ಜು. 9: ಉಪ್ಪಿನಂಗಡಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

0

ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ 33ನೇ ವರ್ಷದ ಪದಗ್ರಹಣ ಸಮಾರಂಭ ಜುಲೈ 9ರಂದು ಸಾಯಂಕಾಲ ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ಜಿ. ಜಗದೀಶ್ ನಾಯಕ್ ತಿಳಿಸಿದರು.

ಅವರು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ 5 ಸಾವಿರ ರೂಪಾಯಿ ವೆಚ್ಚದಲ್ಲಿ ಕೊಯಿಲ ಅಂಗನವಾಡಿ ಕೇಂದ್ರದಲ್ಲಿ ಗೋಡೆ ಬರಹ ಮಾಡಿಕೊಡಲಾಗಿದೆ. ಅಲ್ಲಲ್ಲಿ ಗಿಡ ನೆಡುವುದರ ಮೂಲಕ ಕಾರ‍್ಯಕ್ರವನ್ನು ನಡೆಸಲಾಗಿದೆ. ಕ್ಲಬ್ಬಿನ ಪೂರ್ವಾಧ್ಯಕ್ಷ ಚಂದಪ್ಪ ಮೂಲ್ಯ ಇವರ ಪ್ರಯೋಜಕತ್ವದಲ್ಲಿ ಗುರುವಾಯನಕೆರೆ ಸೇವಾಶ್ರಮಕ್ಕೆ 35 ಸಾವಿರ ರೂಪಯಿ ಧನ ಸಹಾಯ ನೀಡಲಾಗಿದೆ.

ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯ ಎಕೆಎಸ್. ವಿಶ್ವಾಸ ಶೆಣೈಯವರ ಪ್ರಯೋಜಕತ್ವದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿನಿ ಶ್ವೇತಾ ಎಸ್. ರೈಯವರಿಗೆ 38500 ರೂಪಾಯಿ ಧನ ಸಹಾಯ, ರೋಟರಿ ಕ್ಲಬ್ ಪುತ್ತೂರು ಸಿಟಿ ಮೂಲಕ ಕೆಮ್ಮಾರ ಪ್ರಾಥಮಿಕ ಶಾಲೆಗೆ 45000 ವೆಚ್ಚದಲ್ಲಿ ಪೈಟಿಂಗ್ ವ್ವವಸ್ಥೆಗೆ ಪ್ರಾಯೋಜಕತ್ವ ನೀಡಲಾಗಿದೆ. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಅವರ ಕನಸಿನಂತೆ ಜಲಸಿರಿ, ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸನ್ಮಾನ: ಪದಗ್ರಹಣ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವಂದನಾ ಮುದಲಾಜೆಯವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಪದಗ್ರಹಣ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಎಂ. ರಂಗನಾಥ್ ಭಟ್, ಸಹಾಯಕ ಗವರ್ನರ್ ಮಂಜುನಾಥ್ ಆಚಾರ್ಯ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ
ಉಮಾನಾಥ್ ಪಿ.ಬಿ., ಝೋನಲ್ ಲೆಫ್ಟಿನೆಂಟ್ ಮಹಮ್ಮದ್ ವಲವೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೊಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನೀರಜ್ ಕುಮಾರ್ ಎ., ಕಾರ್ಯದರ್ಶಿ ಎನ್. ಗಿರಿಧರ್ ನಾಯಕ್, ಕೋಶಾಧಿಕಾರಿ ಸ್ವರ್ಣೇಶ್ ಗಾಣಿಗ, ಪೂರ್ವಾಧ್ಯಕ್ಷ ಚಂದಪ್ಪ ಮೂಲ್ಯ, ಕ್ಲಬ್ ಸರ್ಜೆಂಟ್ ರಾಜೇಶ್ ಡಿಂಡಿಗಲ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here