ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

  • ಶೇ.15 ಡಿವಿಡೆಂಟ್, ಪ್ರತಿ ಲೀಟರ್ ಹಾಲಿಗೆ 70ಪೈಸೆ ಬೋನಸ್-ರೇವತಿ

ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಜು.7ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

 

                          ಚಿತ್ರ: ಅಶ್ವಿನಿ ಪುತ್ತೂರು

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ರೇವತಿ ವೀರಪ್ಪ ಪೂಜಾರಿ ಡೆಕ್ಕಾಜೆ ಮಾತನಾಡಿ ಸಂಘ 2021-22ನೇ ಸಾಲಿನಲ್ಲಿ ರೂ. 3,87,123.38೮ ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಶೇ. 15% ಡಿವಿಡೆಂಟ್ ಹಾಗೂ ಪ್ರತೀ ಲೀಟರ್ ಹಾಲಿಗೆ ರೂ. 0.70 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು. ಸದಸ್ಯರು ಉತ್ತಮ ಗುಣ ಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿ ಸಂಘವನ್ನು ಬಲಪಡಿಸಿ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದ.ಕ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಒಕ್ಕೂಟದಿಂದ ಸಿಗುವ ಸವಲತ್ತುಗಳು ಮತ್ತು ಅನುದಾನಗಳ ಕುರಿತು ಮಾಹಿತಿ ನೀಡಿದರು. ದ.ಕ ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ. ಜೀತೇಂದ್ರ ಪ್ರಸಾದ್ ಮಾತನಾಡಿ, ರಾಸುಗಳಿಗೆ ಬರುವ ಕಾಯಿಲೆಗಳಿಂದ ರಕ್ಷಿಸುವುದು. ರಾಸುಗಳಿಗೆ ವಿಮೆ ಮಾಡಿಸುವುದರ ಮಹತ್ವ ವಿವರಿಸಿದರು.

ಸಂಘದ ಉಪಾಧ್ಯಕ್ಷ ಚಂದ್ರಶೇಖರ ಗೌಡ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶೇಖರ ಪೂಜಾರಿ, ದೇವದಾಸ ಗೌಡ, ಜಗನ್ನಾಥ ಶೆಟ್ಟಿ ನಡುಮನೆ, ಚೆನ್ನಪ್ಪ ಗೌಡ, ರತ್ನವರ್ಮ ಆಳ್ವ, ಕೇಶವ ಗೌಡ , ಹರಿಣಾಕ್ಷಿ ಮತ್ತು ಲೀಲಾವತಿ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ ಪೂಜಾರಿ ವರದಿ ಮಂಡಿಸಿದರು. ಹಾಲು ಪರೀಕ್ಷಕ ನಾರಾಯಣ ಸ್ವಾಗತಿಸಿದರು.

LEAVE A REPLY

Please enter your comment!
Please enter your name here