ಪುತ್ತೂರು ತಾಲೂಕಿನಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

0

  • ದೃಢತೆ, ಮರ್ಪಣಾ ಮನೋಭಾವ ಮಾನವನ ಗುಣದ ಪ್ರತಿರೂಪ : ಅಬ್ಬಾಸ್ ಫೈಝಿ

ಪುತ್ತೂರು : ತ್ಯಾಗದ ಸಂಕೇತವಾದ ಈದುಲ್ ಅಝ್‌ಹಾ(ಬಕ್ರೀದ್) ಹಬ್ಬವನ್ನು ಪುತ್ತೂರು ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು. ಎಡೆಬಿಡದ ಮಳೆಯನ್ನು ಲೆಕ್ಕಿಸದೆ ಮುಸ್ಲಿಮರು ಬೆಳಿಗ್ಗೆಯಿಂದಲೇ ಹೊಸ ಬಟ್ಟೆಯನ್ನು ಧರಿಸಿ ಮಸೀದಿಗಳಿಗೆ ಆಗಮಿಸಿದರು. ಮಸೀದಿಯಲ್ಲಿ ನಡೆದ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಮುಸ್ಲಿಮರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈದ್ ಶುಭಾಶಯ ಹಂಚಿಕೊಂಡರು.

ಪುತ್ತೂರು ಬದ್ರಿಯಾ ಮಸೀದಿಯಲ್ಲಿ ನಡೆದ ಸಾಮೂಹಿಕ ನಮಾಜ್, ಖುತುಬ ಪಾರಾಯಣ ಹಾಗೂ ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆರವರು ಮಾತನಾಡಿ ಇಬ್ರಾಹಿಂನೆಬಿ(ಅ) ಮತ್ತು ಇಸ್ಮಾಯಿಲ್‌ನೆಬಿ(ಅ)ರವರು ಅಲ್ಲಾಹುವಿನ ಸಂಪ್ರೀತಿ ಗಳಿಸಲು ಮಾಡಿದ ತ್ಯಾಗದ ಸಂಕೇತವೇ ಊದುಲ್ ಅಝ್‌ಹಾ ಬಕ್ರೀದ್ ಹಬ್ಬದ ಸಂಕೇತವಾಗಿದೆ. ಅದರಂತೆ ನಾವು ಕೂಡ ಅಲ್ಲಾಹುವಿನ ಸಂಪ್ರೀತಿ ಮತ್ತು ಕೃಪೆ ಪಡೆಯುವ ಸಲುವಾಗಿ ಸರ್ವ ರೀತಿಯ ತ್ಯಾಗ ಮಾಡಲು ಮುಂದೆ ಬರಬೇಕಾಗಿದೆ ಎಂದರು. ದೃಢತೆ ಮತ್ತು ಸಮರ್ಪಣಾ ಮನೋಭಾವವು ಮಾನವನ ಗುಣದ ಪ್ರತಿರೂಪವಾಗಿದೆ. ಈ ಬದ್ಧತೆ, ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಅನುಸರಿಸಲು ನಾವು ಪ್ರಯತ್ನಿಸಬೇಕು ಎಂದು ಹೇಳಿದರು.

ಕೇಂದ್ರ ಜುಮ್ಮಾ ಮಸೀದಿ : ಪುತ್ತೂರು ಕೇಂದ್ರ ಜುಮಾ ಮಸೀದಿಯಲ್ಲಿ ನಡೆದ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ ಪುತ್ತೂರು ಜುಮ್ಮಾ ಮಸೀದಿಯ ಮುದರ್ರಿಸ್ ಅಸೈಯದ್ ಅಹಮ್ಮದ್ ಪೂಕೋಯ ತಂಙಳ್ ಮಾತನಾಡಿ ಬಕ್ರೀದ್ ಹಬ್ಬದ ಮಹತ್ವ ವಿವರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್‌ಟಿ ಅಬ್ದುಲ್ ರಝಾಕ್ ಹಾಜಿ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪಡೀಲ್ ಮೊಹಿನುಲ್ ಜುಮಾ ಮಸೀದಿ: ಪಡೀಲ್ ಮೊಹಿನುಲ್ ಇಸ್ಲಾಮ್ ಜುಮಾ ಮಸೀದಿಯಲ್ಲಿ ಖತೀಬ್ ಹನೀಫ್ ದಾರಿಮಿರವರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಆರ್.ಪಿ. ಪಡೀಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ದರ್ಬೆ ಮೊಯ್ಯುದ್ದೀನ್ ಜುಮಾ ಮಸೀದಿ : ದರ್ಬೆ ಮೊಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಅಬ್ದುಲ್ ಹಮೀದ್ ಹನೀಫಿರವರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆ ನಡೆಸಲಾಯಿತು. ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಬಪ್ಪಳಿಗೆ ಮಸ್ಜಿದ್‌ನ್ನೂರ್ ಜುಮಾ ಮಸೀದಿ : ಬಪ್ಪಳಿಗೆ ಮಸ್ಜಿದ್‌ನ್ನೂರ್ ಜುಮಾ ಮಸೀದಿಯಲ್ಲಿ ನಡೆದ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆಯ ನೇತೃತ್ವವನ್ನು ಮಸೀದಿಯ ಖತೀಬ್ ಫಾರೂಕ್ ಸಹದಿರವರು ವಹಿಸಿದ್ದರು. ಮಸೀದಿಯ ಅಧ್ಯಕ್ಷ ಬಿ.ಎಚ್.ಮಹಮ್ಮದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸಾಲ್ಮರ ಸಯ್ಯದ್‌ಮಲೆ ಜುಮಾ ಮಸೀದಿ : ಸಾಲ್ಮರ ಸಯ್ಯದ್‌ಮಲೆ ಜುಮಾ ಮಸೀದಿಯಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ವಿಶೇಷ ನಮಾಜ್, ಖುತುಬ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆಯ ನೇತೃತ್ವವನ್ನು ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರರವರು ವಹಿಸಿದ್ದರು. ಮಸೀದಿ ಅಧ್ಯಕ್ಷ ನೂರುದ್ದೀನ್ ಸಾಲ್ಮರ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here