ಅಕ್ರಮವಾಗಿ ಸಾಗಿಸುತ್ತಿದ್ದ ಅಕೇಶಿಯಾ ಮರದ ದಿಮ್ಮಿ, ಲಾರಿ ವಶ – ಚಾಲಕ ಬಂಧನ; ಇಬ್ಬರು ಪರಾರಿ

0

ಪುತ್ತೂರು: ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಸಾರ್ವಜನಿಕರ ಸಹಕಾರದಿಂದ ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಗಾಳಿಗುಡ್ಡೆ ಎಂಬಲ್ಲಿ ಜು.6ರಂದು ರಾತ್ರಿ ನಡೆದಿದೆ.

ಪಾಣೆಮಂಗಳೂರು ನಿವಾಸಿ ಲಾರಿ ಚಾಲಕ ಅಶ್ರಫ್ ಬಿನ್ ಅಬ್ಬೋನ್ ಬಂಽತ ಆರೋಪಿಯಾಗಿದ್ದು ಕಣಿಯೂರು ನಿವಾಸಿಗಳಾದ ಮಹಮ್ಮದ್ ಅಶ್ಪಕ್ ಹಾಗೂ ಮಹಮ್ಮದ್ ಅಸೀಫ್ ಎಂಬವರು ತಲೆಮರೆಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಹಾಗೂ ವಾಹನದ ಅಂದಾಜು ಮೌಲ್ಯ ‌೬ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಽಕಾರಿ ಡಾ. ವೈ.ಕೆ.ದಿನೇಶ್‌ ಕುಮಾರ್‌ರವರ ಆದೇಶದಂತೆ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ವಿ.ಕೆ.ಕಾರ್ಯಪ್ಪರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಎ. ರವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪತ್ತೆ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಭರತ್ ವಿ., ಽರಜ್ ಎಸ್., ರಾವುತಪ್ಪ ಬಿರಾದಾರ್, ಅರಣ್ಯ ರಕ್ಷಕರಾದ ಕೆ.ಎನ್.ಜಗದೀಶ, ಪ್ರಶಾಂತ್ ಮಾಳಗಿ ಹಾಗೂ ವಾಹನ ಚಾಲಕ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.

ರಿಕ್ಷಾ ಚಾಲಕರೊಂದಿಗೆ ವಾಗ್ವಾದ: ಬೆಳಾಲು ಕಡೆಯಿಂದ ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಚಾಲಕ ಕಣಿಯೂರು ಸಮೀಪ ರಿಕ್ಷಾವೊಂದಕ್ಕೆ ಸೈಡ್ ಕೊಡದೆ ಇದ್ದ ಹಿನ್ನೆಲೆಯಲ್ಲಿ ಅವರೊಳಗೆ ವಾಗ್ವಾದ ನಡೆದಿದೆ. ಈ ವೇಳೆ ಅನುಮಾನಗೊಂಡ ರಿಕ್ಷಾ ಚಾಲಕರು ಲಾರಿಯನ್ನು ತಡೆದು ಅರಣ್ಯ ಇಲಾಖಾಽಕಾರಿಗಳ ಗಮನಕ್ಕೆ ತಂದಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here