ಸಂಘ ಸಂಸ್ಥೆಗಳಲ್ಲಿ ಯುವಕರ ಪಾತ್ರ ಹಿರಿದು ;  ಪುತ್ತೂರು ರೋಟರ‍್ಯಾಕ್ಟ್ ಕ್ಲಬ್, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ರೋಟರ‍್ಯಾಕ್ಟ್ ಕ್ಲಬ್ ಪ್ರದಪ್ರದಾನದಲ್ಲಿ ಉಮಾನಾಥ ಪಿ.ಬಿ.

0

ಪುತ್ತೂರು: ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಹಾಗೂ ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಬೊಳುವಾರು ಇವುಗಳ ಪದಪ್ರದಾನ ಸಮಾರಂಭ ತೆಂಕಿಲ ಒಕ್ಕಲಿಗ ಸಮುದಾಯ ಸೇವಾ ಸಂಘದ ಚುಂಚಶ್ರೀ ಸಭಾಭವನದಲ್ಲಿ  ಜರಗಿತು.

ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರ ಪದಪ್ರದಾನ ಸಮಾರಂಭ ಜರಗಿತು.

ಪದಪ್ರದಾನ ನೆರವೇರಿಸಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ. ಮಾತನಾಡಿ, ಇಂದು ಸಂಘ ಸಂಸ್ಥೆಗಳಲ್ಲಿ ಯುವಕರ ಪಾತ್ರ ಕಡಿಮೆಯಾಗುತ್ತಿದೆ. ಹಿಂದೆಲ್ಲಾ ರೋಟರ‍್ಯಾಕ್ಟ್ ಕ್ಲಬ್, ಯುವಕ ಮಂಡಲಗಳಂತಹ ಸಂಸ್ಥೆಗಳು ಪ್ರತಿ ಊರಿನಲ್ಲಿಯೂ ಸಕ್ರೀಯವಾಗಿದ್ದು, ಸಮಾಜಮುಖಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿತ್ತು. ಮುಂದೆಯೂ ಯುವಕರು ಇಂತಹ ಸಂಸ್ಥೆಗಳ ಮೂಲಕ ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.

ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರ ಪದಪ್ರದಾನ.

ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪದಸ್ವೀಕಾರ ಮಾಡಿದ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ಡಿಆರ್‌ಸಿಸಿ ರತ್ನಾಕರ್ ರೈ ಸಿ., ಕೆನರಾ ವಲಯದ ವಲಯ ಪ್ರತಿನಿಧಿ ಸಿಯಾಕ್ ಕೆ.ಎಂ., ರೋಟರಿ ಕ್ಲಬ್‌ನ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ ಅತಿಥಿಯಾಗಿದ್ದರು. ಪುತ್ತೂರು ರೋಟರ‍್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ನಿರ್ಗಮಿತ ಸಭಾಪತಿ ಹರೀಶ್ ಶಾಂತಿ, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾಪತಿ ಪ್ರೀತಾ ಹೆಗ್ಡೆ, ನಿರ್ಗಮಿತ ಕಾರ್ಯದರ್ಶಿ ಪುರುಷೋತ್ತಮ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಎರಡೂ ಕ್ಲಬ್‌ನ 2021-22ನೇ ಸಾಲಿನ ನಿರ್ಗಮಿತ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಭಾಪತಿಗಳನ್ನು ಸನ್ಮಾನಿಸಲಾಯಿತು. ನಂತರ ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭ ಜರಗಿತು.

ಪದಪ್ರದಾನ ನೆರವೇರಿಸಿ ಉಮಾನಾಥ ಪಿ.ಬಿ. ಮಾತನಾಡಿದರು.

ಸಂಘ ಸೇವಾ ವಿಭಾಗದಡಿ ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ಗೆ ಹೊಸದಾಗಿ 7 ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಸಮುದಾಯ ಸೇವಾ ವಿಭಾಗದಡಿ ಬನ್ನೂರಿನ ಕರ್ಮಲ ನಿವಾಸಿ ದಿವಂಗತ ಸುರೇಶ್ ಅವರ ಪತ್ನಿ ಸವಿತಾ ಎಂಬವರಿಗೆ ಹೊಲಿಗೆ ಯಂತ್ರವನ್ನು ದಾನಿಗಳ ಸಹಕಾರದಿಂದ ಕೊಡುಗೆಯಾಗಿ ನೀಡಲಾಯಿತು. ವೃತ್ತಿ ಸೇವಾ ವಿಭಾಗದಡಿ ಡಾ. ಅಶೋಕ್ ಪಡಿವಾಳ್ ಅವರನ್ನು ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಸೇವಾ ವಿಭಾಗದಡಿ ರೋಟರ‍್ಯಾಕ್ಟ್ ಕ್ಲಬ್‌ಗಳ ಮೊದಲ ಪಿಎಚ್‌ಎಫ್ ಆಗಿರುವ ಡೆರಿಲ್ ಸ್ಟೀವನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಪ್ರಗತಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರನ್ನು ಹಾಗೂ 2022-23ನೇ ಸಾಲಿನಲ್ಲಿ ಜಿಲ್ಲಾ ಮಂಡಳಿಗೆ ಆಯ್ಕೆಯಾದ ಕ್ಲಬ್ ಸದಸ್ಯರನ್ನು ಗೌರವಿಸಲಾಯಿತು.

ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಹಿಮಾಂಶು ಶರ್ಮಾ ಸ್ವಾಗತಿಸಿ, ಪುತ್ತೂರು ರೊಟರ‍್ಯಾಕ್ಟ್ ಕ್ಲಬ್‌ನ ನೂತನ ಕಾರ್ಯದರ್ಶಿ ಮಹೇಶ್‌ಚಂದ್ರ ವಂದಿಸಿದರು. ಸಮಾಜ ಸೇವಾ ನಿರ್ದೇಶಕ ಶಶಿಧರ್ ಕೆ. ಮಾವಿನಕಟ್ಟೆ, ಉಪಾಧ್ಯಕ್ಷ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

ಫಲಾನುಭವಿಯೋರ್ವರಿಗೆ ಹೊಲಿಗೆ ಯಂತ್ರವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here