ರೋಟರಿ ವಲಯ-4ರ ವಲಯ ಸೇನಾನಿಯಾಗಿ ಪ್ರಮೋದ್ ಮಲ್ಲಾರ

0

ಪುತ್ತೂರು: ರೋಟರಿ ಜಿಲ್ಲೆ 3181 ಇದರ ವಲಯ ನಾಲ್ಕರ 2022-23ನೇ ಸಾಲಿನ ವಲಯ ಸೇನಾನಿಯಾಗಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಮಲ್ಲಾರರವರು ನೇಮಕಗೊಂಡಿದ್ದಾರೆ.

ರೋಟರಿ ಜಿಲ್ಲೆ 3181 ವ್ಯಾಪ್ತಿಗೊಳಪಟ್ಟ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಹೀಗೆ ನಾಲ್ಕು ಕಂದಾಯ ಜಿಲ್ಲೆಗಳಲ್ಲಿನ ಸುಮಾರು 86 ಕ್ಲಬ್‌ಗಳಲ್ಲಿ 2021-22ನೇ ಸಾಲಿನಲ್ಲಿ ಹಮ್ಮಿಕೊಂಡ ಕ್ಲಬ್‌ನಲ್ಲಿನ ಕ್ಲಬ್ ಸರ್ವಿಸ್, ಕಮ್ಯೂನಿಟಿ ಸರ್ವಿಸ್, ಇಂಟರ್‌ನ್ಯಾಷನಲ್ ಸರ್ವಿಸ್, ಯೂತ್ ಸರ್ವಿಸ್, ಪೊಲೀಯೋ ಜಾಗೃತಿ, ಪಬ್ಲಿಕ್ ಇಮೇಜ್ ವ್ಯಾನ್ ಕಾರ್ಯಕ್ರಮ ಮುಂತಾದ ಹಲವು ಸಮಾಜಮುಖಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುರುತಿಸಿ ನೀಡಲ್ಪಡುವ ಉನ್ನತ ಪ್ರಶಸ್ತಿಯಾದ ಪ್ಲಾಟಿನಂ ಫ್ಲಸ್‌ಗೆ ಆಯ್ಕೆಯಾದ ಏಳು ಕ್ಲಬ್‌ಗಳಲ್ಲಿ ಪ್ರಮೋದ್ ಮಲ್ಲಾರರವರು ಅಧ್ಯಕ್ಷರಾಗಿದ್ದ ರೋಟರಿ ಕ್ಲಬ್ ಪುತ್ತೂರು ಸಿಟಿಯು ಭಾಜನವಾಗಿದೆ ಮಾತ್ರವಲ್ಲ ರೋಟರಿ ಮೀಡಿಯಂ ಕ್ಲಬ್ ಕೆಟಗರಿಯಲ್ಲಿ ಜಿಲ್ಲೆಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದಿರುವ ಹೆಗ್ಗಳಿಕೆಯನ್ನು ಗಳಿಸಿರುತ್ತದೆ.

ಪ್ರಮೋದ್ ಮಲ್ಲಾರರವರು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ, ಕ್ಯಾಂಪ್ಕೋ ಉದ್ಯೋಗಿಗಳ ಸಹಕಾರ ಸಂಘದ ನಿರ್ದೇಶಕರಾಗಿ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರುತ್ತಾರೆ. ಕ್ಯಾಂಪ್ಕೋ ಸಂಸ್ಥೆಗೆ ಬರುವ ಮುನ್ನ ಪ್ರಮೋದ್‌ರವರು ಬೆಂಗಳೂರಿನ ಪೀಣ್ಯದ ಪೀಕ್ ಪರ್ಫಾರ‍್ಮೆನ್ಸ್ ಫ್ಯಾಕ್ಟರಿಯಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ ರೋಟರಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ವಿವಿಧ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಪ್ರಮೋದ್ ಮಲ್ಲಾರರವರು ರೋಟರಿ ಸಿಟಿಯ ನಿಕಟಪೂರ್ವ ಉಪಾಧ್ಯಕ್ಷೆ ಹಾಗೂ ಎಲ್‌ಐಸಿಯಲ್ಲಿ ಮುಖ್ಯ ವಿಮಾ ಸಲಹೆಗಾರರಾಗಿರುವ ಪತ್ನಿ ಸ್ವಾತಿ ಮಲ್ಲಾರ ಹಾಗೂ ಬಿಬಿಎ ಪದವಿ ಹೊಂದಿರುವ ಪುತ್ರಿ ಲಿಖಿತಾರವರೊಂದಿಗೆ ದರ್ಬೆಯಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here