ಕಾಣಿಯೂರು: ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

0

ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿದಲ್ಲಿ ಉಳಿಗಾಲವಿಲ್ಲ-ಮುರಳಿಕೃಷ್ಣ ಹಸಂತಡ್ಕ

ಕಾಣಿಯೂರು: ಗೋ ಹತ್ಯೆ ಹೆಸರಿನಲ್ಲಿ ಭಾವನೆಗಳ ಮೇಲೆಯೇ ಚೆಲ್ಲಾಟ, ಲವ್‌ಜಿಹಾದ್ ಹೆಸರಿನಲ್ಲಿ ನಂಬಿಕೆಯ ಮೇಲೆಯೇ ಆಟ. ಹಿಂದೂ ಸಮಾಜದ ಧಾರ್ಮಿಕ ಕ್ಷೇತ್ರಗಳ ಮೇಲೆ ದೌರ್ಜನ್ಯ. ಹಿಂದೂಗಳ ಮೇಲೆ ದಬ್ಬಾಳಿಕೆ. ಇದನ್ನೇ ಮಾಡಬೇಕು ಎಂದು ಯೋಚನೆ ಮಾಡಿದ್ದಲ್ಲಿ ನಿಮಗೆ ಉಳಿಗಾಲವಿಲ್ಲ ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿನ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಹಾಗೂ ಅಮರಾವತಿಯಲ್ಲಿ ಹಿಂದೂ ಬಂಧುವಿನ ಅಮಾನುಷ ಹತ್ಯೆ ಖಂಡಿಸಿ ಹಾಗೂ ದೇಶಾದ್ಯಂತ ನಡೆಯುತ್ತಿರುವ ಇಸ್ಲಾಂ ಕ್ರೌರ್ಯದ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳಂದೂರು, ಕಾಣಿಯೂರು, ಚಾರ್ವಾಕ ಹಾಗೂ ಪುಣ್ಚತ್ತಾರು ಘಟಕದ ವತಿಯಿಂದ ಜು 7ರಂದು ಕಾಣಿಯೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಭಾಷಣ ಮಾಡಿದರು. ಪ್ರತಿಭಟನಾ ಸಭೆಯಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಹಾಗೂ ನಿರ್ದೇಶಕರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಹಾಗೂ ನಿರ್ದೇಶಕರು, ಗ್ರಾ.ಪಂ.ಸದಸ್ಯರುಗಳು, ಬಜರಂಗದಳ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ ತೆಂಕಿಲ, ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಕುಂಜೂರುಪಂಜ, ವಿಶ್ವ ಹಿಂದೂ ಪರಿಷತ್ ಪುತ್ತೂರು ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿಕುಮಾರ್ ಕೈತಡ್ಕ, ಬಜರಂಗದಳ ಗ್ರಾಮಾಂತರ ಪ್ರಖಂಡ ಸಂಯೋಜಕ್ ವಿಶಾಕ್ ಸಸಿಹಿತ್ಲು, ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕ್ ಹರೀಶ್ ಕುಮಾರ್ ದೋಳ್ಪಾಡಿ, ಬೆಳಂದೂರು ವಲಯ ಬಜರಂಗದಳ ಸಂಚಾಲಕ ಜಗದೀಶ್ ಅಗಳಿ, ಚಾರ್ವಾಕ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಕಾಣಿಯೂರು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ರಾಧಾಕೃಷ್ಣ ಪೆರ್ಲೋಡಿ, ಬೆಳಂದೂರು ವಲಯ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ನಂದನ್ ಕಜೆ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

ನಾವು ಏನಾದರೂ ದೂರು ಕೊಟ್ಟಲ್ಲಿ ಮುಸ್ಲಿಂ ಪುಷ್ಠೀಕರಣಕ್ಕೋಸ್ಕರ ಅದನ್ನು ನಾಳೆ, ನಾಡಿದ್ದು ನೋಡುವ ಎಂದು ದಿನಗಳನ್ನು ಇಟ್ಟುಕೊಳ್ಳಬೇಡಿ. ಅದೇ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಯಾರಾದರೂ ದೂರು ನೀಡಿದರೆ ತಕ್ಷಣ ಅರೆಸ್ಟ್ ಮಾಡಲು ಆಗುತ್ತೆ, ತಕ್ಷಣ ಕೇಸು ದಾಖಲು ಮಾಡಲು ಆಗುತ್ತೆ. ಇವತ್ತು ಇಲಾಖೆಗಳು ಎಚ್ಚರಿಕೆಯನ್ನು ಗಮನಿಸಬೇಕು. ಹಿಂದೂ ಸಂಘಟನೆಯ ಯಾವುದೇ ಒಬ್ಬ ಕಾರ್ಯಕರ್ತ ಭಾರತ ರಾಷ್ಟ್ರದ ಏಳಿಗೆಗೋಸ್ಕರ ರಾಷ್ಟ್ರ ಭಕ್ತಿಯಿಂದ, ರಾಷ್ಟ್ರ ಶ್ರದ್ದೆಯಿಂದ ಧರ್ಮದ ಶ್ರದ್ದೆಯಿಂದ ಕೆಲಸ ಮಾಡುತ್ತಾನೆ ಹೊರತು ಈ ದೇಶಕ್ಕೆ, ಈ ಮಣ್ಣಿಗೆ ದ್ರೋಹ ಬಗೆಯಲು ಸಾಧ್ಯವೇ ಇಲ್ಲ.

ಮುರಳೀಕೃಷ್ಣ ಹಸಂತಡ್ಕ, ಬಜರಂಗದಳ ಪ್ರಾಂತ ಸಹ ಸಂಯೋಜಕ್

LEAVE A REPLY

Please enter your comment!
Please enter your name here