ಪುತ್ತೂರು ತಾ|ಬಂಟರ ಸಂಘದ ಕರ‍್ಯಕಾರಿ ಸಮಿತಿ ಸಭೆ  ಗ್ರಾಮ ಗ್ರಾಮದಲ್ಲಿ ಸಮಿತಿ ರಚನೆ- ಶಶಿಕುಮಾರ್ ರೈ ಬಾಲ್ಯೊಟ್ಟು  ಸಮಾಜಕ್ಕೆ ಹೆಸರು- ಬೂಡಿಯಾರ್ ರಾಧಾಕೃಷ್ಣ ರೈ

0

ಪುತ್ತೂರು : ಪುತ್ತೂರು ತಾಲೂಕು ಬಂಟರ ಸಂಘದ ಕರ‍್ಯಕಾರಿ ಸಮಿತಿ ಸಭೆಯು ಜು. ೯ ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ಗ್ರಾಮ ಗ್ರಾಮದಲ್ಲಿ ಸಮಿತಿ ರಚನೆ- ಶಶಿಕುಮಾರ್ ರೈ ಬಾಲ್ಯೊಟ್ಟು: ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಸಂಘದ ವತಿಯಿಂದ ಬಂಟ್ರೆ ಗೌಜಿ ಕರ‍್ಯಕ್ರಮ ಅದ್ದೂರಿಯಾಗಿ ನಡೆದು, ಬಂಟ ಸಮಾಜದ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ವತಿಯಿಂದ ಜಾಗ ಖರೀದಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಅತೀ ಬೇಗನೆ ಜಾಗ ಖರೀದಿ ನಡೆಯಲಿದ್ದು, ಎಲ್ಲಾ ಸಮಾಜ ಬಾಂಧವರು ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿ, ಮುಂದೆ ಪ್ರತಿ ಗ್ರಾಮ ಗ್ರಾಮಕ್ಕೆ ತೆರಳಿ, ಬಂಟರ ಗ್ರಾಮ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು.

ಸಮಾಜಕ್ಕೆ ಹೆಸರು- ಬೂಡಿಯಾರ್ ರಾಧಾಕೃಷ್ಣ ರೈ: ಪುತ್ತೂರು ತಾಲೂಕು ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಪ್ರತಿ ಗ್ರಾಮ ಗ್ರಾಮದಲ್ಲಿ ಬಂಟರ ಗ್ರಾಮ ಸಮಿತಿ ರಚನೆಯಾಗುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕರ‍್ಯಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಹೇಳಿ, ಬಂಟ್ರೆಗೌಜಿ ಕರ‍್ಯಕ್ರಮ ಅತ್ಯುತ್ತಮವಾಗಿ ನಡೆದು,ಬಂಟ ಸಮಾಜಕ್ಕೆ ಹೆಸರು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕರ‍್ಯದರ್ಶಿ ರಮೇಶ್ ರೈ ಡಿಂಬ್ರಿ, ಸ್ವಾಗತಿಸಿ ಮಾತನಾಡಿ ಬಂಟರ ಸಂಘದ ಮೂಲಕ ನಡೆಯುವ ಮುಂದಿನ ಎಲ್ಲಾ ಕರ‍್ಯಕ್ರಮಗಳಿಗೆ ಪೂರ್ಣ ರೀತಿಯ ಸಹಕಾರ ಸಮಾಜ ಭಾಂದವರಿಂದ ನಿರಂತರವಾಗಿ ದೊರೆಯಲಿ ಎಂದು ಹೇಳಿ, ಈ ಹಿಂದಿನ ಕರ‍್ಯಕ್ರಮದ ವರದಿ ವಾಚಿಸಿದರು. ಬಂಟ್ರೆ ಗೌಜಿ ಕರ‍್ಯಕ್ರಮದ ಲೆಕ್ಕಪತ್ರ ಮಂಡನೆ ಹಾಗೂ ಧನಸಹಾಯ ಕೋರಿ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಲಾಯಿತು. ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು. ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳಾದ ಸುಬ್ಬಣ್ಣ ರೈ ಖಂಡಿಗ, ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ರೋಶನ್ ರೈ ಬನ್ನೂರು, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕರ‍್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಮಾಜಿ ಕರ‍್ಯದರ್ಶಿ ಸ್ವರ್ಣಲತಾ ಜೆ.ರೈ, ಬಂಟರ ಸಂಘದ ಪುತ್ತೂರು ನಗರ ಸಮಿತಿ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ತಾಲೂಕು ಬಂಟರ ಸಂಘದ ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ ಸಾಜ, ಕರುಣಾಕರ ರೈ ದೇರ್ಲ, ಸದಾಶಿವ ರೈ ಸೂರಂಬೈಲು, ಶಶಿಕಿರಣ್ ರೈ ನೂಜಿಬೈಲು, ಶಿವನಾಥ ರೈ ಮೇಗಿನಗುತ್ತು, ಸುಧೀರ್ ಕುಮಾರ್ ಶೆಟ್ಟಿ ತೆಂಕಿಲ, ಸುಭಾಷ್ ಕುಮಾರ್ ಶೆಟ್ಟಿ ಆರುವಾರು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ವಿಕ್ರಂ ಶೆಟ್ಟಿ ಅಂತರ ಕೋಡಿಬಾಡಿ, ಮಿತ್ತಳಿಕೆ ಸರ‍್ಯನಾಥ ಆಳ್ವ, ಎಂ.ಆರ್.ಜಯಕುಮಾರ್ ರೈ ಮಿತ್ರಂಪಾಡಿ, ಅಮ್ಮಣ್ಣ ರೈ ಪಾಪೆಮಜಲು, ನೊಣಾಲು ಜೈರಾಜ್ ಭಂಡಾರಿ ಡಿಂಬ್ರಿ, ಸಂಕಪ್ಪ ರೈ ಎಂ, ಮಹಾಬಲ ರೈ ಒಳತಡ್ಕ, ಭರತ್ ರೈ ಪಾಲ್ತಾಡಿ, ಆನಂದ ರೈ ದೇವಿನಗರ ಮಾಡಾವು, ರಮೇಶ್ ರೈ ಬೊಳಿಕಳ, ಜಗನ್ಮೋಹನ ರೈ ಸೂರಂಬೈಲು, ಉಮಾಪ್ರಸಾದ್ ರೈ ನಡುಬೈಲು, ಬಂಟರ ಭವನದ ಭಾಸ್ಕರ್ ರೈ ಎಂ, ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.

ಆ-೧೩ : ಬಂಟರಸಂಘದಿಂದ ಆಟಿದ ಕೂಟ: 

ತಾಲೂಕು ಬಂಟರ ಸಂಘದಿಂದ ಆ. ೧೩ ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಆಟಿದಕೂಟ ವಿವಿಧ ಕರ‍್ಯಕ್ರಮಗಳೊಂದಿಗೆ ಪುತ್ತೂರು ಬಂಟರ ಭವನದಲ್ಲಿ ನಡೆಯಲಿದ್ದು, ೧೦ ಮಂದಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಭಾಂದವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here