ಎಡೆಬಿಡದೆ ಸುರಿಯುತ್ತಿರುವ ಮಳೆ-ಕಡಬ-ಪಂಜ ರಸ್ತೆಯ ಪುಳಿಕುಕ್ಕು ಬಳಿ ನದಿ ನೀರು ರಸ್ತೆಗೆ-ರಸ್ತೆ ಸಂಚಾರ ಸ್ಥಗಿತ

0

ಕಡಬ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ಕಡಬ ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯ ನೀರು ರಸ್ತೆಗೆ ನುಗ್ಗಿದ್ದು ಜು.10ರಂದು ಮುಂಜಾನೆಯಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಕಡಬ-ಪಂಜ-ಎಡಮಂಗಲವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಪಕ್ಕದಲ್ಲಿಯೇ ಕುಮಾರಧಾರ ಹೊಳೆ ಹರಿಯುತ್ತಿದೆ.ಮುಖ್ಯವಾಗಿ ಪಂಜವನ್ನು ಸಂಪರ್ಕಿಸುವ ರಸ್ತೆಗೆ ನೀರು ಹರಿದು ಬಂದಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗುವಂತಾಗಿದೆ. ಮಹಾ ಮಳೆಗೆ ಕಡಬ ತಾಲೂಕಿನ ಮೂಲಕ ಹಾದು ಹೋಗುವ ಕುಮಾರಧಾರ, ಗುಂಡ್ಯ ನದಿಗಳು ತುಂಬಿ ಹರಿಯುತ್ತಿದೆ. ಹಳ್ಳ, ತೋಡುಗಳು ಭರ್ತಿಗೊಂಡು ಮಣ್ಣು ಮಿಶ್ರಿತ ನೀರು ನದಿ ಸೇರುತ್ತಿದೆ.

 

ನೂಜಿಬಾಳ್ತಿಲದಲ್ಲಿ ಮನೆ ಛಾವಣಿ ಕುಸಿತ:
ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಬಲಾಡಿ ಮೋಂಟ ಇವರ ಮನೆಯ ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮಕರಣಿಕರಾದ ಸಂತೋಷ್, ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ವಸಂತ ಕುಬಲಾಡಿ ಮೊದಲಾದವರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here