ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ ಕಾನೂನು ಕಾರ್ಯಗಾರ

0

ಪುತ್ತೂರು: ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ ಕಾನೂನು ಕಾರ್ಯಗಾರವು ಜು.8ರಂದು ನ್ಯಾಯಾಲಯ ಸಂಕೀರ್ಣದಲ್ಲಿರುವ ಪರಾಶರ ಹಾಲ್‌ನಲ್ಲಿ ನಡೆಯಿತು.
ನ್ಯಾಯವಾದಿ ಅರಂತನಡ್ಕ ಬಾಲಕೃಷ್ಣ ರೈ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನ್ಯಾಯವಾದಿಗಳು ವಕೀಲಿ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿ ಧರ್ಮವನ್ನು ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆವಿ ವಹಿಸಿ ಮಾತನಾಡಿ ಯುವ ನ್ಯಾಯವಾದಿಗಳು ಕಾರ್ಯಗಾರದ ಲಾಭವನ್ನು ಪಡೆಯಬೇಕೆಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಹಿರಿಯ ನ್ಯಾಯವಾದಿ ಎಸ್ ಸುಧೀರ್ ತೋಳ್ಪಾಡಿ ಅವರು ಮಾತನಾಡಿ ಭಾರತೀಯ ಸಾಕ್ಷ ಅಧಿನಿಯಮದ ಕುರಿತು ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ̧ರೈ ಉಪಾಧ್ಯಕ್ಷ ಕಕ್ವೆಕೃಷ್ಣಪ್ಪ ಗೌಡ, ಕೋಶಾಧಿಕಾರಿ ಶ್ಯಾಮ ಪ್ರಸಾದ್ ಕೈಲಾರ್, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಮತಾ ಸುವರ್ಣ ಪ್ರಾರ್ಥಿಸಿ, ನ್ಯಾಯವಾದಿ ಪ್ರಶಾಂತ್ ಕಾರ್ಯಕ್ರಮನಿರ್ವಹಿಸಿದರು. ನ್ಯಾಯವಾದಿ ವಿಮಲೇಶ್ ಸಿಂಗಾರಕೋಡಿ, ಸುರೇಂದ್ರ, ಅಶೋಕ್, ಸುರೇಂದ್ರ ಸಿ.ಎಚ್ ವಿವಿಧ ಜವಾಬ್ದಾರಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here