ಪುತ್ತೂರು: ಪಡೀಲಿನ ಎನ್. ಎಸ್. ಆರ್ಕೆಡ್ ನ ನೆಲ ಮಹಡಿಯಲ್ಲಿ ಡಾ. ಶಮಾ ಎಂ. ಕೆ.ರವರ “ಮಧುರಾ ಹೋಮಿಯೋಪತಿ ಕ್ಲಿನಿಕ್” ಗುರುವಾರದಂದು ಶುಭಾರಂಭಗೊಂಡಿತು.
ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಪ್ರಸನ್ನಕುಮಾರ್ ರವರು ಕ್ಲಿನಿಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆಯು ದೇಹದಲ್ಲಿನ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೇ ಬಳಸಿಕೊಂಡು ಚಿಕಿತ್ಸೆ ನೀಡುವ ಪದ್ದತಿಯಾಗಿದೆ. ವಾತರೋಗ, ಆಸ್ತಮಾದಂತಹ ರೋಗಗಳಿಗೂ, ಜೀವನ ಶೈಲಿ ಸಂಬಂಧದ ರೋಗಗಳಾದ ಮಧುಮೇಹ, ಏರು ರಕ್ತದೊತ್ತಡ, ಸ್ಥೂಲಕಾಯ, ಇತರ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವೆಂದೆನಿಸುವ ರೋಗಗಳಾದ ಮೂತ್ರಪಿಂಡಗಳ ಕಲ್ಲುಗಳು, ಗರ್ಭಾಶಯದ ಗಡ್ಡೆಗಳು, ಮೂಲವ್ಯಾದಿ ಇವುಗಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆಯೇ ಕೇವಲ ಔಷಧೋಪಚಾರಗಳಿಂದ ಗುಣಪಡಿಸಬಹುದಾದ ಸಾಮರ್ಥ್ಯ ಇದರಲ್ಲಿದೆ ಎಂದು ನುಡಿದರು. ಜೊತೆಗೆ ವೈದ್ಯಕೀಯ ಸೇವೆಯನ್ನು ಗುರಿಯಾಗಿಟ್ಟು, ಡಾ.ಶಮಾ ಎಂ. ಕೆ.ರವರು ಪಡೀಲಿನಲ್ಲಿ ಹೋಮಿಯೋ ಕ್ಲಿನಿಕ್ ತೆರೆಯುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ. ಅವರ ಈ ಸೇವೆಯಲ್ಲಿ ಅವರಿಗೆ ಯಶಸ್ಸು ಸಿಗಲಿ. ಪುತ್ತೂರಿನ ಜನರಿಗೂ ಉತ್ತಮ ವೈದ್ಯಕೀಯ ಸೇವೆ ದೊರೆಯುವಂತಾಗಲಿ ಎಂದು ಹೇಳಿದರು.
ಪುರೋಹಿತರಾದ ಶ್ರೀ ರಾಜ ನಾರಾಯಣ ಭಟ್ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಪುತ್ತೂರಿನ ವೃತ್ತಿನಿರತ ಹೋಮಿಯೋಪತಿ ವೈದರಾದ ಡಾ. ರಮೇಶ್ ಭಟ್, ಡಾ. ಅನೀಶ್ ಕುಮಾರ್, ಪದ್ಮುಂಜದ ಆಯುರ್ವೇದ ವೈದ್ಯರಾದ ಡಾ. ಎಂ. ವೆಂಕಟ್ರಮಣ ಭಟ್ ಭೇಟಿಯಿತ್ತು ಶುಭ ಹಾರೈಸಿದರು. ಶ್ರೀನಿಧಿ ಬೋರವೆಲ್ಸ್ ನ ಮಾಲಕ ಶ್ರೀ ಗೋಪಾಲಕೃಷ್ಣ ಭಟ್, ಟಾಟಾ ಟೆಲಿ ಕಮ್ಯೂನಿಕೇಶನ್ ನ ಶ್ರೀ ರಘುರಾಮಚಂದ್ರ ಚಣಿಲ, ನಿವೃತ್ತ ಇಂಜಿನಿಯರ್ ಶ್ರೀ ಶಂಕರ ಭಟ್, ಶ್ರೀನಾರಾಯಣ ಭಟ್ ಪಡೀಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಲಿನಿಕ್ನ ಡಾ ವೈದ್ಯೆ ಶಮಾಎಂ. ಕೆ.ರವರು ಸ್ವಾಗತಿಸಿ, ಹೋಮಿಯೋಪತಿ ಚಿಕಿತ್ಸೆಯ ಕುರಿತಂತೆ ಮಾಹಿತಿ ನೀಡಿದರು. ಪ್ರಾಧ್ಯಾಪಕ ಡಾ. ರವೀಶ ಪಿ.ಎಂ ವಂದಿಸಿ, ನಿವೃತ್ತ ಉಪಾಧ್ಯಾಯರಾದ ಶ್ರೀಶಂಕರ ನಾರಾಯಣ ಭಟ್, ಕಾಂತಿಲ ಕಾರ್ಯಕ್ರಮ ನಿರ್ವಹಿಸಿದರು.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರ ತನಕ ಹಾಗೂ ಸಂಜೆ 4ರಿಂದ 7 ಗಂಟೆ ತನಕ ತೆರೆದುಕೊಂಡಿರುತ್ತದೆ.
ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ಕ್ಲಿನಿಕ್ ತೆರೆದುಕೊಂಡಿರುತ್ತದೆ. ಕ್ಲಿನಿಕ್ನ ಮೊಬೈಲ್ ನಂ. 9008138322 ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಡಾ. ಶಮಾ ಎಂ. ಕೆ. ರವರು ತಿಳಿಸಿದ್ದಾರೆ.