ಗುಂಡ್ಯ ಸಮೀಪ ಆನೆಮರಿ ಶವ ಪತ್ತೆ

0

ನೆಲ್ಯಾಡಿ: ಶಿರಾಡಿ ಗ್ರಾಮದ ಗುಂಡ್ಯ ಸಮೀಪ, ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನದಿಂದ ತುಸು ದೂರ ಗುಂಡ್ಯ ಹೊಳೆ ಬದಿ ಗಂಡು ಆನೆ ಮರಿಯ ಶವವೊಂದು ಜು.8ರಂದು ಪತ್ತೆಯಾಗಿದೆ.

ಸಕಲೇಶಪುರ ವಲಯ ಅರಣ್ಯ ಅರಣ್ಯ ವ್ಯಾಪ್ತಿಯ ಮಾರನಹಳ್ಳಿ ಶಾಖೆ ಕೆಂಪುಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಆನೆಮರಿ ಶವ ಪತ್ತೆಯಾಗಿದೆ. ಆನೆ ಮರಿಗೆ ಸುಮಾರು 5 ತಿಂಗಳು ಆಗಿರಬಹುದೆಂದು ಹೇಳಲಾಗಿದೆ. ತಾಯಿ ಆನೆಯೊಂದಿಗೆ ಮರಿ ಆನೆ ಆಹಾರ ಹುಡುಕುತ್ತಾ ಬರುವ ವೇಳೆ ಗುಡ್ಡದಿಂದ ಜಾರಿ ಬಿದ್ದಿರಬಹುದು ಅಥವಾ ಹೊಳೆ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಾರನಹಳ್ಳಿ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ್ಪಿನಂಗಡಿ ಅರಣ್ಯ ವಲಯ ವ್ಯಾಪ್ತಿಯ ಶಿರಾಡಿ ಅರಣ್ಯಾಧಿಕಾರಿ ಧೀರಜ್, ಅರಣ್ಯ ರಕ್ಷಕ ಸುನಿಲ್‌ರವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here