ಸ್ಪೋರ್ಟ್ಸ್ ಸ್ಟೈಲಿಸ್ ರೈಡರ್-125 ಏಸ್ ಮೋಟಾರ್ಸ್ ನಲ್ಲಿ ಮಾರುಕಟ್ಟೆಗೆ

0

ಪುತ್ತೂರು; ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಶೈಲಿ, ಸ್ಪೋರ್ಟ್ಸ್ ಸ್ಟೈಲಿಸ್ ಹೊಂದಿರುವ ರೈಡರ್-125ನ್ನು ಟಿವಿಎಸ್ ವಾಹನಗಳ ಅಧಿಕೃತ ಡೀಲರ್ ಅಗಿರುವ ಬೊಳುವಾರಿನ ಏಸ್ ಮೋಟಾರ್ಸ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಈ ವಾಹನದ ಪ್ರಥಮ ಗ್ರಾಹಕರಾದ ಮೊಹಮ್ಮದ್ ಸಬೀರ್ ನೆಟ್ಟಣಿಗೆ ಮುಡ್ನೂರುರವರಿಗೆ ಸಂಸ್ಥೆಯ ಮ್ಹಾಲಕ ಆಕಾಶ್ ಐತಾಳ್ ಕೀ. ಹಸ್ತಾಂತರಿಸಿದರು.

ಟಿವಿಎಸ್ ಕಂಪನಿಯ ಈ ಹೊಸ ಬೈಕ್ ರೈಡರ್ 125 ಸ್ಪೋರ್ಟಿ ಮತ್ತು ಕಮ್ಯುಟರ್ ಬೈಕ್‌ಗಳ ಸಮ್ಮಿಶ್ರಣವಾಗಿದೆ. ಆಕರ್ಷಕ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್, ಮಸ್ಕುಲರ್ ಲುಕ್ಕಿಂಗ್ ಶೈಲಿಯ ಇಂಧನ ಟ್ಯಾಂಕ್, ಬದಿಯಲ್ಲಿ ಕವಚಗಳು ಮತ್ತು ಎಂಜಿನ್ ಗಾರ್ಡ್ ನ್ನು ಸಹ ಹೊಂದಿದ್ದು ಬೈಕ್‌ನ ಗಮನಾರ್ಹ ವಿನ್ಯಾಸವಾಗಿದೆ. ಈ ಬೈಕ್‌ನಲ್ಲಿ ಕಂಪನಿಯು ಸ್ಪ್ಲಿಟ್ ಸೀಟ್ ನೀಡಿದೆ. ಈ ಸೆಗ್ಮೆಂಟ್‌ನಲ್ಲಿ ಈ ರೀತಿಯ ಸೀಟು ಇರುವುದು ಇದೇ ಮೊದಲಾಗಿದೆ. ಎಲ್‌ಇಡಿ ಟೇಲ್‌ಲೈಡ್ ಸ್ಟೈಲೀಶ್ ಹೊಂದಿದೆ. ಈ ಬೈಕ್ ಹಳದಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಸಂಪೂರ್ಣ ಡಿಜಿಟಲ್ ಕಾನ್ಸೋಲ್ ಹೊಂದಿರುವ ಬೈಕ್‌ನಲ್ಲಿ ಮೂರು ಟ್ರಿಪ್ ಮೀಟರ್ಸ್, ಡಿಸ್ಟನ್ಸಿ ಟು ಎಮ್ಟಿ ಇಂಡಿಕೇಟರ್, ಸ್ಟಾರ್ಟರ್ ಜನರೇಟರ್ ಇಂಡಿಕೇಟರ್, ಗಿಯರ್ ಶಿಫ್ಟ್ ಇಂಡಿಕೇಟರ್, ಅವರೇಜ್ ಸ್ಪೀಡ್ ಇಂಡಿಕೇಟರ್ ಇತ್ಯಾದಿ ಮಾಹಿತಿಗಳನ್ನು ಕಾಣಬಹುದು. ಇದರ ಜೊತೆಗೆ , ಸೈಡ್ ಸ್ಟಸ್ವಿಚ್ ಅನ್ನು ಸೇಫ್ಟಿ ಫೀಚರ್ ಆಗಿ ನೀಡಲಾಗಿದೆ. 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. 5 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ. ಇಂಕೋ ಮತ್ತು ಪವರ್ ಎಂಬ ಎರಡು ರೈಡಿಂಗ್ ಮೋಡ್‌ಗಳಲ್ಲಿ ಈ ಬೈಕ್ ಸಿಗುತ್ತದೆ.‌

ಬೈಕ್‌ನ ಸಸ್ಪೆನ್ಷನ್ ವ್ಯವಸ್ಥೆ ಕೂಡ ಚೆನ್ನಾಗಿದೆ. ಬೈಕ್ ಮುಂಭಾಗದಲ್ಲಿ ಟೆಲೆಸ್ಕಾಪಿಕ್ -ರ್ಕ್ಸ್ ನೀಡಿದ್ದರೆ, ಹಿಂಬದಿಯಲ್ಲಿ ಮೊನೋಶಾಕ್‌ಆಬ್ಸರ್ ಅಳವಡಿಸಲಾಗಿದೆ. ಮುಂಬದಿಯ ಚಕ್ರಕ್ಕೆ ಡಿಸ್ಕ್ ಹಾಗೂ ಹಿಂಬದಿಯಲ್ಲಿ ಡ್ರಮ್ ಬ್ರೇಕ್ ಸಿಸ್ಟಮ್ ಇದೆ. ಈ ನೂತನ ಬೈಕ್ ನ ಪ್ರದರ್ಶನ ಹಾಗೂ ಟೆಸ್ಟ್ ರೈಡ್ ಗೆ ಶೋ ರೂಂನಲ್ಲಿ ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಅತೀ ಕಡಿಮೆ ಮುಂಗಡ ಪಾವತಿ, ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ | ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್ ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್‌ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ ೭೭೬೦೮೮೮೩೩೩ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here