ಬಲ್ಯ ಹಿರಿಯ ಪ್ರಾಥಮಿಕ ಶಾಲೆಯ ಸಂಪರ್ಕ ರಸ್ತೆಯ ಅತಿಕ್ರಮಣ ಆರೋಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತಹಸೀಲ್ದಾರ್ ಭೇಟಿ-ತೆರವುಗೊಳಿಸಲು ಸೂಚನೆ

 


ಕಡಬ: ಬಲ್ಯ ಹಿ.ಪ್ರಾ.ಶಾಲೆಯನ್ನು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯ ನಾಲ್ವರು ಅತಿಕ್ರಮಿಸಿರುವ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಡಬ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಜು.6ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 


ಈ ರಸ್ತೆಯು ಬಲ್ಯ ಹಿ.ಪ್ರಾ.ಶಾಲೆ, ಅಂಗನವಾಡಿ ಹಾಗೂ ಬೆಟ್ಟುಮಜಲು-ಪಟ್ಟೆ ಸ್ಥಳೀಯ ಮನೆಗಳಿಗೆ ಸಂಪರ್ಕಿಸುತ್ತದೆ, ಅಲ್ಲದೆ ಈ ಶಾಲೆಯು ಬಲ್ಯ ಬೂತ್ ಸಂಖ್ಯೆ ೧ರ ಮತಗಟ್ಟೆಯಾಗಿದೆ. ಆದುದರಿಂದ ಈ ರಸ್ತೆಯು ಬಹಳ ಪ್ರಮುಖವಾಗಿದ್ದು ಇದೀಗ ಸ್ಥಳೀಯ ಜಾಗದ ವ್ಯಕ್ತಿಗಳು ಅತಿಕ್ರಮಿಸಿ ತಡೆಗೋಡೆ ನಿರ್ಮಾಣಕ್ಕೆ ಯತ್ನಿಸಿದ್ದರು ಎಂದು ಸ್ಥಳೀಯರು ಕಡಬಕ್ಕೆ ಜಿಲ್ಲಾಧಿಕಾರಿ ಆಗಮಿಸಿದ್ದ ವೇಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ್, ಕಂದಾಯ ನಿರಿಕ್ಷಕ ಅವಿನ್,ಗ್ರಾಮಕರಣಿಕೆ ಲಲಿತಾ, ಕುಟ್ರುಪಾಡಿ ಗ್ರಾ.ಪಂ.ಅಧ್ಯಕ್ಷ ಮೋಹನ್ ಕೆರೆಕೋಡಿ, ಪಿಡಿಒ ಆನಂದ ಗೌಡ ಆಗಮಿಸಿದ್ದರು. ಕೂಡಲೇ ಅತಿಕ್ರಮಣ ಮಾಡಲಾದ ಜಾಗವನ್ನು ತೆರವುಗೊಳಿಸಬೇಕೆಂದು ತಹಸೀಲ್ದಾರ್ ಅನಂತ ಶಂಕರ್ ಸ್ಥಳದಲ್ಲಿ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು,ಪೂರ್ಣೇಶ್ ಬಿ.ಎಂ.ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.