ಲಂಚದ ಹಣ ವಾಪಸ್ ಕೊಡಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿಯ ಹೋರಾಟ

0

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಸುದ್ದಿ ಬಿಡುಗಡೆಯ ಮೂಲಕ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಅಭಿಯಾನದ ಸಂದರ್ಭ, ‘ಲಂಚ ಪಡೆದವರಿಂದ ಅದನ್ನು ವಾಪಸ್ ಕೊಡಿಸುವ ಕಾರ್ಯವನ್ನು ಜನತೆ ಮಾಡಬೇಕು’ ಎಂದು ಸಂಪಾದಕೀಯದಲ್ಲೂ ಬರೆಯಲಾಗಿತ್ತು. ಜನಜಾಗೃತಿ ಸಭೆಗಳಲ್ಲೂ ಹೇಳಲಾಗುತ್ತಿತ್ತು. ಈ ಮಾದರಿಯನ್ನು ಬೆಂಗಳೂರಿನಲ್ಲಿ ರವಿಕೃಷ್ಣ ರೆಡ್ಡಿಯವರ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿಯು ಅಳವಡಿಸಿಕೊಂಡಿದೆ. ಮರಣ ದೃಢಪತ್ರಕ್ಕಾಗಿ ಯುವಕನೊಬ್ಬನಿಂದ 500 ರೂ. ಪಡೆದಿದ್ದ ಅಧಿಕಾರಿಯೊಬ್ಬರಿಂದ ಆ ಹಣವನ್ನು ವಾಪಸ್‌ಕೊಡಿಸುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ.

ತನ್ನ ಅಜ್ಜನ ಮರಣ ದೃಢಪತ್ರಕ್ಕಾಗಿ ಯುವಕನೊಬ್ಬ ಅರ್ಜಿ ಹಾಕಿರುತ್ತಾನೆ. ಆ ದೃಢಪತ್ರಕ್ಕೆ ನಗರ ಪಾಲಿಕೆಯ ಕಚೇರಿಯೊಂದರ ಸಿಬ್ಬಂದಿ ಆ ಯುವಕನಿಂದ 500 ರೂ. ಪಡೆದುಕೊಳ್ಳುತ್ತಾರೆ. ಈ ವಿಚಾರವನ್ನು ಯುವಕ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿಯ ಸಂಚಾಲಕ ರವಿಕೃಷ್ಣ ರೆಡ್ಡಿಯವರಿಗೆ ತಿಳಿಸುತ್ತಾನೆ. ಆ ಯುವಕ ನನ್ನು ಕರೆದುಕೊಂಡು ಆ ಕಚೇರಿಗೆ ಬಂದ ರೆಡ್ಡಿಯವರು ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಳ್ಳುತ್ತಾರಲ್ಲದೆ, ಯುವಕನಿಂದ ಪಡೆದ ಲಂಚದ ಹಣವನ್ನು ಹಿಂತಿರುಗಿಸುವಂತೆ ತಾಕೀತು ಮಾಡುತ್ತಾರೆ. ಆ ಅಧಿಕಾರಿ ಮರು ಮಾತಾಡದೆ ತನ್ನ ಪರ್ಸ್ ತೆಗೆದು ಅದರಿಂದ 500 ರೂ. ಲೆಕ್ಕ ಮಾಡಿ ಯುವಕನಿಗೆ ಹಿಂತಿರುಗಿಸುತ್ತಾರೆ. “5 ರೂಪಾಯಿಯಲ್ಲಿ ಆಗುವ ಕೆಲಸಕ್ಕೆ 500 ರೂ ಕೊಟ್ಟಿದ್ದೇಕೆಂದು ಆ ಯುವಕನಿಗೆ ಕೂಡಾ ರವಿಕೃಷ್ಣ ರೆಡ್ಡಿಯವರು ಬುದ್ಧಿವಾದ ಹೇಳುತ್ತಾರೆ. ಲಂಚದ ಹಣವನ್ನು ವಾಪಸ್ ಕೊಡಿಸುವ ಕಾರ್ಯ ಪ್ರತಿ ಊರುಗಳಲ್ಲಿ ಸಾರ್ವಜನಿಕರೇ ಮಾಡಿದಲ್ಲಿ ಶಾಶ್ವತವಾಗಿ ಲಂಚ ನಿಲುಗಡೆಯಾಗುತ್ತದೆ. ಕೊಟ್ಟವರು ಹೇಳಿಕೊಳ್ಳಲು ಮುಂದೆ ಬರಬೇಕು. ಸಾರ್ವಜನಿಕರು ಲಂಚ ಕೋರ ಅಽಕಾರಿಯನ್ನು ಕೇಳುವ ಧೈರ್ಯ ತೋರಬೇಕು.

LEAVE A REPLY

Please enter your comment!
Please enter your name here