ನೆಲ್ಯಾಡಿ: ಉದ್ಯಮಿ ಯು.ಪಿ.ವರ್ಗೀಸ್ ಅಂತ್ಯಕ್ರಿಯೆ

0

ನೆಲ್ಯಾಡಿ: ಅಲ್ಪಕಾಲದ ಅಸೌಖ್ಯದಿಂದ ಜು.4ರಂದು ಸಂಜೆ ನಿಧನರಾಗಿರುವ ನೆಲ್ಯಾಡಿ ಎಲೈಟ್ ರಬ್ಬರ್ ಕಂಪನಿ ಮತ್ತು ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ, ಹೆಸರಾಂತ ಉದ್ಯಮಿ, ನೆಲ್ಯಾಡಿ ಉನ್ನುಕಲ್ಲಿಂಗಲ್ ನಿವಾಸಿ ಯು.ಪಿ.ವರ್ಗೀಸ್(79ವ.)ರವರ ಅಂತ್ಯಕ್ರಿಯೆ ಜು.5ರಂದು ನಡೆಯಿತು.


ಬೆಳಿಗ್ಗೆ ಯು.ಪಿ.ವರ್ಗೀಸ್‌ರವರ ಮನೆಯಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಬಳಿಕ ನೆಲ್ಯಾಡಿ ಸಂತ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ವಿಧಿ ವಿಧಾನಗಳ ಬಳಿಕ ಅಂತ್ಯಕ್ರಿಯೆ ನಡೆಯಿತು. ಕೇರಳ ತಿರುವಲ್ಲ ಆರ್ಚ್ ಬಿಷಪ್ ಡಾ.ತೋಮಸ್ ಮಾರ್ ಕೂರಿಲೋಸ್, ಪುತ್ತೂರು ಧರ್ಮಪ್ರಾಂತ್ಯದ ಜನರಲ್ ವಿಕಾರ್ ಎಲ್ದೋ ಪುತ್ತನ್ ಕಂಡತ್ತಿಲ್, ನೆಲ್ಯಾಡಿ ಸೈಂಟ್ ಜೋಸೆ- ಮಲಂಕರ ಕ್ಯಾಥೋಲಿಕ್ ಚರ್ಚ್‌ನ ವಿಕಾರ್ ರೆ.ಫಾ.ಜಾನ್ ಕುನ್ನತ್ತಿಲ್, ಚಾಕೋಬೈಟ್ ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ವರ್ಗೀಸ್ ಕೋರ್ ಎಪಿಸ್ಕೋಪಾ ಸೇರಿದಂತೆ ಚಾಕೋಬೈಟ್, ಅರ್ಥೋಡೋಕ್ಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಗುರುಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಯಿತು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್, ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಬಾಲಕೃಷ್ಣ, ಉದ್ಯಮಿ ಎ.ಸಿ.ಕುರಿಯನ್, ಜಿ.ಪಂ.ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಕೆಪಿಸಿಸಿ ಮುಖಂಡ ಕೆ.ಪಿ.ತೋಮಸ್, ಪುತ್ತೂರು ಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಪಿಡಿಒ ಮಂಜುಳ ಎನ್., ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಉಷಾಜೋಯಿ, ಮಹಮ್ಮದ್ ಇಕ್ಬಾಲ್, ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯ ಸಣ್ಣಿ ಜೋನ್, ನೆಲ್ಯಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಒ.ಜಿ.ನೈನಾನ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪದಾಧಿಕಾರಿಗಳಾದ ಶಿವಣ್ಣ ಪಿ.ಹೆಗ್ಡೆ, ಗಣೇಶ್ ರಶ್ಮಿ, ಜೋಸ್ ಕೆ.ಜೆ., ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ರಾಕೇಶ್ ಎಸ್., ಚಂದ್ರಶೇಖರ ಬಾಣಜಾಲು, ನೆಲ್ಯಾಡಿ ಶ್ರೀ ರಾಮ ಶಾಲಾ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಜಯಂತಿ ಬಿ.ಎಂ., ನೆಲ್ಯಾಡಿ ಗೆಳೆಯರ ಬಳಗದ ಗೌರವಾಧ್ಯಕ್ಷ ರಾಮಚಂದ್ರ ಆಚಾರ್ಯ, ಅಧ್ಯಕ್ಷ ರತ್ನಾಕರ ಕೊಲ್ಯೊಟ್ಟು, ಪುತ್ತೂರು ತಾ| ರಬ್ಬರ್ ಬೆಳೆಗಾರರ ಸಂಸ್ಕರಣ ಸಹಕಾರಿ ಸಂಘದ ನಿರ್ದೇಶಕರಾದ ಜಾರ್ಜ್‌ಕುಟ್ಟಿ ಉಪದೇಶಿ, ಗ್ರೇಸಿ ನೈನಾನ್, ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಸೇರಿದಂತೆ ನೆಲ್ಯಾಡಿಯ ವರ್ತಕರು, ಕಟ್ಟಡ ಮಾಲಕರು, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಜೆಸಿಐ ಪದಾಽಕಾರಿಗಳು, ಗ್ರಾಮ ಪಂಚಾಯತ್‌ನವರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಯು.ಪಿ.ವರ್ಗೀಸ್‌ರವರ ಪತ್ನಿ ಅನ್ನಮ್ಮ, ಪುತ್ರರಾದ ಷಾಜಿ ಯು.ವಿ, ಶಿಬು ಯು.ವಿ.,ಶೈಜು ಯು.ವಿ., ಪುತ್ರಿಯರಾದ ಸೆಲಿನಾ, ಶೈಬಿ, ಅಳಿಯಂದಿರಾದ ರಾಜೇಶ್, ಜೋಸೆ-, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು. ಮೃತರ ಗೌರವಾರ್ಥ ನೆಲ್ಯಾಡಿ ಪೇಟೆಯಲ್ಲಿ ವರ್ತಕರು 1 ತಾಸು ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here