ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್ಹಾ ಆಚರಣೆ

0

ಪುತ್ತೂರು: ತ್ಯಾಗ ಬಲಿದಾನದ ಸಂದೇಶ ಸಾರುವ ಈದುಲ್ ಅಝ್ಹಾ ಹಬ್ಬವನ್ನು ಕೆಮ್ಮಾಯಿ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಖತೀಬ್ ಉಸ್ತಾದ್ ಇರ್ಷಾದ್ ಸಖಾಫಿ ಮಾತನಾಡಿ ಇಬ್ರಾಹಿಂ (ಅಸ) ಅವರ ಜೀವನದ ತ್ಯಾಗಮಹಿ ಚರಿತ್ರೆಯನ್ನು ವಿವರಿಸಿದರು.

 


ನಂತರ ಪೆರ್ನಾಳ್ ನಮಾಝ್ ,ಖುತುಬಾದ ಬಳಿಕ ಪರಸ್ಪರ ಆಲಿಂಗನದ ಮೂಲಕ ಈದ್ ಶುಭಾಶಯ ವಿನಿಮಯ ಮಾಡಿದರು. ಜಮಾಅತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ ಅನಿಲಕೋಡಿ, ಉಪಾಧ್ಯಕ್ಷರಾದ ಹಸನ್ ಹಾಜಿ, ಕಾರ್ಯದರ್ಶಿ ಅರಮನೆ ಹಾಜಿ, ಖಿದ್ಮತುಲ್ ಇಸ್ಲಾಂ ಯಂಗ್ಮೆನ್ಸ್ ಅಧ್ಯಕ್ಷರಾದ ಇಸ್ಮಾಯಿಲ್ ಕೆಮ್ಮಾಯಿ, ಕಾರ್ಯದರ್ಶಿ ಅಝೀಝ್ ಟೋಪ್ಕೊ, ಪ್ರಮುಖರಾದ ಸಂಶುದ್ದೀನ್, ಲತೀಫ್ ಫ್ಯಾನ್ಸಿ ಹಾಗು ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಯಂಗ್ಮೆನ್ಸ್ ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here