ಈಗ ಸಿನಿಮಾ ವೀಕ್ಷಣೆಯಲ್ಲಿ ಸಿಗುವ ಮಜಾನೇ ಬೇರೆ… ಹೊಸತನದೊಂದಿಗೆ ತೆರೆದುಕೊಂಡ ಅರುಣಾ ಥಿಯೇಟರ್

0

@ ಸಿಶೇ ಕಜೆಮಾರ್

ಪುತ್ತೂರು: ಆಧುನಿಕ ಡಿಜಿಟಲ್ ಯುಗದಲ್ಲಿ ಟಾಕೀಸ್‌ಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ ಹಾಗಂತ ಟಾಕೀಸ್‌ನ ಬಿಗ್ ಸ್ಕ್ರೀನ್‌ನಲ್ಲಿ ನೋಡುವ ಸಿನಿಮಾದಲ್ಲಿ ಸಿಗುವ ಮಜಾ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಆದ್ದರಿಂದಲೆ ಇಂದಿಗೂ ಜನರು ಟಾಕೀಸ್‌ಗೆ ಬಂದು ಸಿನಿಮಾ ನೋಡುತ್ತಾರೆ. ಟಾಕೀಸ್‌ಗೆ ಬರುವ ಸಿನಿ ಪ್ರೇಕ್ಷಕರಿಗೆ ಇನ್ನಷ್ಟು ಹೊಸತನವನ್ನು ನೀಡುವ ಮೂಲಕ ಸಿನಿ ರಸಿಕರನ್ನು ಆಕರ್ಷಿಸಲು ಪುತ್ತೂರು ಅರುಣಾ ಚಿತ್ರಮಂದಿರ ಒಂದಷ್ಟು ಬದಲಾವಣೆಗಳನ್ನು ತಂದಿದೆ. ಹತ್ತೂರಿಗೂ ಹೆಸರು ಪಡೆದಿರುವ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಏನೇನು ಬದಲಾವಣೆ ಆಗಿದೆ ಎನ್ನುವುದನ್ನು ನೋಡಬೇಕಾದರೆ ನೀವು ಚಿತ್ರಮಂದಿರಕ್ಕೆ ಬರಲೇ ಬೇಕು, ಸಿನಿಮಾ ನೋಡಲೇಬೇಕು.

 

ಫುಶ್‌ಬ್ಯಾಕ್ ಸೀಟಿನ ವ್ಯವಸ್ಥೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ ಫುಶ್‌ಬ್ಯಾಕ್ ಸೀಟುಗಳ ವ್ಯವಸ್ಥೆಯನ್ನು ಅರುಣಾ ಥಿಯೇಟರ್‌ನಲ್ಲಿ ಮಾಡಲಾಗಿದೆ. ಬಾಲ್ಕನಿ ಮತ್ತು ಕೆಳಗಿನ ಎರಡೂ ಕಡೆಯಲ್ಲೂ ಫುಶ್‌ಬ್ಯಾಕ್ ಸೀಟುಗಳನ್ನು ಅಳವಡಿಸಲಾಗಿದೆ. ಪ್ರೇಕ್ಷಕ ಆರಾಮವಾಗಿ ಕುಳಿತುಕೊಂಡು ಯಾವುದೇ ಧಣಿವಿಲ್ಲದೆ ನೆಮ್ಮದಿಯಿಂದ ಸಿನಿಮಾ ವೀಕ್ಷಿಸಬಹುದಾಗಿದೆ. ಸೀಟು ಫುಶ್‌ಬ್ಯಾಕ್ ಆಗಿರುವುದರಿಂದ ಬೆನ್ನು ನೋವು ಬರುವಂತಹ ಅಥವಾ ಕಿರಿಕಿರಿಯಾಗುವಂತಹ ಯಾವುದೇ ಸಮಸ್ಯೆ ಇರುವುದಿಲ್ಲ, ಆರಾಮವಾಗಿ ಕುಳಿತುಕೊಂಡು ಸಿನಿಮಾವನ್ನು ಆಹ್ಲಾದಿಸಬಹುದಾಗಿದೆ.

7.1 ಸೌಂಡ್ ಸಿಸ್ಟಮ್ಸ್

ಅರುಣಾ ಥಿಯೇಟರ್ ಹಳೇಯ ಥಿಯೇಟರ್ ಆಗಿರುವುದರಿಂದ ಕೆಲವೊಂದು ಸಮಸ್ಯೆಗಳಿತ್ತು ಮೊದಲನೆಯದಾಗಿ ಸೌಂಡ್ ಸರಿಯಾಗಿ ಕೇಳುತ್ತಿಲ್ಲ, ಎಕೋ ಆಗುತ್ತದೆ ಎಂದು ಪ್ರೇಕ್ಷಕರು ದೂರು ನೀಡಿದ್ದರು. ಇದೀಗ ಸೌಂಡ್ ಸಿಸ್ಟಮ್ಸ್ ವ್ಯವಸ್ಥೆಯನ್ನು ಬದಲಾಯಿಸಲಾಗಿತ್ತು 7.1 ಸೌಂಡ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಎಕೋ ಆಗುವುದನ್ನು ತಪ್ಪಿಸುವ ಸಲುವಾಗಿ ಗೋಡೆಗೆ ಎಕೋ ಸ್ಟಿಕ್ ಅಳವಡಿಸಲಾಗಿದೆ. 7.1 ಸೌಂಡ್ ಸಿಸ್ಟಮ್‌ನ ವಿಶೇಷತೆಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಇದನ್ನು ಅನುಭವಿಸಬೇಕಾದರೆ ನೀವು ಅರುಣಾ ಥಿಯೇಟರ್ ಒಂದ್ಸಲ ಸಿನಿಮಾ ನೋಡಲೇಬೇಕಾಗುತ್ತದೆ.

ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಥಿಯೇಟರ್‌ನಲ್ಲಿ ಬದಲಾವಣೆ ಮಾಡಿದ್ದರೂ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಾಲ್ಕನಿಗೆ 100 ರೂ. ಹಾಗೂ ಕೆಳಗಡೆ 80 ರೂ. ಹಿಂದಿನ ದರವನ್ನೇ ನಿಗದಿಪಡಿಸಲಾಗಿದೆ. ಚಿಕ್ಕದಾದ ಥಿಯೇಟರ್ ಆಗಿರುವುದರಿಂದ ಒಟ್ಟು 550 ಸೀಟ್‌ಗಳ ವ್ಯವಸ್ಥೆ ಇದೆ. ಅಡ್ವಾನ್ಸ್ ಬುಕ್ಕಿಂಗ್ ಕಳೆದ 12 ವರ್ಷಗಳಿಂದಲೇ ಇದೆ. ಫೋನ್ ಮೂಲಕವೂ ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದಾಗಿದೆ. ಬಾಲ್ಕನಿಯಲ್ಲಿ ಹೌಸ್‌ಫುಲ್ ಆದರೆ ಕೆಳಗಡೆ 80 ಸೀಟನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಿದವರಿಗೆ ಮೀಸಲು ಇಡಲಾಗುತ್ತಿದೆ.

ಪ್ರೇಕ್ಷಕರ ಸಹಕಾರ ಅಗತ್ಯ

ಹೊಸ ಹೊಸ ಸಿನಿಮಾಗಳನ್ನು ತರುವ ಉದ್ದೇಶ ಇದ್ದರೂ ಕೆಲವೊಂದು ಹಂಚಿಕೆದಾರರು ವಿಪರೀತ ಹಣ ಕೇಳುವುದರಿಂದ ಕೆಲವೊಮ್ಮೆ 2 ಲಕ್ಷದ ಸಿನಿಮಾಕ್ಕೆ 8 ಲಕ್ಷ ರೂ.ತನಕವೂ ಹಣ ಕೇಳುತ್ತಾರೆ ಇದರಿಂದ ಕೆಲವೊಂದು ಸಿನಿಮಾಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಕೆಲವು ಬಾರಿ ನಷ್ಟ ಮಾಡಿಕೊಂಡು ಪ್ರೇಕ್ಷಕರಿಗೆ ಹೊಸ ಹೊಸ ಸಿನಿಮಾಗಳನ್ನು ತಂದು ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಸ್ಕ್ರೀನ್ ಬದಲಾವಣೆಯನ್ನು ಮಾಡಬೇಕು ಎಂದುಕೊಂಡಿದ್ದೇವೆ. ಯಾವುದಕ್ಕೂ ಪ್ರೇಕ್ಷಕರ ಸಹಕಾರ ಅಗತ್ಯ. ಪಲ್ಟಿಪ್ಲೆಕ್ಸ್‌ನ ಅನುಭವವನ್ನು ಇಲ್ಲಿ ಕೊಡಲು ಸಾಧ್ಯವಿಲ್ಲದಿದ್ದರೂ ಪ್ರೇಕ್ಷಕರಿಗೆ ಯಾವುದೇ ಬೇಸರ ಆಗದ ರೀತಿಯಲ್ಲಿ ಎಲ್ಲಾ ವ್ಯಸವ್ಥೆಯೊಂದಿಗೆ ಥಿಯೇಟರ್ ಅನ್ನು ನವೀಕರಣ ಮಾಡಿದ್ದೇವೆ. ಪ್ರೇಕ್ಷಕರು ಟಾಕೀಸ್‌ಗೆ ಬಂದು ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಅರುಣಾ ಟಾಕೀಸ್‌ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನವೀನ್.

[box type=”info” bg=”#” color=”#” border=”#” radius=”22″]ಟಾಕೀಸ್‌ನ ಸೀಟ್‌ಗಳನ್ನು ಹಾಳು ಮಾಡಬೇಡಿ

ಇದು ಟಾಕೀಸ್‌ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನವೀನ್‌ರವರ ಮನವಿಯಾಗಿದೆ. ಕೆಲವು ಮಂದಿ ಸಿನಿಮಾ ನೋಡಲು ಬಂದು ಟಾಕೀಸ್‌ನ ಸೀಟ್‌ಗಳಿಗೆ ಹಾನಿ ಮಾಡುತ್ತಿದ್ದಾರೆ. ಟಾಕೀಸ್‌ನ ಒಳಗಡೆ ಗಲೀಜು ಮಾಡುತ್ತಾರೆ ಇದನ್ನು ದಯವಿಟ್ಟು ಮಾಡಬೇಡಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಟಾಕೀಸ್‌ನ ವಸ್ತುಗಳಿಗೆ ಹಾನಿಯುಂಟು ಮಾಡದೆ ಒಳ್ಳೆಯ ರೀತಿಯಲ್ಲಿ ಸಿನಿಮಾ ವೀಕ್ಷಣೆ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.[/box]

 

[box type=”tip” bg=”#” color=”#” border=”#” radius=”24″]ಯಶಸ್ವಿ ಪ್ರದರ್ಶನ ಕಾಣುತ್ತಿದೆ ಚಾರ್ಲಿ 777

 

ರಕ್ಷಿತ್ ಶೆಟ್ಟಿ ಅಭಿನಯದ ಈಗಾಗಲೇ ಪ್ರದರ್ಶನಗೊಂಡ ಎಲ್ಲಾ ಕಡೆಗಳಲ್ಲೂ ಧೂಳೆಬ್ಬಿಸಿದ ಚಾರ್ಲಿ 777 ಸಿನಿಮಾ ಅರುಣಾ ಥಿಯೇಟರ್ ದಿನಾ 3 ದೇಖಾವೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಾಯಿಯ ಅಭಿನಯಕ್ಕೆ ಈಗಾಗಲೇ ಪ್ರೇಕ್ಷಕರು ಫಿದಾ ಆಗಿದ್ದಾರೆ. ಫ್ಯಾಮಿಲಿ ಸಮೇತ ನೋಡಬಹುದಾದ ಸಿನಿಮಾ ಇದಾಗಿದೆ. ದಿನಪ್ರತಿ ಮಧ್ಯಾಹ್ನ 2, ಸಂಜೆ 6 ಮತ್ತು ರಾತ್ರಿ 9 ಗಂಟೆಗೆ ಪ್ರದರ್ಶನ ಕಾಣುತ್ತಿದೆ. ಬೆಳಗ್ಗಿನ 11 ಗಂಟೆಗೆ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.[/box]

LEAVE A REPLY

Please enter your comment!
Please enter your name here