ನಗರಸಭೆಗೆ ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀ

0

ಪುತ್ತೂರು:ಪುತ್ತೂರು ನಗರಸಭೆಗೆ ನೂತನ ಹಿರಿಯ ಆರೋಗ್ಯ ನಿರೀಕ್ಷಕಿಯಾಗಿ ವರಲಕ್ಷ್ಮೀ ಎಂಬವರು ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಹಿಂದೆ ಮದ್ದೂರು, ಕುಣಿಗಲ್, ಚೆನ್ನಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಇದೀಗ ಪುತ್ತೂರು ನಗರಸಭೆಗೆ ವರ್ಗಾವಣೆಗೊಂಡಿದ್ಧಾರೆ. ಪುತ್ತೂರು ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದ ರಾಮಚಂದ್ರ ಅವರು ವಾರದ ಮೂರು ದಿನ ಬಂಟ್ವಾಳಕ್ಕೆ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಅವರು ವಾರದ ಮೂರು ದಿನ ಸುಳ್ಯಕ್ಕೆ ನಿಯೋಜನೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here