ಪುತ್ತೂರು : ಶಾಂತಿಗೋಡು ಗ್ರಾಮದ ಕಕ್ವೆ ನಿವಾಸಿ ದಿ.ಮುತ್ತಪ್ಪ ಗೌಡರ ಪತ್ನಿ ನಾಟಿವೈದ್ಯೆ, ಶತಾಯುಷಿ ವೀರಮ್ಮ (100ವ.)ರವರು ವಯೋಸಹಜ ಅಸೌಖ್ಯದಿಂದ ಜು.11ರಂದು ಸ್ವಗೃಹದಲ್ಲಿ ನಿದನರಾದರು. ಇವರು ಹಲವು ಖಾಯಿಲೆಗಳಿಗೆ ನಾಟಿ ಮದ್ದು ನೀಡುತ್ತಿದ್ದರು. ಅಲ್ಲದೆ ನೂರಕ್ಕೂ ಅಧಿಕ ಗರ್ಭಿಣಿಯರಿಗೆ ಹೆರಿಗೆಗಳನ್ನು ಮಾಡಿಸಿದ್ದರು. ಮೃತರು ಪುತ್ರರಾದ ಶೀನಪ್ಪ ಗೌಡ, ಪೆರ್ನು ಗೌಡ, ಸುಂದರ ಗೌಡ, ಸದಾಶಿವ ಗೌಡ, ಪುತ್ರಿಯರಾದ ಕೂಸಮ್ಮ, ಲಕ್ಷ್ಮಿ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.