ಬೆಳಂದೂರು ಕಾಲೇಜಿನಲ್ಲಿ ಕಾಲೇಜು ಮಟ್ಟದ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಫೆಸ್ಟ್

0

  • ಮೂಗಿನ ನೇರಕ್ಕೆ ಕೊಟ್ಟ ವ್ಯಾಖ್ಯಾನಗಳು ಎಲ್ಲರನ್ನೂ ಆಕರ್ಷಿಸುತ್ತಿದೆ- ಪ್ರದೀಪ್ ಆರ್ ಗೌಡ

ಕಾಣಿಯೂರು: ವಿದ್ಯಾರ್ಥಿಗಳನ್ನು ಪ್ರಪಂಚಕ್ಕೆ ಅತ್ಯಂತ ಸದೃಢರನ್ನಾಗಿ, ದೇಶ ಭಕ್ತರನ್ನಾಗಿ ಮಾಡುವಂತಹ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿಶ್ವದ ಯಾವುದೇ ಮೂಲೆಗಳಿಂದ ಒಳ್ಳೆಯ ವಿಚಾರಗಳು ಬಂದಾಗ ಅದನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರ ಪ್ರತಿಯೊಂದು ನುಡಿಯು, ನಡೆಯೋ ಈ ದೇಶವನ್ನು ಕಟ್ಟುವಲ್ಲಿ ಪ್ರಮುಖವಾಗುತ್ತದೆ ಎಂದುGoldman Sachs Bangalore ಇದರ ಉಪಾಧ್ಯಕ್ಷರಾದ ಪ್ರದೀಪ್ ಆರ್ ಗೌಡ ಅರುವಗುತ್ತು ಹೇಳಿದರು.

ಅವರು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಮಟ್ಟದ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವರ ಮೇಲೆ ನಂಬಿಕೆ ಇರಬೇಕು, ಕೆಲವೊಂದು ಮೂಢನಂಬಿಕೆಗಳಿಗೆ ದಾಸರಾಗಕೂಡದು. , ನನ್ನ ಜೀವನಕ್ಕೆ, ನನ್ನ ವ್ಯಕ್ತಿತ್ವಕ್ಕೆ ಯಾವುದು ಮುಖ್ಯ ಅನ್ನೊದರ ಯೋಚನೆ ಮಾಡಬೇಕಾಗುತ್ತದೆ. ಇವತ್ತು ಮೂಗಿನ ನೇರಕ್ಕೆ ಕೊಟ್ಟ ವ್ಯಾಖ್ಯಾನಗಳು ಎಲ್ಲರನ್ನೂ ಆಕರ್ಷಿಸುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ ಭಟ್ ಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಟಿ.ಎಸ್. ಆಚಾರ್, ಶ್ರೀಧರ ರೈ ಮಾದೋಡಿ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪದ್ಮನಾಭ ಕೆ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕರಾದ ವೆಂಕಟೇಶ ಪ್ರಸನ್ನ ಪಿ.ಕೆ, ಉದ್ಯೋಗ ಭರವಸಾ ಕೋಶದ ಸಂಚಾಲಕರಾದ ಡಾ| ರವಿಚಂದ್ರ ನಾಯ್ಕ, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಕಲಾ ಜಯರಾಮ್ ಅರುವಗುತ್ತು, ವಚನಾ ಪ್ರದೀಪ್ ಅರುವಗುತ್ತು, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಶುಭಾ ಆರ್ ನೋಂಡಾ, ಸೀತಾರಾಮ ಮುಂಡಾಲ, ಶೀನಪ್ಪ ಗೌಡ ಬೈತಡ್ಕ, ಗೌರಿ, ಫೆಸ್ಟ್ ವಿದ್ಯಾರ್ಥಿ ಸಂಚಾಲಕರಾದ ಮವೀಶ್ ಡಿ.ಎಸ್. ತೃತೀಯ ಬಿ.ಕಾಂ. ಮತ್ತು ಅಕ್ಷರ ಎಂ. ತೃತೀಯ ಬಿ.ಕಾಂ., ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಚಾಲಕರಾದ ಸುದೀಪ್ ಎಂ. ತೃತೀಯ ಬಿ.ಕಾಂ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭ: ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ ಭಟ್ ಪಿ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪೊ| ಪ್ರತಿಮಾ ಶೆಟ್ಟಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪದ್ಮನಾಭ ಕೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸ್ವಾಮಿ ಎಸ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಹನುಮಂತ ಗೌಡ ಡಿ.ಎಂ. ಫೆಸ್ಟ್ ವಿದ್ಯಾರ್ಥಿ ಸಂಚಾಲಕರಾದ ಮವೀಶ್ ಡಿ.ಎಸ್. ತೃತೀಯ ಬಿ.ಕಾಂ. ಮತ್ತು ಅಕ್ಷರ ಎಂ. ತೃತೀಯ ಬಿ.ಕಾಂ., ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಚಾಲಕರಾದ ಸುದೀಪ್ ಎಂ. ತೃತೀಯ ಬಿ.ಕಾಂ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಿ.ಪಿ ಜಯರಾಮ ಗೌಡ ಸ್ಮರಣಾರ್ಥ ಸ್ಕಾಲರ್ ಶಿಪ್ ಆರಂಭಕ್ಕೆ ಚಿಂತನೆ

ಬೆಳಂದೂರಿನಲ್ಲಿ ಕಾಲೇಜು ನಿರ್ಮಾಣವಾಗುವಲ್ಲಿ ನನ್ನ ಮಾವ ಸಿ.ಪಿ ಜಯರಾಮ ಗೌಡರ ಪಾತ್ರ ಬಹಳಷ್ಟು ಇತ್ತು. ಆರೋಗ್ಯ ಕೂಡ ಅಷ್ಟೊಂದು ಸರಿಯಿಲ್ಲದ ಸಮಯದಲ್ಲಿಯೂ ವಾರದಲ್ಲಿ ಒಮ್ಮೆ ಬೆಂಗಳೂರಿಗೆ ಹೋಗಿ ಕಾಲೇಜಿಗೆ ಸಂಬಂಧಪಟ್ಟ ಕೆಲಸ ಮುಗಿಸಿಕೊಂಡು ಬರುತ್ತಿದ್ದರು. ಇದು ಊರಿಗೆ ಬೇಕಾಗಿರುವಂತಹ ವಿಚಾರ. ಯಾವುದೇ ರಾಜಕೀಯವಾಗಲೀ, ಪ್ರತಿಷ್ಠೆಗಾಗಲೀ ಈ ಕೆಲಸ ಮಾಡುತ್ತಿಲ್ಲ. ನನಗೆ ರಾಜಕೀಯ ಬೇಕೂ ಇಲ್ಲ. ಒಟ್ಟಿನಲ್ಲಿ ಸಮಾಜಕ್ಕೋಸ್ಕರ ಇಷ್ಟೊಂದು ಕಷ್ಟ ಪಡುತ್ತಿದ್ದೇ ನೆ ಎಂದು ಸಿ.ಪಿ ಜಯರಾಮ ಗೌಡರು ನನ್ನೊಂದಿಗೆ ಹೇಳುತ್ತಿದ್ದರು. ಇಲ್ಲಿನ ಜನರ ಮಿಡಿತ, ಪ್ರೀತಿ ವಿಶ್ವಾಸ ಇದೆಲ್ಲಾ ನೋಡಿದಾಗ ಇದೀಗ ನನಗೆ ಅರ್ಥವಾಗುತ್ತಿದೆ. ಮಣ್ಣಿನ ಗುಣಗಳು ಸಿ.ಪಿ ಜಯರಾಮ ಗೌಡರಂತಹ ವ್ಯಕ್ತಿಗಳಲ್ಲಿ ಪ್ರಕಟವಾಗಿದೆ. ಕಾಲೇಜಿಗೆ ಸದಾ ಚಿರಋಣಿಯಾಗಿದ್ದೇವೆ. ಸಿ.ಪಿ ಜಯರಾಮ ಗೌಡರ ಸ್ಮರಣಾರ್ಥವಾಗಿ ಕಾಲೇಜಿನಲ್ಲಿ ಸ್ಕಾಲರ್‌ಶಿಪ್ ಆರಂಭಿಸಲಿದ್ದೇವೆ. – ಪ್ರದೀಪ್ ಆರ್ ಗೌಡ ಉಪಾಧ್ಯಕ್ಷರು Goldman Sachs Bangalore

LEAVE A REPLY

Please enter your comment!
Please enter your name here