ನವೋದಯ ಪ್ರವೇಶ ಪರೀಕ್ಷೆ- ಪ್ರಗತಿ ಸ್ಟಡಿ ಸೆಂಟರ್‌ನ ನಾಲ್ಕು ವಿದ್ಯಾರ್ಥಿಗಳು ಉತ್ತೀರ್ಣ

0

ಪುತ್ತೂರು: ಏಪ್ರಿಲ್‌ನಲ್ಲಿ ನಡೆದ ಜವಾಹರ್ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ತರಬೇತಿ ಪಡೆದ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ಸಂಸ್ಥೆಯಿಂದ ಒಟ್ಟು 34  ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದುಈ ಪೈಕಿ ಕಿಶನ್ ಎಂ., ಪೂರ್ವಿ ಬಿ., ಪ್ರದ್ಯೋತ್ ಕೆ., ಶ್ರೇಯಸ್ ರೈಯವರು ತೆರ್ಗಡೆಹೊಂದಿರುತ್ತಾರೆ. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಪ್ರಾಧಿಕಾರದ ಅಧೀನಕೊಳಪಟ್ಟಂತಹ ನವೋದಯ ವಿದ್ಯಾಲಯದಲ್ಲಿ 6  ರಿಂದ12 ನೇ ತರಗತಿಗೆ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಉಚಿತ ವಸತಿಯುತ ಶಿಕ್ಷಣವನ್ನು ಪಡೆಯಬಹುದಾಗಿದೆ.

2022-23 ಸಾಲಿನ ಜವಾಹರ್ ನವೋದಯ 6 ನೇ ತರಗತಿಯ ಪ್ರವೇಶ ಪರೀಕ್ಷೆಗೆ ದಾಖಲಾತಿ ಪ್ರಾರಂಭಗೊಂಡಿದೆ. ಪ್ರಸ್ತುತ ೫ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here