ವಿಟ್ಲದಲ್ಲಿ ಆರ್‌ಕ್ಯೂಬ್ ಚೆಸ್ ಆಕಾಡೆಮಿಯಿಂದ ಚೆಸ್ ತರಬೇತಿ ತರಗತಿ ಉದ್ಘಾಟನೆ

0

ಪುತ್ತೂರು : ಆರ್‌ಕ್ಯೂಬ್ ಚೆಸ್ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಚೆಸ್ ತರಬೇತಿಯ ತರಗತಿಗಳ ಉದ್ಘಾಟನಾ ಸಮಾರಂಭ ವಿಟ್ಲದಲ್ಲಿರುವ ಶ್ರೀವಿದ್ಯಾ ಟ್ಯೂಷನ್ ಸೆಂಟರ್‌ನಲ್ಲಿ ನಡೆಯಿತು.

ಜನತಾ ಪ.ಪೂ ಕಾಲೇಜಿನ ಜೀವಶಾಸ್ತç ಉಪನ್ಯಾಸಕ ರವಿಕುಮಾರ್ ಆರ್.ಎಸ್. ಭಾಗವಹಿಸಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ ಚೆಸ್ ಆಟದಿಂದ ಮಾನಸಿಕ ಸಾಮರ್ಥ್ಯಗಳಾದ ಶಿಸ್ತು, ತಾಳ್ಮೆ, ಸಹನೆ, ಆತ್ಮವಿಶ್ವಾಸ, ದೃಢತೆ, ನೆನಪಿನ ಶಕ್ತಿ, ತಾರ್ಕಿಕ ಅಲೋಚನೆಗಳ ಬೆಳವಣಿಯಾಗಲಿದೆ ಎಂದರು. ಅಲ್ಲದೆ ಚಿಕ್ಕ ವಯಸ್ಸಿಗೇ ಪ್ರಾಥಮಿಕ ಶಾಲಾ ಹಂತದಲ್ಲಿ ಚೆಸ್ ಆಟಕ್ಕೆ ಪ್ರಾಶಸ್ತ್ಯ ಕೊಡುವುದು ಉತ್ತಮ. ಮಕ್ಕಳಿಗೆ ಏನನ್ನು ಯೋಚಿಸಬೇಕು ಎಂಬುದನ್ನು ಕಲಿಸುವ ಬದಲು ಹೇಗೆ ಯೋಚಿಸಬೇಕು ಎಂಬುದನ್ನು ಚೆಸ್ ಕಲಿಸುತ್ತದೆ ಎಂದರು. ಶ್ರೀವಿದ್ಯಾ ಟ್ಯೂಷನ್ ಸೆಂಟರ್‌ನ ಮುಖ್ಯಸ್ಥೆ ಶ್ವೇತಾ ಕುಮಾರಿ ಜಿ. ಉಪಸ್ಥಿತರಿದ್ದರು. ಮಾ| ವೇದಿಕ್ ಆರ್. ಪ್ರಾರ್ಥಿಸಿದರು. ಆರ್‌ಕ್ಯೂಬ್ ಆಕಾಡೆಮಿಯ ಉಪನ್ಯಾಸಕ ರವಿಪ್ರಸಾದ ಬಿ.ಜಿ. ಸ್ವಾಗತಿಸಿ, ರೋಹಿತ್ ಕುಮಾರ್ ವಂದಿಸಿದರು. ಚೆಸ್ ತರಬೇತಿಗೆ ಸೇರಲಿಚ್ಛಿಸಿವವರು ಮೊಬೈಲ್ ನಂಬರ್ 9880898297, 9964498926 ಸಂಪರ್ಕಿಸುವAತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here