ಪುತ್ತೂರು: ಮನೆ ಬಳಕೆಯ ಎಲ್ಲಾ ಜಿನಸು ಉತ್ಪನ್ನಗಳ ಮಾರಾಟ ಮಳಿಗೆ ಸಾನ್ವಿ ಜನರಲ್ ಸ್ಟೋರ್ ಜು.7 ರಂದು ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರದಿಂದ ೨೦೦ ಮೀಟರ್ ದೂರದಲ್ಲಿರುವ ಅರ್ಚನಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಅರ್ಚನಾ ಸಂಕೀರ್ಣದ ಮಾಲಕ ಬಾಬು ಪೂಜಾರಿ ಬಡಕ್ಕೋಡಿಯವರು ಪ್ರಾರ್ಥಿಸಿದರು. ಸಾನ್ವಿ ಜನರಲ್ ಸ್ಟೋರ್ನ ಮಾಲಕರ ತಾಯಿ ಪುಷ್ಪಾವತಿ ಮತ್ತು ತಂದೆ ನಾರಾಯಣ ಬೆಳ್ಚಪಾಡ ಎರ್ಕ ಅರಿಯಡ್ಕರವರು ದೀಪ ಬೆಳಗಿಸುವ ಮೂಲಕ ಜನರಲ್ ಸ್ಟೋರ್ ಅನ್ನು ಶುಭಾರಂಭ ಮಾಡಿ ಶುಭಾಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಬಾಬು ಎಸ್.ಬೆಳ್ಚಪಾಡ ಎರ್ಕ, ಬರೋಡಾ ಬ್ಯಾಂಕ್ನ ರಾಮದಾಸ್, ಅರಿಯಡ್ಕ ಗ್ರಾಪಂನ ಮಾಜಿ ಅಧ್ಯಕ್ಷರುಗಳಾದ ಸವಿತಾ ಎಸ್, ಆನಂದ ವೈ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಅಂಗಡಿ ಮಾಲಕರ ಸಹೋದರರಾದ ದಿನೇಶ್, ಬಾಲಕೃಷ್ಣ, ರಾಧಾಕೃಷ್ಣ, ಪತ್ನಿ ಸ್ವಾತಿ ದಿನೇಶ್, ಚಲನಚಿತ್ರ ನಟ ಸುಂದರ ರೈ ಮಂದಾರ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ವರ್ತಕರ ಸಂಘದ ಪದಾಧಿಕಾರಿಗಳಾದ ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ ರೈ ಕೊಪ್ಪಳ, ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಉದಯ ಆಚಾರ್ಯ, ಪದ್ಮನಾಭ ಆಚಾರ್ಯ, ಹನೀಫ್, ಶರತ್ಚಂದ್ರ , ಚಿರಾಗ್ ರೈ ಬೆದ್ರುಮಾರ್ ಸೇರಿದಂತೆ ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಜನರಲ್ ಸ್ಟೋರ್ ಮಾಲಕ ದಿನೇಶ್ ಕುಮಾರ್ ಎರ್ಕರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.
` ಸಾನ್ವಿ ಜನರಲ್ ಸ್ಟೋರ್ನಲ್ಲಿ ತರಕಾರಿ, ಅಕ್ಕಿ, ಧಾನ್ಯಗಳು ಸೇರಿದಂತೆ ದಿನಬಳಕೆಯ ಎಲ್ಲಾ ಉತ್ಪನ್ನಗಳು ಲಭ್ಯವಿದೆ. ಉತ್ತಮ ಗುಣಮಟ್ಟದ ಜಿನಸು ಸಾಮಾಗ್ರಿಗಳನ್ನು ಮಾರಾಟ ಮಾಡಲಾಗುತ್ತಿದ್ದು ಗ್ರಾಹಕರು ಸಹಕಾರ ನೀಡುವಂತೆ ಮಾಲಕರು ವಿನಂತಿಸಿಕೊಂಡಿದ್ದಾರೆ.’