦ರೂ.ನಲ್ಲಿ ಜೀವನ ಮಾಡಿಯೂ ಗೊತ್ತು.ಯಾರ ಹೆದರಿಕೆಯೂ ಇಲ್ಲ, ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್ ಆಗಿ ಪರಿಣಮಿಸಿದೆ. ನಾಲ್ಕನೇ ಹಂತಕ್ಕೆ ಹೋಗುವ ಮೊದಲು ಅದನ್ನು ತಡೆಯಬೇಕಾಗಿದೆ ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ದನಿzನೆ’ ಎಂದರು.

ಎಲ್ಲವನ್ನೂ ದಾಖಲಿಸುತ್ತೇನೆ: `ನನಗೆ ವರ್ಗಾವಣೆ ಬೆದರಿಕೆ ಹಾಕಿದ ನ್ಯಾಯಮೂರ್ತಿ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ’ ಎಂದು ನ್ಯಾಯಮೂರ್ತಿಗಳು ಹೇಳಿದರು. ಮಧ್ಯಾಹ್ನ ಕಲಾಪ ಮುಂದುವರಿದಾಗ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, `ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ.ನಿಮಗೆ ನೋವು ಎನಿಸಿದ್ದರೆ ಅದು ನಮಗೇನೂ ಖುಷಿ ಉಂಟು ಮಾಡುವ ಸಂಗತಿಯಾಗಿರುವುದಿಲ್ಲ.ಆದ್ದರಿಂದ, ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು.ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ.ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ’ ಎಂಬ ಭರವಸೆ ನೀಡಿದರು.
ನನಗೆ ವೈಯಕ್ತಿಕವಾಗಿ ಆಗಬೇಕಾದ್ದು ಏನೂ ಇಲ್ಲ.ಸಮಾಜದ ಹಿತಕ್ಕಾಗಿ ಪ್ರಕರಣದಲ್ಲಿ ವಿವರ ಕೇಳಿದ್ದೆ.ನನಗೆ ಯಾರನ್ನೂ ಓಲೈಸುವ ಅಗತ್ಯವಿಲ್ಲ.ಎಲ್ಲವನ್ನೂ ದಾಖಲಿಸಿ ಇಡುತ್ತೇನೆ.ಹೈಕೋರ್ಟ್ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಮೇಲಿನ ದಾಳಿ ಎಂದೂ ನ್ಯಾಯಮೂರ್ತಿ ಕಲಾಪದ ಸಂದರ್ಭ ಹೇಳಿದರು.

ಸರ್ಕಾರದ ಬದಲು ಅನ್ನ ಕೊಡುತ್ತಿರುವ ಜನರ ಪರವಾಗಿ ಕೆಲಸ ಮಾಡಿ: ನೀವು ಸರ್ಕಾರದ ಪರ ವಕೀಲರು,ಆದರೆ ನಿಮಗೆ ವೇತನ ಕೊಡುತ್ತಿರುವುದು ಜನರ ತೆರಿಗೆ ಹಣದಿಂದ.ಹೀಗಾಗಿ ಸರ್ಕಾರಕ್ಕಿಂತ ಅನ್ನ ಕೊಡುತ್ತಿರುವ ಜನರ ಪರವಾಗಿ ಕೆಲಸ ಮಾಡಿ.ಕರಿ ಕೋಟು ಇರುವುದು ಭ್ರಷ್ಟರ ರಕ್ಷಣೆಗಲ್ಲ ಎಂದು ಎಜಿಯವರಿಗೆ ಹೇಳಿದ ನ್ಯಾಯಮೂರ್ತಿಗಳು,ರಾಜ್ಯ ಸರ್ಕಾರ ಐಎಎಸ್ ಮತ್ತು ಐಪಿಎಸ್ ಲಾಬಿಯ ಆಣತಿಯಂತೆ ನಡೆಯುತ್ತಿದ್ದು ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಅಪರಾಧಿಗಳಲ್ಲವಾದರೆ ವಿವರ ನೀಡಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.

ಬೆಳಗಿನ ಕಲಾಪದಲ್ಲಿ ತಾವು ಹೇಳಿದಂತೆ ಎಲ್ಲವನ್ನೂ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲಿ ಬರೆಯಿಸಲು ನ್ಯಾಯಮೂರ್ತಿಗಳು ಮುಂದಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ನಾವದಗಿ, `ತಾವು ಎಲ್ಲವನ್ನೂ ಆದೇಶದಲ್ಲಿ ಕಾಣಿಸುವ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲುಪ್ತವಾಗಿ ನಿರ್ದೇಶನ ನೀಡಿದರೆ ಸಾಕು’ ಎಂದು ಮನವಿ ಮಾಡಿದರು.

ಲಂಚ ಸಮೇತ ಸಿಕ್ಕಿಬಿದ್ದರೂ ಬಿ ರಿಪೋರ್ಟ್ ಹೇಗೆ ಹಾಕ್ತಾರೆ?: ಹಳೆಯ ಪ್ರಕರಣವೊಂದನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಸಂದೇಶ್, `ಐಎಎಸ್ ಅಧಿಕಾರಿ ಮನೆ ಮೇಲಿನ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಸಿಗುತ್ತೆ. ೫ ಕೆಜಿ ಚಿನ್ನ ಸಿಗುತ್ತದೆ. ೫-೧೦ ಕೋಟಿ ಸಿಕ್ಕಿದವರನ್ನೆಲ್ಲಾ ಬಿಟ್ಟು ಕಳಿಸೋದು. ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದಾಗ, ಬಿ ರಿಪೋರ್ಟ್ ಹಾಕಿzಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾವಣೆಯಾಗುತ್ತಾರೆ.ಮತ್ತೊಬ್ಬ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕೃತವಾಗುತ್ತದೆ. ಇಂತಹ ಘಟನೆಗಳು ನೋವು ತರಿಸುತ್ತವೆ. ರೆಡ್ ಹ್ಯಾಂಡ್ ಆಗಿ ಲಂಚ ಸಮೇತ ಸಿಕ್ಕಿಬಿದ್ದಿದ್ದರೂ ಬಿ ರಿಪೋರ್ಟ್ ಹೇಗೆ ಹಾಕ್ತಾರೆ? ಸರ್ಚ್ ವಾರೆಂಟ್ ತೆಗೆದುಕೊಂಡರೂ ಸರ್ಚ್ ಮಾಡುವುದಿಲ್ಲ.ಸರ್ಚ್ ವಾರೆಂಟ್ ತೋರಿಸಿಯೇ ವಸೂಲಿ ಮಾಡುತ್ತಾರೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಏನು ನಡೆಯುತ್ತಿದೆ?

`ರಾಜ್ಯದಲ್ಲಿ ಏನು ನಡೆಯುತ್ತಿದೆ ಅಡ್ವೊಕೇಟ್ ಜನರಲ್ ಅವರೇ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುತ್ತದೆ, ಖಾಸಗಿ ಪಿಎ ಡಿಸಿ ಹತ್ರ ಎಲ್ಲ ಮಾಡಿಸಿಕೊಡುತ್ತೇನೆ ಎಂದರೆ ಅದರರ್ಥ ಏನು? ಇವೆಲ್ಲಾ ಸಂಭಾಷಣೆ ಫೋನ್‌ನಲ್ಲಿ ರೆಕಾರ್ಡ್ ಆಗಿವೆ. ಡಿಸಿ ಒಪ್ಪಿಗೆ ಇಲ್ಲದೆಯೇ ಆತ ೫ ಲಕ್ಷ ಲಂಚ ಪಡೆಯಲು ಸಾಧ್ಯವೇ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯಲ್ಲವೇ’ ಎಂದು ನ್ಯಾಯಮೂರ್ತಿ ಸಂದೇಶ್ ಪ್ರಶ್ನಿಸಿದರು.ನ್ಯಾಯಾಧೀಶರು ಕಲಾಪದಲ್ಲಿ ಆಡಿತ ಮಾತುಗಳು ಹೈಕೋರ್ಟ್ ಆಫ್ ಕರ್ನಾಟಕ ಯೂ ಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here