ಬೊಳುವಾರು ಕರ್ಮಲದಲ್ಲಿ ಮಣ್ಣು ಕುಸಿತಕ್ಕೆ ಟರ್ಪಾಲು ಹೊದಿಕೆಯ ತಾತ್ಕಾಲಿಕ ಪರಿಹಾರ

0

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಬೊಳುವಾರು ಕರ್ಮಲದಲ್ಲಿ ಶ್ರೀ ವಿಶ್ವಕರ್ಮ ಸಭಾಭವನಕ್ಕೆ ಮತ್ತು ನಗರಸಭೆ ನೀರು ಸರಬರಾಜಿನ ಟ್ಯಾಂಕ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಮಣ್ಣು ಕುಸಿತಗೊಂಡ ಸ್ಥಳಕ್ಕೆ ಪ್ಲಾಸ್ಟಿಕ್ ಟರ್ಪಾಲು ಹೊದಿಕೆಯ ಮೂಲಕ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.


ಬೊಳುವಾರು ಕರ್ಮಲದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಧರೆಯ ಅಂಚಿನಲ್ಲಿ ರಸ್ತೆಯ ಬದಿಯಿಂದ ಮಣ್ಣು ಕುಸಿಯುತ್ತಿದ್ದು, ಶ್ರೀ ವಿಶ್ವಕರ್ಮ ಸಭಾಭವನ ಮತ್ತು ಕುಡಿಯುವ ನೀರು ಸರಬರಾಜಿನ ಟ್ಯಾಂಕ್‌ಗೆ ಹೋಗುವ ರಸ್ತೆ ಕುಸಿಯುವ ಭೀತಿಯಲ್ಲಿತ್ತು. ಈ ಕುರಿತು ಸ್ಥಳೀಯ ನಗರಸಭೆ ಸದಸ್ಯ ಸಂತೋಷ್ ಬೊಳುವಾರು ಅವರು ಸಂಬಂಧಿಸಿದ ಖಾಸಗಿ ಸ್ಥಳದ ಮಾಲಕರಿಗೆ ಮಾಹಿತಿ ನೀಡಿದ ಮೇರೆಗೆ ಅವರು ತಾತ್ಕಾಲಿಕ ಪರಿಹಾರವಾಗಿ‌ ಪ್ಲಾಸ್ಟಿಕ್ ಟರ್ಪಾಲು ನೀಡಿದ್ದರು. ಅವರು ನೀಡಿದ ಪ್ಲಾಸ್ಟಿಕ್ ಟರ್ಪಾಲು ಅನ್ನು ನಗರಸಭೆ ಸದಸ್ಯ ಸಂತೋಷ್ ಬೊಳುವಾರು ಮತ್ತು ಬಿಜೆಪಿ ಬೂತ್ ಅಧ್ಯಕ್ಷ ದಯಾಕರ್ ಅವರು ಮಣ್ಣು ಕುಸಿದ ಸ್ಥಳಕ್ಕೆ ಹೊದಿಸುವ ಮೂಲಕ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here