ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಆಲಂಕಾರು: ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ನಿವೃತ ಯೋಧ ಮತ್ತು ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಲಚಂದ್ರ ಗೌಡ ಬಲ್ನಾಡು ರವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ಹಾಗು ಉತ್ತಮ ಮೌಲ್ಯಗಳನ್ನು ಕಲಿಕೆಯ ಜೂತೆಯಲ್ಲಿ ಅಳವಡಿಸಕೊಳ್ಳಬೇಕೆಂದು ತಿಳಿಸಿ ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಅಗ್ನಿ ಪಥ್ ನ ಮಹತ್ವದ ಬಗ್ಗೆ ಹಾಗೂ ಭಾರತೀಯ ಸೇನಾಪಡೆಯ ಕಿರು ಪರಿಚಯ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಹೇಮಂತ್ ರೈ ಮನವಳಿಕೆ ಯವರು ಸಂದಭೋಚಿತವಾಗಿ ಮಾತನಾಡಿ ಶುಭಾಹಾರೈಸಿದರು. ಸಭಾ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಮಾತನಾಡಿ ಸಮಾಜದಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ, ನಾಯಕರಾಗಿ ನಮ್ಮ ವಿದ್ಯಾಸಂಸ್ಥೆಗೆ ಹಾಗೂ ಊರಿಗೆ ಕೀರ್ತಿ ತರುವ ಕೆಲಸ ಮಾಡಬೇಕೆಂದು ತಿಳಿಸಿ ಶುಭಾಹಾರೈಸಿದರು.

ಮುಖ್ಯ ಗುರುಗಳಾದ ಶ್ರೀಪತಿ ರಾವ್ ನೂತನ ಪದಾದಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ ದಿನೇಶ್, ಕಾರ್ಯದಶಿಯಾಗಿ ನವ್ಯಶ್ರೀ, ಶಿಕ್ಷಣ ಮಂತ್ರಿಯಾಗಿ ದೀಕ್ಷಾ ಯನ್, ಆರೋಗ್ಯ ಮಂತ್ರಿಯಾಗಿ ಕಾವ್ಯಶ್ರೀ, ಕ್ರೀಡಾ ಮಂತ್ರಿಯಾಗಿ ನಯನಶ್ರಿ ಸಾಂಸ್ಕೃತಿಕ ಮಂತ್ರಿಯಾಗಿ ಹರ್ಷಿತಾ,ತೋಟಗಾರಿಕಾ ಮಂತ್ರಿಯಾಗಿ ಲವನ್ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಶಾಲಾ ನಾಯಕಿಯಾಗಿ ಧನ್ಯಶ್ರೀ, ಶಿಕ್ಷಣ ಮಂತ್ರಿಯಾಗಿ ಮೇಘಶ್ರೀ, ಕ್ರೀಡಾ ಮಂತ್ರಿಯಾಗಿ ರೂಪಿಕಾ, ಸಾಂಸ್ಕೃತಿಕ ಮಂತ್ರಿಯಾಗಿ ಕೃತಿಕಾ ಕೆ ಎಸ್ ತೋಟಗಾರಿಕಾ ಮಂತ್ರಿಯಾಗಿ ಕಾವ್ಯ ಕೆ, ಆರೋಗ್ಯ ಮಂತ್ರಿಯಾಗಿ ಪವನ್ ಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ರಾಮರಾಜ ನಗ್ರಿ, ತಾರಾನಾಥ ರೈ ನಗ್ರಿ, ದಯಾನಂದ ಗೌಡ ಆಲಡ್ಕ,ವಿಜಯ ಕುಮಾರ್ ರೈ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ನವೀನ್ ರೈ ಸ್ವಾಗತಿಸಿ ಸಮಾಜ ಶಾಸ್ತ್ರ ಉಪನ್ಯಾಸಕಿಯಾದ ಆಶಾ ಡಿ ಜಿ ವಂದಿಸಿದರು, ಕನ್ನಡ ಉನ್ಯಾಸಕಿಯಾದ ರೂಪ ಕಾರ್ಯಕ್ರಮ ನಿರೂಪಿಸಿದರು . ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ಹಾಗು ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here