ರಾಷ್ಟ್ರ ಮಟ್ಟದ ಢಾಯೀ ಅಖರ್ ಪತ್ರ ಬರವಣಿಗೆ ಸ್ಪರ್ಧೆ; ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸುವಂತೆ ಪುತ್ತೂರು ಅಂಚೆ ವಿಭಾಗದಿಂದ ವಿನಂತಿ

0

ಪುತ್ತೂರು: 2022-12ನೇ ವಿತ್ತೀಯ ವರ್ಷದಲ್ಲಿ ರಾಷ್ಟ್ರೀಯ ಮಟ್ಟದ ಢಾಯೀ ಅಖರ್ ಪತ್ರ ಬರವಣಿಗೆ ಸ್ಪರ್ಧೆಯ ಅಂಗವಾಗಿ ಕರ್ನಾಟಕ ಅಂಚೆ ವೃತ್ತವು ರಾಜ್ಯದ ಜನತೆಯನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದು, ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು, ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪುತ್ತೂರು ಅಂಚೆ ಇಲಾಖೆ ವಿನಂತಿಸಿದೆ.

“2047 ರಲ್ಲಿ ಭಾರತ” ಎಂಬ ವಿಷಯದಲ್ಲಿ ಕನ್ನಡ/ಹಿಂದಿ/ಇಂಗ್ಲಿಷ್ ಭಾಷೆಯಲ್ಲಿ ಇನ್ ಲ್ಯಾಂಡ್ ಲೆಟರ್ ಕಾರ್ಡ್‌ನಲ್ಲಿ ಪತ್ರ ಬರೆಯುವುದು ಮತ್ತು ಎ-4 ಹಾಳೆಯಲ್ಲಿ ಪತ್ರ ಬರೆದು ಅಂಚೆ ಲಕೋಟೆಯಲ್ಲಿ ರವಾನಿಸಬಹುದು. ದೇಶೀಯ ಪತ್ರ ಕಾರ್ಡ್‌ನಲ್ಲಿ 500 ಶಬ್ದಗಳು ಮೀರಿರಬಾರದು ಹಾಗೂ ಎ-4 ಹಾಳೆಯಲ್ಲಿ 1000 ಶಬ್ದಗಳು ಮೀರಿರಬಾರದು. ಕೈ ಬರಹದ ಪತ್ರಗಳಿಗೆ ಮಾತ್ರ ಅವಕಾಶ. 18 ವರ್ಷ ಮತ್ತು ಒಳಗಿನವರು ಮತ್ತು 18 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸಿದವರು ತಮ್ಮ ಬರವಣಿಗೆಯನ್ನು ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ಅಂಚೆ ವಿಭಾಗ, ಪುತ್ತೂರು ಇಲ್ಲಿಗೆ ಕಳುಹಿಸಬೇಕು. ಅ.31 ಪತ್ರ ರವಾನಿಸಲು ಕೊನೆಯ ದಿನಾಂಕವಾಗಿದೆ. ಪ್ರತಿ ವಿಭಾಗದ ಅತ್ಯುತ್ತಮ ಮೂರು ಕೃತಿಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ ರೂ. 5೦,೦೦೦, 25,೦೦೦, 1೦,೦೦೦. ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ ರೂ. 25,೦೦೦, ರೂ.10,೦೦೦ ಮತ್ತು ರೂ.5,೦೦೦ ನೀಡಲಾಗುವುದು. ಭಾರತೀಯ ಅಂಚೆ ಇಲಾಖೆಯ ವತಿಯಿ೦ದ ನಡೆಯುವ ಈ ಪತ್ರ ಲೇಖನ ಸ್ಪರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ೦ತೆಯೂ ಮತ್ತು ಬಹುಮಾನಗಳನ್ನು ಗೆಲ್ಲುವಂತೆಯೂ ವಿನ೦ತಿಸಲಾಗಿದೆ.

LEAVE A REPLY

Please enter your comment!
Please enter your name here