ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲ ರಚನೆ

ಪುತ್ತೂರು: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲಾ ವಿಭಾಗದ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಶ್ರೀನಿಧಿ (10ನೇ ತರಗತಿ) ಶಾಲಾ ನಾಯಕನಾಗಿ, ಹಾಗೂ ಅನ್ನಿಕಾ(9ನೇ ತರಗತಿ) ಉಪನಾಯಕಿಯಾಗಿ ಯುಕ್ತಶ್ರೀ(10ನೇ ತರಗತಿ) ಕ್ರೀಡಾ ಮಂತ್ರಿಯಾಗಿ, ವಸುಧಾ.ಭಟ್ (10ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ನಿನಾದ್.ಜಿ.ರೈ (10ನೇ ತರಗತಿ) ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾದರು.


ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿರೀಕ್ಷಿತ್ ಹೆಗ್ಡೆ(7ನೇ ತರಗತಿ) ಶಾಲಾ ನಾಯಕನಾಗಿ, ಆರ್ಯನ್.ಸಿ.ಆರ್(7ನೇ ತರಗತಿ) ಉಪನಾಯಕನಾಗಿ, ಶಮನ್.ಎನ್(7ನೇ ತರಗತಿ) ಕ್ರೀಡಾಮಂತ್ರಿಯಾಗಿ, ನಿಶಿ(7ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ಸಾನ್ವಿ ಎಸ್.ಪ್ರಭು(7ನೇ ತರಗತಿ) ವಿರೋಧಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.