ನವೋದಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ : ಬೆಳ್ಳಾರೆ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯ 13 ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ಏಪ್ರಿಲ್‌ನಲ್ಲಿ ನಡೆದ ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ನವೋದಯ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ 13 ವಿದ್ಯಾರ್ಥಿಗಳು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಇಲ್ಲಿನ ಪ್ರಾಥಮಿಕ ವಿಭಾಗದ ಶಿಕ್ಷಕ ದಿನೇಶ್ ಮಾಚಾರ್ ಮತ್ತು ಹರ್ಷಲತಾ ಎಂ ಜೆ ದಂಪತಿಯ ಪುತ್ರಿ ಅಂಶ್ರುತಾ ಎಂ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಇಲ್ಲಿನ ದೇವಿ ಹೈಟ್ಸ್‌ನ ಯೋಗೀಶ್ ಶೆಟ್ಟಿ ಮತ್ತು ಅಮಿತಾ ವೈ ಶೆಟ್ಟಿ ದಂಪತಿಯ ಪುತ್ರ ಅದೃಷ್ಟ್ ವೈ ಶೆಟ್ಟಿ, ಸವಣೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸವಣೂರು ಗ್ರಾಮದ ಮೆದು ಚಂದ್ರಶೇಖರ ಎಂ ಮತ್ತು ಆಶಾಲತಾ ಸಿ.ಎಂ ದಂಪತಿಯ ಪುತ್ರ ಸುಮಂತ್, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದೇಲಂಪಾಡಿ ಗ್ರಾಮದ ರೆಂಜಾಳ ಹರೀಶ್ಚಂದ್ರ ಆರ್.ಎ ಮತ್ತು ಹರ್ಷಿತಾ ಆರ್ ದಂಪತಿಯ ಪುತ್ರಿ ಈಶಾನ್ವಿ ಆರ್, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿನಿ ಶೇಣಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಂಗಯ್ಯ ಜಿ ಮತ್ತು ಕವಿತಾ ಕೆ ದಂಪತಿಯ ಪುತ್ರಿ ಗಾನವಿ ಆರ್, ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪಾಲ್ತಾಡಿಯ ಪುರುಷೋತ್ತಮ ಗೌಡ ಮತ್ತು ಪುಷ್ಪಾವತಿ ದಂಪತಿಯ ಪುತ್ರಿ ತ್ವಿಶಾ ಪಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಬೆಳ್ಳಾರೆ ಗ್ರಾಮದ ಕಲ್ಲೋಣಿ ಶಿವರಾಮ ಬಿ ಮತ್ತು ಭಾರತಿ ಕೆ.ಪಿ ದಂಪತಿಯ ಪುತ್ರ ಅಂಕಿತ್ ಎಸ್.ಬಿ, ಕೋಲ್ಚಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೊಲ್ಚಾರಿನ ಚಂದ್ರಶೇಖರ ಕೆ.ಎ ಮತ್ತು ಶ್ರೀವಾಣಿ ಪಿ.ವಿ ದಂಪತಿಯ ಪುತ್ರ ಜನನ್ ಕೆ.ಸಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಎಣ್ಮೂರುಗುತ್ತು ಕೆ ರಾಜೇಂದ್ರ ಪ್ರಸಾದ್ ಶೆಟ್ಟಿ ಮತ್ತು ಶ್ವೇತಾ ಆರ್ ಶೆಟ್ಟಿ ದಂಪತಿಯ ಪುತ್ರ ತುಷಾರ್ ಶೆಟ್ಟಿ, ದಾಸರಬೈಲು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮರ್ಕಂಜ ಗ್ರಾಮದ ಕಟ್ಟಕೋಡಿಯ ಪದ್ಮನಾಭ ಎನ್.ವಿ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿ ಯಶಿಕಾ ಎನ್, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿನಿ ಐವರ್ನಾಡು ಗ್ರಾಮದ ಬಿರ್ಮುಕಜೆ ಜಯಪ್ರಕಾಶ್ ಬಿ ಮತ್ತು ದೇವಿಕಲಾ ದಂಪತಿಯ ಪುತ್ರಿ ಮಿಶಾ ಬಿ, ಚೊಕ್ಕಾಡಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿ ಅಮರಮುಡ್ನೂರು ಗ್ರಾಮದ ಉಮ್ಮಡ್ಕ ರಜನಿಕಾಂತ್ ಮತ್ತು ರಶ್ಮಿ ದಂಪತಿಯ ಪುತ್ರ ಅಕ್ಷಯ್ ಎಂ.ಆರ್, ಗೂನಡ್ಕ ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಅರಂತೋಡು ಗ್ರಾಮದ ಉಳುವಾರು ತೀರ್ಥರಾಮ ಯು.ಕೆ ಮತ್ತು ರೇಖಾ ಕುಮಾರಿ ಎನ್ ದಂಪತಿಯ ಪುತ್ರಿ ಯು.ಟಿ ಗಾನಶ್ರೀ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ನವೋದಯ ಶಾಲೆಗೆ ಆಯ್ಕೆಯಾದವರು 6 ರಿಂದ 12ನೇ ತರಗತಿಯವರೆಗೆ ಕೇಂದ್ರಿಯ ಪಠ್ಯಕ್ರಮದಲ್ಲಿ ವಸತಿಯುತ ಉಚಿತ ಶಿಕ್ಷಣವನ್ನು ಪಡೆಯಲಿದ್ದಾರೆ.

146 ವಿದ್ಯಾರ್ಥಿಗಳು ಆಯ್ಕೆ

ಜ್ಞಾನದೀಪ ಸಂಸ್ಥೆಯು 14 ವರ್ಷಗಳಿಂದ ನವೋದಯ ಪ್ರವೇಶ ಪರೀಕ್ಷೆಗೆ ತರಗತಿಗಳನ್ನು ನಡೆಸುತ್ತಿದ್ದು, ಪ್ರಸಕ್ತ ವರ್ಷ 13 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಇದುವರೆಗೆ ಇಲ್ಲಿ ತರಬೇತು ಪಡೆದ ಒಟ್ಟು 146 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here