ಶತಾಯುಷಿ ಶೇಕಮಲೆ ಐಸಮ್ಮ ನಿಧನ

0

ಪುತ್ತೂರು; ಅರಿಯಡ್ಕ ಗ್ರಾಮದ ಶೇಕಮಲೆ ನಿವಾಸಿ ದಿ. ಪೋಕರಜ್ಜಾರವರ ಪತ್ನಿ ಐಸಮ್ಮ (106 ವ.) ರವರು ಅಲ್ಪಕಾಲದ ಅಸೌಖ್ಯದಿಂದ ಜು.7 ರಂದು ರಾತ್ರಿ ತನ್ನ ಮೊಮ್ಮಗ ಎಸ್ ಪಿ ಬಶೀರ್ ಅವರ ಮನೆಯಲ್ಲಿ ನಿಧನರಾದರು.‌

ಮೃತರು ಶೇಕಮಲೆ ತರವಾಡು ಕುಟುಂಬದ ಹಿರಿಯ ವ್ಯಕ್ತಿಯಾಗಿದ್ದರು. ಮತದಾನ ಪ್ರಾರಂಭವಾದ ದಿನದಿಂದ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಯಲ್ಲಿಯೂ ತಪ್ಪದೇ ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇದ್ದರೂ ಅಂದಿನ ಇತಿಹಾಸವನ್ನು ಮೆಲುಕು ಹಾಕುತ್ತಿದ್ದ ಇವರ ಬಳಿಗೆ ಅನೇಕ ವಿದ್ಯಾರ್ಥಿಗಳು ಗತ ಕಾಲದ ಇತಿಹಾಸವನ್ನು ಕೇಳಲು ಬರುತ್ತಿದ್ದರು. ಶೇಕಮಲೆ ತರವಾಡಿನ ಹಿರಿಯ ಜೀವವಾಗಿದ್ದ ಐಸಮ್ಮರವರು ಪುತ್ರ ಸುಲೈಮಾನ್ ಶೇಕಮಲೆ, ಪುತ್ರಿಯರಾದ ಕುಂಞಲಿಮ ಸಂಪ್ಯ, ಬೀಫಾತಿಮ ಪುರುಷರಕಟ್ಟೆ, ಅವ್ವಮ್ಮ ಮುಂಡೋಳೆ ಹಾಗೂ ಮೈಮುನಾ ಪಾಣೆಮಂಗಳೂರು 45 ಮೊಮ್ಮಕ್ಕಳು 111 ಮರಿ ಮಕ್ಕಳು ಹಾಗೂ 15 ಮಂದಿ 5 ನೇ ತಲೆಮಾರಿನ ಮರಿಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯಾ ತಂಳ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಪುತ್ತೂರು ತಾಲೂಕು ಮುಸ್ಲಿಂ ಜಮಾತ್ ಗೌರವಾಧ್ಯಕ್ಷ ಪಿ ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ,ಬಿ ಕೆ ಅಬ್ದುಲ್ ರಹಿಮಾನ್ ಫೈಝಿ ಸಂಪ್ಯ, ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು, ಶೇಕಮಲೆ ಮಸೀದಿ ಅಧ್ಯಕ್ಷ ಸಿದ್ದಿಕ್ ಹಾಜಿ , ಸಾದಿಕ್ ಹಾಜಿ ಆಕರ್ಷಣ್, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಸುಂದರಿ, ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಪಂ ಸದಸ್ಯರಾದ ಚಿತ್ರಾ ಬಿ ಸಿ, ಶಾರದಾ, ಲತೀಫ್ ಕುಂಬ್ರ, ರಕ್ಷಿತ್ ರೈ ಮುಗೇರು, ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷೆ ಸವಿತಾ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here