ಕಾಣಿಯೂರು: ಬೈತಡ್ಕದಲ್ಲಿ ಹೊಳೆಗೆ ಬಿದ್ದು ಕಣ್ಮರೆಯಾದ ಯುವಕರಿಬ್ಬರಿಗೆ ಮುಂದುವರಿದ ಶೋಧ ಕಾರ್ಯಾಚರಣೆ

0

ಕಾಣಿಯೂರು: ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಬಳಿಯಿರುವ ಸೇತುವೆಯಿಂದ ಕಾರೊಂದು  ಹೊಳೆಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.11 ರಂದು ಗುತ್ತಿಗಾರು ವಿಪತ್ತು ಘಟಕದವರಿಂದ  ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಣ್ಮರೆಯಾಗಿರುವ ಯುವಕರಿಬ್ಬರ ಸುಳಿವು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಕಾಣಿಯೂರು ಬೈತ್ತಡ್ಕದಲ್ಲಿ ಕಾರೊಂದು ಹೊಳೆಗೆ ಬಿದ್ದಿರುವ ಪ್ರಕರಣವು ಜು.10 ರಂದು ಬೆಳಕಿಗೆ ಬಂದಿದ್ದು ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಎಸ್.ಡಿ.ಆರ್.ಎಫ್ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಕಾರನ್ನು ಪತ್ತೆ ಮಾಡಿ ಕಾರನ್ನು ಮೆಲಕ್ಕೆತ್ತಿದ್ದರು. ಕಾರಿನಲ್ಲಿದ್ದ ಯುವಕರ ಪತ್ತೆ ಗಾಗಿ ಸಂಜೆ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಜು.11ರಿಂದ ಬೆಳಿಗ್ಗೆಯಿಂದ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ  ಎಂದು ತಿಳಿದು ಬಂದಿದೆ.

 

ಘಟನೆಯ ವಿವರ:

ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಬಳಿಯಿರುವ ಸೇತುವೆಯಿಂದ ಕಾರೊಂದು ಹೊಳೆಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಜು.9ರಂದು ತಡರಾತ್ರಿ ನಡೆದಿದ್ದು, ಜು.10ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮಧ್ಯಾಹ್ನದ ವೇಳೆಗೆ ಹೊಳೆ ನೀರಿನಲ್ಲಿ ಕಾರು ಪತ್ತೆಯಾಗಿದ್ದು ಸಂಜೆ ತನಕವು ಶೋಧ ಕಾರ್ಯಾಚರಣೆ ನಡೆಸಿದರೂ ಕಣ್ಮರೆಯಾಗಿರುವ ಯುವಕರಿಬ್ಬರ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜು.11ರಂದು ಮತ್ತೆ ಶೋಧ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.

ನಾಪತ್ತೆಯಾಗಿರುವ ಯುವಕರನ್ನು ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕರವರ ಪುತ್ರ ಧನುಷ್ (25ವ.) ಹಾಗೂ ವಿಟ್ಲ ಕನ್ಯಾನ ನಿವಾಸಿ ರಾಜೇಶ್ ಎಂಬವರ ಪುತ್ರ ಧನುಷ್(21ವ.) ಎಂದು ಗುರುತಿಸಲಾಗಿದೆ. ಸವಣೂರು ಕಡೆಯಿಂದ ಬಂದ ಮಾರುತಿ 800 ಕಾರು ರಾತ್ರಿ 12.02ರ ವೇಳೆಗೆ ಬೈತಡ್ಕ ಮಸೀದಿ ಸಮೀಪದ ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿದೆ. ಈ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಿಂದ ಪ್ರಕರಣ ಬೆಳಕಿಗೆ: ಬೈತಡ್ಕ ಮಸೀದಿಗೆ ಮುಂಜಾನೆ ನಮಾಝ್‌ಗೆ ಬರುತ್ತಿದ್ದವರು ಮಸೀದಿ ಪಕ್ಕದ ತಡೆಗೋಡೆ ಮುರಿದಿರುವುದನ್ನು ಹಾಗೂ ಕಾರಿನ ಬಿಡಿಭಾಗಗಳೂ ಅಲ್ಲಿ ಬಿದ್ದುಕೊಂಡಿರುವುದನ್ನು ಗಮನಿಸಿ, ಈ ವಿಚಾರವನ್ನು ಮಸೀದಿಯ ಧರ್ಮಗುರುಗಳ ಗಮನಕ್ಕೆ ತಂದರು. ಬಳಿಕ ಅವರು ಮಸೀದಿಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ವೇಳೆ ಸವಣೂರು ಕಡೆಯಿಂದ ವೇಗವಾಗಿ ಬಂದ ಮಾರುತಿ 800 ಕಾರೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಹೊಳೆಗೆ ಬೀಳುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆಯ ಕುರಿತಂತೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರಿಂದ ಪರಿಶೀಲನೆ:

ಮಾಹಿತಿ ಪಡೆದುಕೊಂಡ ಬೆಳ್ಳಾರೆ ಪೊಲೀಸರು ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡರು. ಹೊಳೆಗೆ ಬಿದ್ದಿರುವ ಮಾರುತಿ 800 ಕಾರನ್ನು ಸವಣೂರಿನ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ರಾತ್ರಿ 11.53ಕ್ಕೆ ಗಸ್ತು ನಿರತ ಪೊಲೀಸರು ತಪಾಸಣೆ ನಡೆಸಿದ್ದರು. ಅಲ್ಲಿಂದ ಮುಂದೆ ಸಾಗಿ ರಾತ್ರಿ 12 ಗಂಟೆ 2 ನಿಮಿಷಕ್ಕೆ ಕಾರು ಸೇತುವೆಗೆ ಡಿಕ್ಕಿಯಾಗಿ ತಡೆಗೋಡೆ ಮುರಿದು ಕೆಳಕ್ಕೆ ಬಿದ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಾರು ಹೊಳೆಗೆ ಬಿದ್ದಿರುವುದು ದೃಢಗೊಂಡ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಹೊಳೆ ನೀರಿನಲ್ಲಿ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯ ಈಜುಗಾರರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಾಥ್ ನೀಡಿದರು.

ಮಧ್ಯಾಹ್ನದ ವೇಳೆಗೆ ಕಾರು ಮೇಲಕ್ಕೆ:

ಪತ್ತೆ ಕಾರ್ಯಾಚರಣೆಯ ಆರಂಭದಲ್ಲಿ ಅಗ್ನಿಶಾಮಕ ದಳದವರ ಜೊತೆಗೆ ಸ್ಥಳೀಯ ಈಜುಗಾರರಾದ ಕೇಶವ ಗೌಡ ಬೈತಡ್ಕ, ಜಯಂತ್ ಅಣವುಮೂಲೆ ಹುಡುಕಾಟ ನಡೆಸಿದಾಗ ಕಾರು ಸೇತುವೆಯ ಕೆಳಭಾಗದಲ್ಲಿ ಸ್ವಲ್ಪ ದೂರದಲ್ಲಿಯೇ ಪತ್ತೆಯಾಯಿತು. ಅದನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹಿಡಿತ ತಪ್ಪಿ ಕಾರು ನೀರಿನ ಸೆಳೆತಕ್ಕೆ ಸಿಲುಕಿ ಮತ್ತಷ್ಟು ಕೆಳಕ್ಕೆ ಜಾರಿ ಹೋಯಿತು. ಬಳಿಕ ಮುಳುಗುತಜ್ಞರಾದ ಉಮರಬ್ಬ ಮುಲಾರ್, ನಝೀರ್ ಮಾಂತೂರು, ನಝೀರ್ ಮುಂಡತಡ್ಕ, ಇಕ್ಬಾಲ್ ಅರ್ತಿಕೆರೆ, ಲತೀಫ್ ಮಾಂತೂರು, ಸಮೀರ್, ರಝಾಕ್ ಮಾಂತೂರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಗ್ಗದ ಮುಖಾಂತರ ಕಾರನ್ನು ಹೊಳೆ ನೀರಿನಿಂದ ಮೇಲಕ್ಕೆ ಎತ್ತಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ಈ ಕಾರ್ಯಾಚರಣೆ ನಡೆಯಿತು. ಅಪಘಾತದಿಂದ ಕಾರಿನ ನಂಬರ್ ಪ್ಲೇಟ್ ಕಳಚಿ ಹೋಗಿದ್ದು, ನದಿಗೆ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜು ಆಗಿತ್ತು. ಕಾರಿನಲ್ಲಿ ಒಂದು ಮೊಬೈಲ್ -ನ್ ಹಾಗೂ ಪೆಟ್ರೋಲ್ ಇದ್ದ ಬಾಟಲಿ ಪತ್ತೆಯಾಗಿದೆ.

ಕಣ್ಮರೆಯಾದವರಿಗೆ ಶೋಧ: ಕಾರು ಪತ್ತೆಯಾದರೂ ಕಾರಲ್ಲಿ ಇದ್ದವರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಣ್ಮರೆಯಾಗಿರುವ ಯುವಕರಿಗಾಗಿ ಸಂಜೆ ತನಕವೂ ಹೊಳೆ ನೀರಿನಲ್ಲಿ ಶೋಧ ನಡೆಸಲಾಗಿದೆ. ಪೊಲೀಸರು ಹಾಗೂ ಕಂದಾಯ ಇಲಾಖೆಯವರ ಸಹಕಾರದೊಂದಿಗೆ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಶೋಧ ಕಾರ್ಯ ನಡೆಸಿದರು. ಕಣ್ಮರೆಯಾಗಿರುವ ಯುವಕರಿಬ್ಬರು ಸಂಬಂಧಿಕರಾಗಿದ್ದು, ಇಬ್ಬರೂ ಟಿಂಬರ್ ವ್ಯವಹಾರದವರೊಂದಿಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ರಾತ್ರಿ ಹೊತ್ತು, ವ್ಯವಹಾರ ನಿಮಿತ್ತ ಕಾರಿನಲ್ಲಿ ಎಲ್ಲೋ ಹೊರಟಿದ್ದರು ಎನ್ನಲಾಗಿದೆ. ಇವರ ಸಂಬಂಧಿಕರ ಮನೆ ಸುಳ್ಯದ ಗುತ್ತಿಗಾರಿನಲ್ಲಿದ್ದು ಅಲ್ಲಿಗೆ ಹೋಗುವವರಿದ್ದರು ಎಂದು ಅಂದಾಜಿಸಲಾಗಿದ್ದರೂ ಅದ್ಯಾವುದೂ ಸ್ಪಷ್ಟವಾಗಿಲ್ಲ.

ಗೊಂದಲ ಸೃಷ್ಠಿಸಿದ ಹೇಳಿಕೆ: ನಾಪತ್ತೆಯಾಗಿರುವ ವಿಟ್ಲ-ಕುಂಡಡ್ಕ ನಿವಾಸಿ ಧನುಷ್‌ರವರು 12.01ಕ್ಕೆ ದೊಡ್ಡಪ್ಪನಿಗೆ ಕರೆ ಮಾಡಿದ್ದು, ನಮ್ಮ ಕಾರು ಲಾರಿಗೆ ಡಿಕ್ಕಿಯಾಗಿದೆ, ನಾವು ಬದುಕಿ ಉಳಿದಿರುವುದೇ ಹೆಚ್ಚು, ಏನೂ ತೊಂದರೆಯಿಲ್ಲ, ನಾವು ಮನೆಗೆ ಬರುತ್ತಿದ್ದೇವೆ ಎಂದು ಹೇಳಿದ್ದರು ಎಂದು ಘಟನಾ ಸ್ಥಳಕ್ಕೆ ಬಂದಿದ್ದ ಧನುಷ್‌ರವರ ಸಂಬಂಽಕ ರಂಜಿತ್‌ರವರು ಹೇಳಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಕರೆ ಮಾಡಿರುವುದು 11.52ಕ್ಕೆ ಎಂದು ಗೊತ್ತಾಗಿದೆ. ಕಾರು ಹೊಳೆಗೆ ಬೀಳುವ ಮುಂಚೆ ಕರೆ ಮಾಡಲಾಗಿದೆ ಎಂಬ ನಿರ್ಧಾರಕ್ಕೆ ಬರಲಾಯಿತು.

ಜಿಲ್ಲಾ ಹೆಚ್ಚುವರಿ ಪೋಲೀಸ್ ಅಽಕ್ಷಕ ಕುಮಾರ್‌ಚಂದ್ರ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ಡಿವೈಎಸ್ಪಿ ಡಾ|ಗಾನ ಪಿ.ಕುಮಾರ್, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ, ಕಡಬ ತಹಶಿಲ್ದಾರ್ ಅನಂತಶಂಕರ್, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಬೆಳ್ಳಾರೆ ಠಾಣಾಽಕಾರಿ ರುಕ್ಮ ನಾಯ್ಕ್, ಕಡಬ ಠಾಣಾಽಕಾರಿ ಆಂಜನೇಯ ರೆಡ್ಡಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here