2ನೇ ಮಹಾಯುದ್ಧದಲ್ಲಿ ಹೋರಾಡಿದ್ದ ಯೋಧ ವಿಟ್ಲ ಕೂಟೇಲು ಲ್ಯಾನ್ಸ್ ನಾಯಕ್ ಜೋಸೆಫ್ ಮೈಕಲ್ ವೇಗಸ್ ನಿಧನ

0

ಪುತ್ತೂರು:1945ರಲ್ಲಿ ನಡೆದ ಮಹಾಯುದ್ಧದಲ್ಲಿ ಹೋರಾಡಿದ್ದ, ಶತಾಯಿಶಿ ವಿಟ್ಲದ ಕೂಟೇಲು ನಿವಾಸಿ ಲ್ಯಾನ್ಸ್ ನಾಯಕ್ ಮೈಕಲ್ ವೇಗಸ್(102ವ.) ಜು.7ರಂದು ನಿಧನರಾದರು.

 


ಇಂತ್ರು ವೇಗಸ್ ಮತ್ತು ಅಂಜಲಿ ವೇಗಸ್ ದಂಪತಿ ಪುತ್ರರಾಗಿರುವ ಜೋಸೆಫ್ ಮೈಕಲ್ ವೇಗಸ್‌ರವರು 1944 ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಹುದ್ದೆ ಪಡೆದಿರುವ ಇವರು 1945ರಲ್ಲಿ ನಡೆದ ಮಹಾಯುದ್ಧದಲ್ಲಿ ಇರಾನ್, ಇರಾಕ್, ಬಗ್ದಾದ್, ರಾಂಚಿ, ಪಂಜಾಬ್, ಡೆಹ್ರಾಡೂನ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1952ರಲ್ಲಿ ಸ್ವಯಂ ನಿವೃತ್ತಿ ಪಡೆದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಫ್ಲೋರಿನ್ ಡಿ ಸೋಜ ಹಾಗೂ ೧೧ ಮಂದಿ ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಇಂದು ಅಂತ್ಯಕ್ರಿಯೆ
ಮೃತರ ಮನೆಯಲ್ಲಿ ಜು.೯ರಂದು ಅಂತಿಮ ವಿಧಿ ವಿಧಾನದ ಬಳಿಕ ಸಂಜೆ ೩.೪೫ಕ್ಕೆ ಕೂಟೇಲು ಮನೆಯಿಂದ ವಿಟ್ಲ ಚರ್ಚ್‌ನಲ್ಲಿ ತನಕ ಅಂತಿಮ ಯಾತ್ರೆ ನಡೆದು ಬಳಿಕ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here