ಎಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಪ್ಪಿನಂಗಡಿ: ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 34 ನೆಕ್ಕಿಲಾಡಿ ಗ್ರಾಮದ ವಿದ್ಯಾರ್ಥಿಗಳನ್ನು ‘ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ‘ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿ, ವಿದಾರ್ಥಿಗಳು ಕಲಿಕಾ ಹಂತದಲ್ಲಿಯೇ ಜೀವನದಲ್ಲಿ ಉತ್ತಮ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಿದಾಗ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ. ಸಾಧಕರನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಕಾರ್ಯ ಸಮಾಜದಲ್ಲಿ ನಡೆದಾಗ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಿದೆ ಎಂದರು.

‘ನಮ್ಮೂರು- ನೆಕ್ಕಿಲಾಡಿ’ಯ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು. ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕಾವೇರಿ, ಶಿಕ್ಷಕಿ ಪೂರ್ಣಿಮಾ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭ ಬೇರಿಕೆ ನಾರಾಯಣ ನಾಯ್ಕ- ಮಮತಾ ದಂಪತಿಯ ಪುತ್ರಿ ಮಾನಸ, ಶಾಂತಿನಗರ ವಾಮನ ನಾಯ್ಕ- ವಿಮಲಾ ದಂಪತಿಯ ಪುತ್ರ ಸುಜಿತ್, ನೆಕ್ಕಿಲಾಡಿ ಪ್ರಭಾಕರ ನಾಯಕ್- ಶಾರದ ದಂಪತಿಯ ಪುತ್ರಿ ಪ್ರತೀಕ್ಷಾ, ನೆಕ್ಕಿಲಾಡಿ ಅಶ್ರಫ್- ಆಯೀಸಮ್ಮ ದಂಪತಿಯ ಪುತ್ರಿ ಸಫ್ನಾಝ್, ದರ್ಬೆ ಸುರೇಶ್- ಅನುರಾಧ ದಂಪತಿಯ ಪುತ್ರಿ ಅಕ್ಷತಾ, ನೆಕ್ಕಿಲಾಡಿಯ ಅಬ್ದುರ್ರಹ್ಮಾನ್ ಯುನಿಕ್- ಜಮೀಳಾ ದಂಪತಿಯ ಪುತ್ರಿ ಆಯಿಷತುಲ್ ರಶೀನಾ, ಬೇರಿಕೆ ಸತೀಶ್- ಪುಷ್ಪಾ ದಂಪತಿಯ ಪುತ್ರಿ ಪ್ರಜ್ಞಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಹಾಸ ಶೆಟ್ಟಿ ಅಲಿಮಾರ್, ‘ನಮ್ಮೂರು- ನೆಕ್ಕಿಲಾಡಿ’ಯ ಶಬೀರ್ ಅಹಮ್ಮದ್, ಫಾರೂಕ್ ಝಿಂದಗಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ನಮ್ಮೂರು- ನೆಕ್ಕಿಲಾಡಿ ಕಾರ್ಯದರ್ಶಿ ಖಲಂದರ್ ಶಾಫಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.