ಪ್ರಭು ಬಿಲ್ಡಿಂಗ್‌ನಲ್ಲಿ ವೈವಿಧ್ಯ ಇಂಟೀರಿಯರ‍್ಸ್ ಶುಭಾರಂಭ

0

ಪುತ್ತೂರು : ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಸಮೀಪದ ಪ್ರಭು ಬಿಲ್ಡಿಂಗ್‌ನಲ್ಲಿ  ವಸತಿ, ವಾಣಿಜ್ಯ ಸಂಕೀರ್ಣದ ಒಳಾಂಗಣ ವಿನ್ಯಾಸಕ್ಕೆ ಅಳವಡಿಸುವ  ಇಷ್ಕಾ ಮಾರ್ಬಲ್ ಶೀಟ್ಸ್ನ ದಕ್ಷಿಣ ಕನ್ನಡ ಜಿಲ್ಲೆಯ ಅಧೀಕೃತ ವಿತರಕ ಸಂಸ್ಥೆ ವೈವಿಧ್ಯ ಇಂಟೀರಿಯರ್ಸ್  ಜು.8ರಂದು ಬೆಳಿಗ್ಗೆ  ಶುಭಾರಂಭಗೊಂಡಿತು.

ಉಪ್ಪಿನಂಗಡಿ ಅಶ್ವಿನಿ ಟ್ರೇಡರ್ಸ್‌ ನ ಮಾಲಕರಾದ ಪ್ರಕಾಶ್ ಮತ್ತು ಕವಿತಾ ದಂಪತಿ ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಠಾಟಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಯಶೋಧ್ ಕುಮಾರ್ ಬೇರಿಕೆ ಮತ್ತು ವಿದ್ಯಾ ದಂಪತಿ ಎಲ್ಲರ ಸಹಕಾರ ಕೋರಿದರು.

ಗೋಡೆಗಳನ್ನು ಒಳಗೊಂಡಂತೆ ಮನೆಯ ಒಳಾಂಗಣದ ವಿನ್ಯಾಸಕ್ಕೆ ಬಹುಮುಖ ವಸ್ತುವಾಗಿ ವಿವಿಧ ಬಣ್ಣಗಳು ಮತ್ತು ಮಾದರಿಯಲ್ಲಿ ಲೆಕ್ಕವಿಲ್ಲದಷ್ಟು ಆಯ್ಕೆಯ ಮಾರ್ಬಲ್ ಶೀಟ್‌ಗಳ ನೂತನ ಸಂಸ್ಥೆಯನ್ನು ಉಪ್ಪಿನಂಗಡಿ ಅಶ್ವಿನಿ ಟ್ರೇರ‍್ಸ್ ನ ಮಾಲಕ ಪ್ರಕಾಶ್ ರವರು ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ್ರು. ತಂತ್ರಿ ವಿಜಯ ಭಟ್ ನೇತ್ರತ್ವದಲ್ಲಿ ಪೂಜಾ ವಿದಿವಿಧಾನಗಳು ನೆರವೇರಿತು.

ಈ ಸಂದರ್ಭದಲ್ಲಿ  ನ್ಯೂ ಅಶ್ವಿನಿ ಟ್ರೇಡರ‍್ಸ್ ಮಾಲಕ ಗಣೇಶ್, ಅಶ್ವಿನಿ ಬ್ರಿಕ್ಸ್ ಮತ್ತು ಇಂಟರ್ಲಾಕ್, ಅಶ್ವಿನಿ ಎಂಟರ್ಪ್ರೈಸಸ್ ಇದರ ಪಾಲುದಾರರು ಇಂಜಿನಿಯರ್ ಆಕಾಶ್ ಗೌಡ ಉಪ್ಪಿನಂಗಡಿ, ಪ್ರಶಂತಿ ಕ್ಲಿನಿಕ್ ನ ಡಾ| ಶಶಿಧರ್ ಕಜೆ, ಪ್ರಭು ಬಿಲ್ಡಿಂಗ್ ಮಾಲಕ ನಾಗೇಶ್ ಪ್ರಭು, ಪ್ರಸನ್ನ ಪ್ರೆಸ್ ಮಾಲಕ ಗುರುರಾಜ್, ಮಜಲುಮನೆ ನಾರ್ಣಪ್ಪ ಗೌಡ, ಸ್ವಾಗತ್ ಲಾಡ್ಜ್ ನ ಮಾಲಕ ಸೂರಜ್ ಶೆಟ್ಟಿ, ಸಿಝ್ಲರ್ ಗ್ರೂಪ್ ಮಾಲಕ ಪ್ರಸನ್ನ ಶೆಟ್ಟಿ, ಶಿವರಾಮ ಆಳ್ವ ಸಾಜ, ಆಕಾಶ್ ಉಪ್ಪಿನಂಗಡಿ, ಗುರುರಾಜ್ ಬೇರಿಕೆ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂಸ್ಥೆಗೆ ಶುಭಹಾರೈಸಿದ್ರು. ವಿದ್ಯಾ ಯಶೋದ್ ಕುಮಾರ್, ತನ್ವಿ, ತಾನ್ಯ, ಸುಶ್ಮಿತಾ, ಶ್ರದ್ಧಾ, ಶ್ರೇಯಾ, ಮೋಕ್ಷಾ, ದೀಕ್ಷಾ ಜಾನ್ವಿ ಅತಿಥಿಗಳನ್ನು ಸ್ವಾಗತಿಸಿ.

ಸಂಸ್ಥೆಯ ಮಾಲಕ ಯಶೋಧರ್ ಕುಮಾರ್ ಮಾತನಾಡಿ ಮಾರ್ಬಲ್ ಶೀಟ್‌ಗಳಿಗೆ ಕಂಪೆನಿಯಿಂದ 10  ವರ್ಷಗಳ ವಾರಂಟಿಯಿದೆ. ಶೀಟ್‌ನ ಶೈನಿಂಗ್ ಹೋದರೆ ಫುಲ್ ಶೀಟ್ ಅನ್ನೇ ಬದಲಾಯಿಸಿಕೊಡಲಾಗುವುದು. ಸುಮಾರು 30  ರಿಂದ 40 ವರ್ಷ ಇದರ ಬಾಳ್ವಿಕೆಯಿದೆ ಎಂದು ಹೇಳಿದ್ರು.

LEAVE A REPLY

Please enter your comment!
Please enter your name here