ಕಾವು: ಗ್ರಾಮ ಪಂಚಾಯತ್ ವತಿಯಿಂದ ಪುಸ್ತಕ ಗೂಡು ಉದ್ಘಾಟನೆ

0

ಕಾವು: ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳನ್ನು ಪುಸ್ತಕ ಗ್ರಾಮಗಳಾಗಿ ಬದಲಾಯಿಸಲು “ಪುಸ್ತಕ ಗೂಡು” ಎಂಬ ವಿನೂತನ ಕಾರ್ಯಕ್ರಮ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಅಂಗವಾಗಿ ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಕಾವು ಪಂಚವಟಿ ನಗರದ ಬಸ್ ತಂಗುದಾಣದಲ್ಲಿ ಪುಸ್ತಕ ಗೂಡನ್ನು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಅನಿತಾ ಆಚಾರಿಮೂಲೆ, ನಾರಾಯಣ ಚಾಕೋಟೆ, ಪ್ರವೀಣ್ ಆಮ್ಚಿನಡ್ಕ, ಪುಷ್ಪಲತಾ ಮಾರತ್ತಮೂಲೆ, ಕಾವು ಪಂಚವಟಿ ನಗರದ ವರ್ತಕರು, ರಿಕ್ಷಾ ಚಾಲಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ನ ಗ್ರಂಥಪಾಲಕಿ ಲಾವಣ್ಯರವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಯೋಗೀಶ್ ವಂದಿಸಿದರು.

LEAVE A REPLY

Please enter your comment!
Please enter your name here