ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಶೈಕ್ಷಣಿಕ ಸಹಮಿಲನ

0

ಪುತ್ತೂರು:ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಯಿಂದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜು.9ರಂದು ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಶಿಕ್ಷಣ ಅಂದರೆ ವ್ಯಕ್ತಿತ್ವ ರೂಪಿಸುವ ಮಾಧ್ಯಮ, ಶಿಕ್ಷಣದಿಂದಾಗಿಯೇ ವ್ಯಕ್ತಿ ಜೀವನ ಹಾಗೂ ಸಮಾಜ ಪರಿವರ್ತನೆ ಆಗುತ್ತದೆ ಈ ರೀತಿಯ ಶಿಕ್ಷಣ ದೇಶದಲ್ಲಿ ಹಿಂದೆ ದೊರೆಯುತ್ತಿತ್ತು. ಆದರೆ ಪರಕೀಯರ ಆಕ್ರಮಣದ ಬಳಿಕ ಶಿಕ್ಷಣ ವ್ಯವಸ್ಥೆ ಹದಗೆಟ್ಟಿತು. ಸಾವಿರಾರು ವರ್ಷಗಳ ಹೋರಾಟದ ಬಳಿಕ ಸ್ವಾತಂತ್ರ್ಯ ಸಿಕ್ಕಿದ ಮೇಲೂ ಅಧಿಕಾರಕ್ಕೆ ಬಂದವರು ದೇಶಭಕ್ತರಾಗಿರಲ್ಲಿ ಅವರು ಇಂಗ್ಲೆಂಡ್ನ ಮಕಾಲೆ ಹಾಗೂ ಕಮ್ಯೂನಿಸ್ಟ್‌ ಮೂಲ ಜನಕ ಮಾಕ್ಸ್೯ ಚಿಂತನೆಯ ಶಿಕ್ಷಣ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೊಳಿಸಿದರು.ಈ ಮೂಲಕ ದೇವರೇ ಇಲ್ಲ ಅನ್ನುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು,ಶಾಲೆಯ ಮೆಟ್ಟಿಲು ಕಾಣದವರು ಶಿಕ್ಷಣ ಮಂತ್ರಿಗಳಾದರು ಈ ಎಲ್ಲದರ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ,ದೇಶಭಕ್ತ ವ್ಯಕ್ತಿ ನಿರ್ಮಾಣದಲ್ಲಿ ನಾವು ಸೋತಿದ್ದೇವೆ ಈ ಕಾರಣಕ್ಕಾಗಿಯೇ ವಿದ್ಯಾಭಾರತಿಯು ಮಹರ್ಷಿ ಶಿಕ್ಷಣವನ್ನು ಯೋಚಿಸಿ ಪ್ರೋತ್ಸಾಹಿಸುತ್ತಿದೆ‌.ಆ ಮೂಲಕ ಮೌಲ್ಯ ಆಧಾರಿತ ಹಾಗೂ ಮೌಲ್ಯ ಉದ್ದೀಪನಗೊಳಿಸುವ ಶಿಕ್ಷಣವನ್ನು ಮಹರ್ಷಿ ಶಿಕ್ಷಣ ನೀಡುತ್ತಿದ್ದು ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ.ಈ ಮೂಲಕ ಗುಲಾಮಿ, ಮೆಕಾಲೆ ಶಿಕ್ಷಣದಿಂದ ಹೊರಬರುವ ಅವಕಾಶವಿದೆ’ಎಂದರು.

ಕಡಬ ಸರಸ್ವತಿ ವಿದ್ಯಾಲಯದ ಕಾರ್ಯದರ್ಶಿ ವೆಂಕಟ್ರಮಣ ಮಂಕುಡೆ ಪ್ರಾಸ್ತಾವಿಕವಾಗಿ ಮಾತನಾಡಿ’ ಪುತ್ತೂರು ಹಾಗೂ ಮಂಗಳೂರಿನಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಿ ವಿದ್ಯಾಭಾರತಿ ಮೂಲಕ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ನಡೆಸುತ್ತಿದ್ದೇವೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಯ ಗುರಿಯನ್ನು ಇರಿಸಿ ಆ ಮೂಲಕ ವಿದ್ಯಾಭಾರತಿ ಕುಟುಂಬವಾಗಿ ಯೋಚನೆ ಮಾಡುವುದೇ ಸಹಮಿಲನದ ಉದ್ದೇಶ ಎಂದ ಪ್ರಭಾಕರ ಭಟ್ ಅವರು 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗುತ್ತಿದೆ. ಈ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಪೋಷಕರೂ ಕೂಡ ಈ ಬಗ್ಗೆ ಒಲವು ತೋರಿಸಬೇಕು. ಮಕ್ಕಳ ಸಂಸ್ಕಾರಯುತ ಬೆಳವಣಿಗೆಗೆ ಶಿಕ್ಷಣ ನೀತಿ ಪೂರಕ. ಎಲ್ಲರೂ ಸೇರಿ ದೇಶ ಕಟ್ಟೋಣ’ ಎಂದರು. ವೇದಿಕೆಯಲ್ಲಿ ವಿದ್ಯಾಭಾರತಿಯ ಜಿಲ್ಲಾಧ್ಯಕ್ಷ ಲೋಕಯ್ಯ.ಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾಭಾರತಿಗೊಳಪಟ್ಟ ಶಾಲೆಗಳಲ್ಲಿ ಕಲಿತು ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿದ್ಯಾಭಾರತಿಯ ಜಿಲ್ಲಾ ಕಾರ್ಯದರ್ಶಿ ರಮೇಶ್.ಕೆ ಸ್ವಾಗತಿಸಿ, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಆಶಾ ಬೆಳ್ಳಾರೆ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಾಧ್ಯಾಪಕರಾದ ಗೀತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here