ಪಶು ಆಸ್ಪತ್ರೆಯಲ್ಲಿ ವಿಶ್ವ ಪ್ರಾಣಿಜನ್ಯ ದಿನದ ಅಂಗವಾಗಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

0

ರೇಬಿಸ್ ರೋಗ ಬಂದ ಮೇಲೆ ಮದ್ದಿಲ್ಲ – ಡಾ. ಪ್ರಸನ್ನ ಕುಮಾರ್ ಹೆಬ್ಬಾರ್

ಪುತ್ತೂರು: ರೇಬಿಸ್ ರೋಗ ಬಂದ ಮೇಲೆ ಅದಕ್ಕೆ ಯಾವುದೇ ಔಷಧಿಯಿಲ್ಲ. ಹಾಗಾಗಿ ರೋಗ ಬರುವ ಮುಂದೆ ನಾಯಿಗಳಿಗೆ ಲಸಿಕೆ ಹಾಕಿ ರೋಗ ತಡೆಗಟ್ಟಬಹುದು ಎಂದು ಪುತ್ತೂರು ಪಶು ವೈದ್ಯಾಧಿಕಾರಿ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಅವರು ಹೇಳಿದರು.


ವಿಶ್ವ ಪ್ರಾಣಿ ಜನ್ಯ ದಿನದ ಅಂಗವಾಗಿ ದ.ಕ.ಜಿ.ಪಂ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶು ಆಸ್ಪತ್ರೆ ಪುತ್ತೂರು ಇದರ ವತಿಯಿಂದ ಜು. 6ರಂದು ಪುತ್ತೂರು ಪಶು ಆಸ್ಪತ್ರೆಯಲ್ಲಿ ನಡೆದ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ರೇಬಿಸ್ ರೋಗ ಮಾರಣಾಂತಿಕ ರೋಗ. ಈ ರೋಗ ಬಂದ ಮೇಲೆ ಮದ್ದಿಲ್ಲ. ಬರುವ ಮುಂದೆ ಲಸಿಕೆ ಹಾಕಿ ರೋಗ ತಡೆಗಟ್ಟಬಹುದು. ಅದೇ ರೀತಿ ಪ್ರಾಣಿಗಳಿಗೆ, ಪ್ರಾಣಿಗಳಿಂದ ಮನುಷ್ಯರಿಗೆ ಬಾರದಂತೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಪುತ್ತೂರಿನಲ್ಲಿ ಇಂಡಿಯನ್ ಇಮ್ಯೂನೋಲೋಜಿಕಲ್ ಲಿಮಿಡೆಟ್ ಸಂಸ್ಥೆಯ ಸಹಯೋಗದೊಂದಿಗೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಇಂಡಿಯನ್ ಇಮ್ಯೂನೋಲೋಜಿಕಲ್ ಲಿಮಿಡೆಟ್ ಸಂಸ್ಥೆಯ ಮಾರ್ಕೆಟಿಂಗ್ ಪ್ರತಿನಿಧಿ ದಾಮೋದರ್, ಪಶು ಆಸ್ಪತ್ರೆಯ ಸೀನಿಯರ್ ಇನ್‌ಸ್ಪೆಕ್ಟರ್ ಪ್ರಶಾಂತ್, ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ ಗೌಡ, ಕಿರಿಯ ಇನ್‌ಸ್ಪೆಕ್ಟರ್ ಪುಂಡರಿಕಾಕ್ಷ ಸಿಬ್ಬಂದಿಗಳು ಮತ್ತು ಶ್ವಾನದ ಮಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here