ಶಾಸಕರಿಂದ ಅಕ್ರಮ – ಸಕ್ರಮ ಯೋಜನೆಯ ಸಾಗುವಳಿ ಚೀಟಿ ವಿತರಣೆ

0
  • 163ಮಂದಿಗೆ ಸಾಗುವಳಿ ಚೀಟಿ ವಿತರಣೆ

ಪುತ್ತೂರು: ಅಕ್ರಮ – ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ 94 ಸಿ ಹಾಗೂ 94 ಸಿಸಿಯ ಹಕ್ಕುಪತ್ರ ವಿತರಣೆಯು ಜು.11ರಂದು ಪುರಭವನದಲ್ಲಿ ನಡೆಯಿತು.

 


ಸಾಗುವಳಿ ಚೀಟಿ ವಿತರಿಸಿದ ಶಾಸಕ‌ ಸಂಜೀವ ಮಠಂದೂರು ಮಾತನಾಡಿ, ಸರಕಾರ ಕಂದಾಯ ಇಲಾಖೆಯನ್ನೇ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಸರಕಾರ ಮಾಡುತ್ತಿದೆ. ಇದರ ಭಾಗವಾಗಿ ಜಿಲ್ಲಾಧಿಕಾರಿಗಳೇ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಗ್ರಾಮ ಒನ್ ಮೂಲಕ ಗ್ರಾಮ ಮಟ್ಟದಲ್ಲಿ ಸರಕಾರದ ವ್ಯವಸ್ಥೆಗಳನ್ನು ಮಾಡಿಕೊಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಸಾಗುವಳಿ ಚೀಟಿ ಪಡೆದವರು ಆ ಭೂಮಿ ಇರುವ ತನಕ ಅನುಭೋಗಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಕ್ರಮ -ಸಕ್ರಮಕ್ಕೆ ಸಂಬಂಧಪಟ್ಟಂತೆ ಫಾರ್ಮ್ ನಂ.57 ರಲ್ಲಿ ಅರ್ಜಿ ಸಲ್ಲಿಕೆಯ ಅವಕಾಶವನ್ನು 2023ರ ಮೇ ಕೊನೆಯ ತನಕ ವಿಸ್ತರಿಸಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಹಾಲಿ ನಿರೀಕ್ಷೆ ಮೀರಿ ಮಳೆ ಸುರಿಯುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಎನ್.ಡಿ.ಆರ್.ಎಫ್. ನಿಂದ ಪರಿಹಾರ ನೀಡಲು ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೃಷಿ ಹಾನಿಗೂ ಪರಿಹಾರ ನೀಡಲು ಬದ್ಧರಿದ್ದೇವೆ ಎಂದು ಹೇಳಿದ ಶಾಸಕರು, 94 ಸಿಸಿ ಯಲ್ಲಿ 2.75ಎಕ್ರೆ ಜಾಗ ನೀಡುವಂತೆ ಬೇಡಿಕೆ ಇದ್ದು, ಈ ಕುರಿತು ಕಂದಾಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

163ಮಂದಿಗೆ ಸಾಗುವಳಿ ಚೀಟಿ ವಿತರಣೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 163 ಮಂದಿಗೆ ಅಕ್ರಮ -ಸಕ್ರಮ ಸಾಗುವಳಿ ಚೀಟಿಯನ್ನು ನಕ್ಷೆ ಸಮೇತ ವಿತರಿಸಲಾಯಿತು. 7 ಮಂದಿಗೆ 94 ಸಿ. ಹಾಗೂ94ಸಿಸಿ ಹಕ್ಕುಪತ್ರವನ್ನು ಶಾಸಕರು ವಿತರಿಸಿದರು.

ಅಕ್ರಮ – ಸಕ್ರಮ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ತಹಶೀಲ್ದಾರ್ ನಿಸರ್ಗಪ್ರಿಯ, ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್ ಬಬ್ಬಿಲಿ ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ದಯಾನಂದ್ ಡಿ.ಟಿ. ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here