ಪುತ್ತೂರು: ನಗರಸಭೆ ಪೌರ ಕಾರ್ಮಿಕರಿಗೆ ಇ ಎಸ್ ಐ ಮತ್ತು ಆರೋಗ್ಯ ಮಾಹಿತಿ ಕಾರ್ಯಗಾರವು ಜು.೮ ರಂದು ನಗರಸಭೆ ಸಮುದಾಯ ಭವನದಲ್ಲಿ ನಡೆಯಿತು.
ಇ ಎಸ್ ಐ ವೈದ್ಯಾಧಿಕಾರಿ ಡಾ.ಸುಲೇಖಾ ವರದರಾಜ್ ಅವರು ಚಿಕಿತ್ದಾ ಸೌಲಭ್ಯ ಮತ್ತು ಆರೋಗ್ಯದ ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಎಕ ಬಳಕೆ ಪ್ಲಾಸ್ಟಿಕ್ ಕುರಿತು ಮನೆ ಮನೆ ಕಸ ಸಂಗ್ರಹದ ವೇಳೆ ಜಾಗೃತಿ ಮೂಡಿಸುವಂತೆ ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರಲಕ್ಷ್ಮೀ ಯವರು ವಿವಿಧ ಮಾಹಿತಿ ನೀಡಿದರು.