ನಿಡ್ಪಳ್ಳಿ; ಜು.6 ರಂದು ಸುರಿದ ಬಾರಿ ಮಳೆಗೆ ಮುಳುಗು ಸೇತುವೆ ಎಂದು ಪ್ರಸಿದ್ದಿಯಾದ ಚೆಲ್ಯಡ್ಕ ಸೇತುವೆ ಮೂರನೇ ಬಾರಿಗೆ ಮುಳುಗಡೆಯಾಗಿದೆ. ಜು.5 ರಂದು ಮುಳುಗಡೆಯಾದ ಸೇತುವೆ ಜು.6 ರಂದು ಮಧ್ಯಾಹ್ನ ಕೇವಲ ಎರಡು ಗಂಟೆ ಮಾತ್ರ ಬಿಡುಗಡೆಯಾಗಿತ್ತು.ಮಧ್ಯಾಹ್ನ ಪುನಃ ಸುರಿದ ಬಾರಿ ಮಳೆಗೆ ಮತ್ತೆ ಮುಳುಗಡೆಯಾಗಿದೆ. ಈ ಭಾಗದ ಜನ ಬಾರಿ ತೊಂದರೆ ಅನುಭವಿಸಿದ್ದು ಈ ರಸ್ತೆಯಲ್ಲಿ ಪುತ್ತೂರು ಸಂಚರಿಸುವ ಬಸ್ಸು ವಾಹನಗಳು ಸಂಟ್ಯಾರ್ ರಸ್ತೆಯಾಗಿ ಚಲಿಸಿದವು.