ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 22ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

0

  • ಸಂಪತ್ತಿನ ಭೋಗದ ಭ್ರಮೆಯೊಳಗೆ ಬೀಳಬೇಡಿ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
  • ಭಜನೆಯ ಮೂಲಕ ಸಂಘಟನೆಗೆ ಒತ್ತು ನೀಡಿದ ಸಂತ ಮಾಣಿಲ ಶ್ರೀ: ಬಿ. ನಾಗರಾಜ ಶೆಟ್ಟಿ

 


ವಿಟ್ಲ: ಭಜನೆ ನಮ್ಮೊಳಗಿನ ಅರಿವನ್ನು ಉದ್ದೀಪನ ಗೊಳಿಸುತ್ತದೆ. ಬಾಲಭೋಜನ ಸಂಘಟನಾ ಶಕ್ತಿಗೆ ಪೂರಕ. ಹಣದ ಸಂಪಾದನೆಗಿಂತ ಪುಣ್ಯ ಸಂಪಾಧನೆ ಗೆ ಹೆಚ್ಚು ಮಹತ್ವ ನೀಡಿ. ಸಂಪತ್ತಿನ ಭೋಗದ ಭ್ರಮೆಯೊಳಗೆ ಬೀಳಬೇಡಿ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.5ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ 22ನೇ ದಿನವಾದ ಜು.10ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.


ಭಜನೆಯ ಶಕ್ತಿ ನನ್ನ ರಕ್ತದ ಕಣಕಣದಲ್ಲೇ ಇದೆ. ಬಾಲಬೋಜನಕ್ಕೆ ಹಲವಾರು‌ ವೈಶಿಷ್ಟ್ಯ ವಿದೆ. ಯೋಗ ಭಾಗ್ಯ ಕೂಡಿಬಂದಾಗ ಯಾವುದೇ ಕೆಲಸ ನಿರ್ವಿಘ್ನವಾಗಿ‌ ನೆರವೇರಲು ಸಾಧ್ಯ. ದಾನಗುಣ ಶ್ರೇಷ್ಟವಾದುದು.ಮನುಷ್ಯ ಜೀವನದಲ್ಲಿ ಧಾನಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಕಷ್ಟದಲ್ಲಿರುವವರನ್ನು ಮೇಲಕ್ಕೆತ್ತುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರು.

ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿರವರು ಮಾತನಾಡಿ ಭಜನೆಯ ಮೂಲಕ ಸಂಘಟನೆಗೆ ಒತ್ತು ನೀಡಿದ ಸಂತ ಮಾಣಿಲ ಶ್ರೀ. ಹತ್ತಾರು ಸಾಮಾಜಿಕ ಕಾರ್ಯಕ್ರಮಗಳು ಕ್ಷೇತ್ರದ ಮೂಲಕ ನಡೆದಿದೆ. ಸಂತರ ಪ್ರಾರ್ಥನೆಗೆ ಭಗವಂತ ಅನುಗ್ರಹಿಸುತ್ತಾನೆ. ದೇಶ ಎಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದರೂ ಪ್ರಧಾನಿಯವರ ದಿಟ್ಟ ಆಡಳಿತದಿಂದ ನಾವು ಸುಖಕಾಣುತ್ತಿದ್ದೇವೆ ಎಂದರು.

ಮಂಕುಡೆ ಹಿ.ಪ್ರಾ ಶಾಲಾ ಶಿಕ್ಷಕ ಅಶೋಕ್ , ಮುಜಂಗಾವು ಶ್ರೀ ಭಾರತಿ ವಿದ್ಯಾಪೀಠದ ಶಿಕ್ಷಕಿ ಶಾರದ ಭಟ್, ವಿಹಿಂಪ ಭಜರಂಗದಳದ ವಿಟ್ಲ ಶಾಖೆ ಪೆರುವಾಯಿ ಘಟಕದ ಸಂಚಾಲಕ ಮೋಕ್ಷಿತ್ ಪೆರುವಾಯಿ, ಸೀತಾರಾಮ ಒಳಮೊಗರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಸಮಿತಿ‌ ಅಧ್ಯಕ್ಷೆ ವನಿತಾ ವಿ ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡ್ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಸಮಿತಿ ಸದಸ್ಯೆ ವಸಂತಿ‌ ಚೌಟ ವಂದಿಸಿದರು.

LEAVE A REPLY

Please enter your comment!
Please enter your name here